ನವರಾತ್ರಿಯ ಆರನೇ ದಿನ ಕೆಂಪು ಬಣ್ಣ ಶುಭ ಎನ್ನುವುದು ನಂಬಿಕೆ. ಇದಕ್ಕೆ ತಕ್ಕಂತೆ ಐಶ್ವರ್ಯಾ ರೈ ಧರಿಸಿದ ಈ ಮಾದರಿಯ ದಿರಿಸನ್ನು ಧರಿಸಿ ನೀವು ಹಬ್ಬವನ್ನು ಮತ್ತಷ್ಟು ಸಂತಸದಿಂದ ಆಚರಿಸಬಹುದು.
ಆಲಿಯಾ ಭಟ್ ಧರಿಸಿರುವ ಕುರ್ತಾ ಹಾಗೂ ಶರಾರಾ ಮಾದರಿಯ ಈ ದಿರಿಸನ್ನು ಕೂಡ ನೀವು ಧರಿಸಬಹುದು.
ಕತ್ರಿನಾ ಕೈಫ್ ಧರಿಸಿರುವ ಸೀರೆ ಮಾದರಿಯ ಈ ಹೊಸ ಬಗೆಯ ಉಡುಪು ಕೂಡ ಹಬ್ಬದ ಸಂಭ್ರಮದಲ್ಲಿ ಜೊತೆಯಾಗಬಹುದು.
ನಟಿ ತಾರಾ ಸುತಾರಿಯಾ ಧರಿಸಿರುವ ಸಾಂಪ್ರದಾಯಿಕ ಅನಾರ್ಕಲಿ ಕುರ್ತಾವನ್ನು ಕೂಡ ನೀವು ಈ ದಿನ ಪ್ರಯತ್ನಿಸಬಹುದು.
ಕರೀನಾ ಕಪೂರ್ ಹಾಗೂ ಸೈಫ್ ಜೊತೆಯಾಗಿ ನಿಂತಿರುವ ಈ ಚಿತ್ರದಲ್ಲಿ, ಕರೀನಾ ಧರಿಸಿರುವ ಕುರ್ತಾ ಕೂಡ ಹಬ್ಬದ ಸಂಭ್ರಮಕ್ಕೆ ಬಹಳ ಒಪ್ಪುತ್ತದೆ.
ಹಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಸಕ್ರಿಯವಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಧರಿಸಿರುವ ಈ ಮಾಸದರಿಯ ಲೆಹಂಗಾ ಕೂಡ ಹಬ್ಬಕ್ಕೆ ಹೇಳಿ ಮಾಡಿಸಿದ ದಿರಿಸಾಗಿದೆ.
ಸಂಪೂರ್ಣವಾಗಿ ಕೆಂಪು ಬಟ್ಟೆಯನ್ನು ಧರಿಸುವ ಮನಸ್ಸಿಲ್ಲದಿದ್ದರೆ, ದೀಪಿಕಾ ಪಡುಕೋಣೆ ಧರಿಸಿರುವ ಸ್ಟೈಲ್ನಲ್ಲಿ ನಿಮ್ಮದೇ ಮಾದರಿಯ ಹೊಸ ಸ್ಟೈಲ್ನಲ್ಲಿ ಕೂಡ ನೀವು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬಹುದು. ಈ ಮೂಲಕ ನವರಾತ್ರಿಯ ಆರನೇ ದಿನದಂದು ಕೆಂಪು ಬಣ್ಣದ ದಿರಿಸನ್ನು ಧರಿಸಿ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳಬಹುದು.