Field Marshal Manekshaw: ಭಾರತೀಯ ಸೇನೆ ಎಂದೂ ಮರೆಯಲಾಗದ ಮಾಣಿಕ್ಯ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಜೀವನಗಾಥೆ

| Updated By: ಆಯೇಷಾ ಬಾನು

Updated on: Apr 03, 2023 | 2:52 PM

ಭಾರತೀಯ ಸೇನೆಯ ಅತ್ಯಂತ ಉನ್ನತ ಪದವಿಗಳನ್ನು ಅಲಂಕರಿಸಿದ ಅಧಿಕಾರಿಗಳಲ್ಲಿ ಒಬ್ಬರಾಗಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ್ದ ಮಾಣಿಕ್ ಶಾ ಅವರಿಗೆ ಇಂದು ಜನ್ಮದಿನಾಚರಣೆ.

1 / 11
ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಅವರು "ಸ್ಯಾಮ್ ಬಹಾದೂರ್" ಎಂದೂ ಹೆಸರಾಗಿದ್ದವರು. ಭಾರತೀಯ ಸೇನೆಯ ಅತ್ಯಂತ ಉನ್ನತ ಪದವಿಗಳನ್ನು ಅಲಂಕರಿಸಿದ ಅಧಿಕಾರಿಗಳಲ್ಲಿ ಅವರೂ ಒಬ್ಬರಾಗಿದ್ದು, ನಾಲ್ಕು ದಶಕಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ್ದರು. ಉನ್ನತ ವ್ಯಕ್ತಿತ್ವ ಹೊಂದಿದ್ದ ಮಾಣಿಕ್ ಶಾ ಅವರು ತಮ್ಮ ಕಾರ್ಯತಂತ್ರಗಳಿಂದ, ನಾಯಕತ್ವದ ಗುಣಗಳಿಂದ ತಮ್ಮ ಸೈನಿಕರಿಂದ ಮಾತ್ರವಲ್ಲದೆ, ಜನ ಸಾಮಾನ್ಯರಿಂದಲೂ ಅಪಾರ ಗೌರವ, ಮೆಚ್ಚುಗೆಗೆ ಪಾತ್ರರಾಗಿದ್ದವರು.

2 / 11
ಪಂಜಾಬಿನ ಅಮೃತಸರದಲ್ಲಿ ಎಪ್ರಿಲ್ 3, 1914ರಂದು ಆರು ಮಕ್ಕಳ ಧಾರ್ಮಿಕ ಪಾರ್ಸಿ ಕುಟುಂಬದಲ್ಲಿ ಐದನೆಯವರಾಗಿ ಜನಿಸಿದ ಮಾಣಿಕ್ ಶಾ ಅವರ ತಂದೆ ವೈದ್ಯರಾಗಿದ್ದು, ತಾಯಿ ಓರ್ವ ಗೃಹಿಣಿಯಾಗಿದ್ದರು. ಅವರ ತಾತ ಪಾರ್ಸಿ ಅರ್ಚಕರಾಗಿದ್ದರು. 22ನೇ ವಯಸ್ಸಿನಲ್ಲಿ ಮಾಣಿಕ್ ಶಾ ಅವರು ಬ್ರಿಟಿಷ್ ಇಂಡಿಯನ್ ಆರ್ಮಿಗೆ ಸೆಕೆಂಡ್ ಲೆಫ್ಟಿನೆಂಟ್ ಆಗಿ ಸೇರ್ಪಡೆಯಾದರು. ಅವರನ್ನು ಇಂದು ಗೊರ್ಖಾ ರೈಫಲ್ಸ್ ಎಂದು ಕರೆಯಲ್ಪಡುವ, ಅಂದಿನ 12ನೇ ಫ್ರಾಂಟಿಯರ್ ಫೋರ್ಸ್ ರೆಜಿಮೆಂಟ್‌ಗೆ ನೇಮಕಗೊಳಿಸಲಾಯಿತು.

3 / 11
ಮಾಣಿಕ್ ಶಾ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬರ್ಮಾದಲ್ಲಿ ಹೋರಾಡಿ, ಎರಡು ಬಾರಿ ಗಾಯಗೊಂಡರು. ಅವರಿಗೆ ಶೌರ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. 1947ರಲ್ಲಿ ಭಾರತ ಸ್ವತಂತ್ರಗೊಂಡ ಬಳಿಕ ಮಾಣಿಕ್ ಶಾ ಅವರನ್ನು ಭಾರತೀಯ ಸೇನೆಗೆ ವರ್ಗಾವಣೆಗೊಳಿಸಲಾಯಿತು. 1948ರಲ್ಲಿ ಅವರನ್ನು ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಪದೋನ್ನತಿಗೊಳಿಸಲಾಯಿತು. ಅವರು ಹೈದರಾಬಾದ್ ನಿಜಾಮರ ಸಾಮ್ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಲು ನಡೆಸಿದ ಹೈದರಾಬಾದ್ ಪೊಲೀಸ್ ಆ್ಯಕ್ಷನ್‌ನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು.

4 / 11
1947-48ರ ಭಾರತ ಪಾಕ್ ಯುದ್ಧದಲ್ಲಿ ಭಾಗವಹಿಸಿದ ಮಾಣಿಕ್ ಶಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಬಟಾಲಿಯನ್ ನೇತೃತ್ವ ವಹಿಸಿದ್ದರು. 1962ರ ಭಾರತ-ಚೀನಾ ಯುದ್ಧದಲ್ಲಿ ಮಾಣಿಕ್ ಶಾ ಅವರ ಮಿಲಿಟರಿ ಕಾರ್ಯತಂತ್ರದ ಪರಿಚಯವಾಯಿತು. ಆ ಸಂದರ್ಭದಲ್ಲಿ ಅವರು ಮಿಲಿಟರಿ ಕಾರ್ಯಾಚರಣೆ ನಿರ್ದೇಶಕರಾಗಿದ್ದರು. ಅವರು ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ರಕ್ಷಣಾ ಸಚಿವ ಕೃಷ್ಣ ಮೆನನ್ ಅವರಿಗೆ ಭಾರತದ ಯುದ್ಧ ಸಿದ್ಧತೆಯ ಕೊರತೆಯ ಕುರಿತು ಎಚ್ಚರಿಕೆ ನೀಡಿದ್ದರಾದರೂ, ಅವರ ಎಚ್ಚರಿಕೆಯನ್ನು ಕಡೆಗಣಿಸಲಾಯಿತು.

5 / 11
ಆ ಯುದ್ಧದಲ್ಲಿ ಭಾರತ ಚೀನಾದೆದುರು ದಯನೀಯ ಸೋಲು ಕಂಡ ಬಳಿಕ ಮಾಣಿಕ್ ಶಾ ಅವರನ್ನು ಮೇಜರ್ ಜನರಲ್ ಆಗಿ ಪದೋನ್ನತಿಗೊಳಿಸಲಾಯಿತು. ಬಳಿಕ ಅವರನ್ನು ಪೂರ್ವ ಕಮಾಂಡಿನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಎಂದು ನೇಮಿಸಲಾಯಿತು. 1965ರ ಭಾರತ-ಪಾಕಿಸ್ತಾನ ಯುದ್ಧ ಮಾಣಿಕ್ ಶಾ ಅವರ ನಾಯಕತ್ವದ ಸಾಮರ್ಥ್ಯವನ್ನು ತೆರೆದಿಟ್ಟಿತು. ಅವರನ್ನು 1969ರಲ್ಲಿ ಭಾರತೀಯ ಸೇನಾ ಮುಖ್ಯಸ್ಥರಾಗಿ ನೇಮಿಸಲಾಯಿತು.

6 / 11
1971ರಲ್ಲಿ ಅವರು ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಭಾರತಕ್ಕೆ ನಿರ್ಣಾಯಕ ಗೆಲುವು ತಂದಿತ್ತರು. ಈ ಯುದ್ಧದಲ್ಲಿ ಪಾಕಿಸ್ತಾನದ ಸೋಲು ನೂತನ ದೇಶ ಬಾಂಗ್ಲಾದೇಶದ ನಿರ್ಮಾಣಕ್ಕೆ ಹಾದಿ ಮಾಡಿಕೊಟ್ಟಿತು. ಭಾರತೀಯ ಸೇನೆಗೆ ಮಾಣಿಕ್ ಶಾ ಅವರ ಕೊಡುಗೆಗಳು ಅಪಾರವಾಗಿವೆ. ಅವರ ಕಾರ್ಯತಂತ್ರದ ಯೋಜನೆಗಳು, ಸೇನಾಪಡೆಗಳನ್ನು ಉತ್ತೇಜಿಸುವ, ಪ್ರೋತ್ಸಾಹಿಸುವ ಸಾಮರ್ಥ್ಯದ ಕಾರಣದಿಂದ ಅವರು ಯುದ್ಧದ ಅಲೆಯನ್ನು ಭಾರತದ ಪರವಾಗಿ ಬೀಸುವಂತೆ ಮಾಡಿದರು. ಅವರೋರ್ವ ಕಾರ್ಯತಂತ್ರ ನಿಪುಣರಾಗಿದ್ದು, ತನ್ನ ಸೇನಾಪಡೆಗಳನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿದ್ದರು.

7 / 11
ಮಾಣಿಕ್ ಶಾ ಅವರೊಬ್ಬ ವರ್ಚಸ್ವಿ ನಾಯಕರಾಗಿದ್ದು, ಅವರನ್ನು ಎಲ್ಲ ಸೈನಿಕರೂ ಇಷ್ಟಪಡುತ್ತಿದ್ದರು, ಗೌರವಿಸುತ್ತಿದ್ದರು. ಅವರು ಸೈನಿಕರೊಂದಿಗೆ ಆಗಾಗ ಮಾತುಕತೆ ನಡೆಸಿ, ಅವರ ಕಷ್ಟ ಸುಖಗಳನ್ನು ತಿಳಿದುಕೊಂಡು ಅವರಿಗೆ ನೈತಿಕ ಬೆಂಬಲ ನೀಡುತ್ತಿದ್ದರು. ಅವರು ತನ್ನ ಬುದ್ಧಿವಂತಿಕೆ ಮತ್ತು ಹಾಸ್ಯಪ್ರಜ್ಞೆಗೂ ಹೆಸರಾಗಿದ್ದು, ಅವರ ಸಾಕಷ್ಟು ಹೇಳಿಕೆಗಳು ಇಂದಿಗೂ ಮಿಲಿಟರಿ ವಲಯದಲ್ಲಿ ಬಳಕೆಯಾಗುತ್ತಿವೆ.

8 / 11
ಅವರ ಮಾತುಗಳಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಅತ್ಯಂತ ಹೆಚ್ಚಾಗಿ ನೆನಪಿಸಿಕೊಳ್ಳುವ ಮಾತೆಂದರೆ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಭಾರತೀಯ ಸೇನೆ ಪಾಕಿಸ್ತಾನದೊಡನೆ ಯುದ್ಧಕ್ಕೆ ಹೋಗಲು ಸಿದ್ಧವಾಗಿದೆಯೇ ಎಂದು ಪ್ರಶ್ನಿಸಿದಾಗ ಅವರು ಹೇಳಿದ ಮಾತು. ಆ ಪ್ರಶ್ನೆಗೆ ಮಾಣಿಕ್ ಶಾ ಅವರು "ಐ ಆಮ್ ಆಲ್ವೇಸ್ ರೆಡಿ ಸ್ವೀಟಿ!" ಎಂದಿದ್ದರು ಎಂದು ವರದಿಗಳು ಹೇಳಿದ್ದವು! ಈ ಮಾತು ಅವರ ಕಾಲಹರಣವಲ್ಲದ, ನಾಯಕತ್ವ ಗುಣಕ್ಕೆ ಕೈಗನ್ನಡಿಯೂ ಆಗಿತ್ತು.

9 / 11
ಮಾಣಿಕ್ ಶಾ ಅವರ ಮಿಲಿಟರಿ ಅನುಭವ ಮತ್ತು ನಾಯಕತ್ವದ ಗುಣಗಳಿಗಾಗಿ ಅವರಿಗೆ ಹಲವಾರು ಪುರಸ್ಕಾರಗಳು ಲಭಿಸಿವೆ. ಅವರಿಗೆ 1972ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರ ಪದ್ಮ ವಿಭೂಷಣ ನೀಡಿ ಗೌರವಿಸಲಾಯಿತು. ಅವರಿಗೆ 1968ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು. 1973ರಲ್ಲಿ ಅವರು ಭಾರತೀಯ ಸೇನೆಯ ಫೀಲ್ಡ್ ಮಾರ್ಷಲ್ ಆಗಿ ನೇಮಕಗೊಂಡು, ಆ ಪದವಿ ಪಡೆದ ಭಾರತದ ಮೊದಲ ಸೇನಾಧಿಕಾರಿ ಎನಿಸಿಕೊಂಡರು.

10 / 11
1973ರಲ್ಲಿ ಸೇನೆಯಿಂದ ನಿವೃತ್ತಿ ಹೊಂದಿದ ಬಳಿಕ ಮಾಣಿಕ್ ಶಾ ಅವರು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಹಾಗೂ ಕೀನ್ಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದರು. ಅವರು ಹಲವು ಸೇವಾ ಸಂಸ್ಥೆಗಳೊಡನೆ ಗುರುತಿಸಿಕೊಂಡು, ತನ್ನ ಮಾತುಕತೆ, ಭಾಷಣಗಳಿಂದ ಯುವ ತಲೆಮಾರಿನ ಸೈನಿಕರಿಗೆ ಸ್ಫೂರ್ತಿ ತುಂಬುತ್ತಿದ್ದರು. ಮುಂದಿನ ವರ್ಷಗಳಲ್ಲಿ ಮಾಣಿಕ್ ಶಾ ಅವರು ಓರ್ವ ರಾಷ್ಟ್ರೀಯ ಹೆಮ್ಮೆ ಎನಿಸಿಕೊಂಡರು. ಅವರ ಹೇಳಿಕೆಗಳು, ಸಾಹಸಗಾತೆಗಳು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

11 / 11
ಭಾರತೀಯ ಸೇನೆಗೆ ಅವರ ಕೊಡುಗೆಗಳು, ಅವರ ಹಾಸ್ಯಪ್ರಜ್ಞೆ ಅವರನ್ನು ಭಾರತೀಯ ಸೈನಿಕರಿಗೆ ಮಾತ್ರವಲ್ಲದೆ, ಜನಸಾಮಾನ್ಯರಿಗೂ ಮೆಚ್ಚಿನವರನ್ನಾಗಿಸಿತು. ಜೂನ್ 27, 2008ರಂದು ಮಾಣಿಕ್ ಶಾ ಅವರು ತನ್ನ 94ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಇಂದಿಗೂ ಅವರ ಧೈರ್ಯ, ನಾಯಕತ್ವದ ಹಿರಿಮೆ ಮುಂದುವರಿದಿದೆ. ಮಾಣಿಕ್ ಶಾ ಅವರು ಇಂದು ಭಾರತೀಯ ಸೇನೆಯಲ್ಲಿ ಓರ್ವ ದಂತಕತೆ ಎನಿಸಿಕೊಂಡಿದ್ದಾರೆ. ಅವರ ಧೈರ್ಯ, ಸಾಹಸ, ನಾಯಕತ್ವ ಗುಣಗಳು ಹೊಸ ತಲೆಮಾರಿನ ಸೈನಿಕರಿಗೂ ಸ್ಫೂರ್ತಿಯ ಚಿಲುಮೆಯಾಗಿವೆ. ಅವರ ಜೀವನಗಾಥೆ ಭಾರತೀಯ ಸೈನಿಕರ ಅದಮ್ಯ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಅವರು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯಾಗಿದ್ದಾರೆ. (ಮಾಹಿತಿ: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Published On - 2:52 pm, Mon, 3 April 23