ಈ ದೇವಸ್ಥಾನಗಳಲ್ಲಿ ನೂಡಲ್ಸ್, ಫ್ರೈಡ್ ರೈಸ್, ವೈನ್, ಡಿವಿಡಿಗಳೇ ಪ್ರಸಾದ; ಅಚ್ಚರಿ ಅನ್ನಿಸಿದ್ರು ನಿಜ
ಭಾರತ ದೇಶ ವಿಶಿಷ್ಟತೆ, ವೈವಿಧ್ಯತೆಯ ಬೀಡು. ಇಲ್ಲಿ ಎಲ್ಲಾ ರೀತಿಯ ದೇವರಿಗೆ ಪೂಜೆ ಸಲ್ಲಿಸಲಾಗುತ್ತೆ. ಆದ್ರೆ ಅಚ್ಚರಿ ಎನ್ನಿಸೋದು ದೇವರು ಒಂದೇ ಆದ್ರೂ ಒಂದೊಂದು ಕಡೆ ಒಂದೊಂದು ರೀತಿಯ ಪದ್ಧತಿ, ಆಚರಣೆ ನೋಡಲಿಕ್ಕೆ ಸಿಗುತ್ತದೆ. ಸಾಮಾನ್ಯವಾಗಿ ದೇವಸ್ಥಾನದಲ್ಲಿ ಸಿಗುವ ಪ್ರಸಾದಕ್ಕಾಗಿಯೇ ದೇವಸ್ಥಾನಕ್ಕೆ ಹೋಗುವ ಅದೆಷ್ಟೋ ಜನರನ್ನು ನಾವು ನೋಡಬಹುದು. ಅದರಂತೆಯೇ ವಿವಿಧ ದೇವಾಲಯಗಳಲ್ಲಿ ವಿವಿಧ ರೀತಿಯ ಪ್ರಸಾದವನ್ನು ಹಂಚಲಾಗುತ್ತೆ. ಕೆಲವೊಂದು ದೇವಾಲಯಗಳಲ್ಲಿ ಕಡಲೆ, ಹಣ್ಣುಗಳು, ತೆಂಗಿನಕಾಯಿ, ಪಂಜಾಕಜ್ಜಾಯ, ಲಡ್ಡುಗಳನ್ನು ಪ್ರಸಾದವಾಘಿ ನೀಡುತ್ತಾರೆ. ಆದ್ರೆ ಈ ದೇವಾಲಯಗಳಲ್ಲಿ ಜಾಮ್, ಚಾಕೋಲೇಟ್, ನೂಡಲ್ಸ್, ಫ್ರೈಡ್ ರೈಸ್ ಯೇ ಪ್ರಸಾದ.
Updated on: Jun 20, 2022 | 6:30 AM

indian un believe and amazing temples that offer unique type of prasads

ಮಂಚ್ ಪ್ರಿಯ ಮುರುಗನ್ ದೇವಸ್ಥಾನ: ಕೇರಳದ ಆಲಪ್ಪುಳ ನಗರದ ಹೊರವಲಯದ ಸುಬ್ರಹ್ಮಣ್ಯಪುರಂನಲ್ಲಿರುವ ಮುರುಗನ್ ದೇವಸ್ಥಾನದ ದೇವರು ಸ್ಥಳೀಯವಾಗಿ 'ಮಂಚ್ ಮುರುಗನ್ ಎಂದೇ ಖ್ಯಾತನಾಗಿದ್ದಾನೆ. ಈ ದೇವಸ್ಥಾನದಲ್ಲಿ ಭಕ್ತರು ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ದೇವರಿಗೆ ಚಾಕೋಲೇಟ್ಗಳನ್ನು ಅರ್ಪಿಸುತ್ತಾರೆ. ಮುಖ್ಯವಾಗಿ ಮಂಚ್ ಅರ್ಪಿಸುತ್ತಾರೆ.

ವಿಷ್ಣುವಿನ ದೇವಾಲಯದಲ್ಲಿ ದೋಸೆ ಪ್ರಸಾದ: ತಮಿಳುನಾಡಿನ ಮಧುರೈನಲ್ಲಿರುವ ಈ ದೇವಾಲಯವು ವಿಷ್ಣುವಿನ ಪ್ರಸಿದ್ಧ ದೇವಾಲಯವಾಗಿದೆ. ಇಲ್ಲಿ ಭಕ್ತರು ದೇವರಿಗೆ ಭಕ್ತಿಯಿಂದ ದೋಸೆಯನ್ನು ಅರ್ಪಿಸುತ್ತಾರೆ. ದೇವರಿಗೆ ಅರ್ಪಿಸಿದ ದೋಸೆಯನ್ನೇ ಭಕ್ತರಿಗೂ ಕೂಡ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.

indian un believe and amazing temples that offer unique type of prasads

ಪಳನಿ ದೇವಸ್ಥಾನದಲ್ಲಿ ಸಕ್ಕರೆ ಕ್ಯಾಂಡಿ ಪ್ರಸಾದ: ತಮಿಳುನಾಡಿನ ಪಳನಿ ಸ್ಥಳದಲ್ಲಿರುವ ದಂಡಾಯುತಪಾಣಿ ಸ್ವಾಮಿ ದೇವಸ್ಥಾನದಲ್ಲಿ ಐದು ಹಣ್ಣುಗಳಿಂದ ತಯಾರಿಸಿದ ವಿಶೇಷ ರೀತಿಯ ಜಾಮನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. 5 ವಿವಿಧ ಬಗೆಯ ಹಣ್ಣುಗಳನ್ನು, ಸಕ್ಕರೆ ಕ್ಯಾಂಡಿಗಳನ್ನು ಹಾಗೂ ಬೆಲ್ಲವನ್ನು ಬೆರೆಸಿ ತಯಾರಿಸಿದ ಜಾಮ್ ಇದಾಗಿದ್ದು, ಇದನ್ನೇ ಇಲ್ಲಿ ಪಂಚಾಮೃತವೆಂದು ಕರೆಯಲಾಗುತ್ತದೆ.

ತ್ರಿಶ್ಯೂರಿನ ಮಹಾದೇವ ದೇವಾಲಯದಲ್ಲಿ ಸಿಡಿಗಳೇ ಪ್ರಸಾದ: ಹೆಚ್ಚಿನ ದೇವಾಲಯಗಳಲ್ಲಿ ಆಹಾರ ಪದಾರ್ಥಗಳನ್ನು ಪ್ರಸಾದದ ರೂಪದಲ್ಲಿ ನೀಡಲಾದರೆ ಕೇರಳದ ಈ ದೇವಾಲಯದಲ್ಲಿ ಮಾತ್ರ ಒಂದು ವಿಚಿತ್ರವೆಂದರೆ ಇಲ್ಲಿ ಆಹಾರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು, ಸಿಡಿಗಳನ್ನು ಹಾಗೂ ಡಿವಿಡಿಗಳನ್ನು ಸೇರಿದಂತೆ ಇನ್ನಿತರ ಆಹಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ ಹಾಗೂ ಇದನ್ನೇ ಭಕ್ತರಿಗೆ ಪ್ರಸಾದವಾಗಿಯೂ ನೀಡಲಾಗುತ್ತದೆ. ಜ್ಞಾನವನ್ನು ವಿಶ್ವದಾದ್ಯಂತ ಪಸರಿಸುವುದೇ ಇದರ ಮುಖ್ಯ ಉದ್ದೇಶ.

indian un believe and amazing temples that offer unique type of prasads




