ಪಳನಿ ದೇವಸ್ಥಾನದಲ್ಲಿ ಸಕ್ಕರೆ ಕ್ಯಾಂಡಿ ಪ್ರಸಾದ: ತಮಿಳುನಾಡಿನ ಪಳನಿ ಸ್ಥಳದಲ್ಲಿರುವ ದಂಡಾಯುತಪಾಣಿ ಸ್ವಾಮಿ ದೇವಸ್ಥಾನದಲ್ಲಿ ಐದು ಹಣ್ಣುಗಳಿಂದ ತಯಾರಿಸಿದ ವಿಶೇಷ ರೀತಿಯ ಜಾಮನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. 5 ವಿವಿಧ ಬಗೆಯ ಹಣ್ಣುಗಳನ್ನು, ಸಕ್ಕರೆ ಕ್ಯಾಂಡಿಗಳನ್ನು ಹಾಗೂ ಬೆಲ್ಲವನ್ನು ಬೆರೆಸಿ ತಯಾರಿಸಿದ ಜಾಮ್ ಇದಾಗಿದ್ದು, ಇದನ್ನೇ ಇಲ್ಲಿ ಪಂಚಾಮೃತವೆಂದು ಕರೆಯಲಾಗುತ್ತದೆ.