‘ಜೇಮ್ಸ್’ ಖ್ಯಾತಿಯ ಚೇತನ್ ಕುಮಾರ್ ಹೊಸ ಸಿನಿಮಾ ಘೋಷಣೆ; ಯುವ ನಾಯಕನ ಜತೆ ಚಿತ್ರ
TV9 Web | Updated By: ರಾಜೇಶ್ ದುಗ್ಗುಮನೆ
Updated on:
Jul 20, 2022 | 6:25 PM
‘ಜೇಮ್ಸ್’ ಬಳಿಕ ನಿರ್ದೇಶಕ ಚೇತನ್ ಕುಮಾರ್ ಅವರ ಮುಂದಿನ ಸಿನಿಮಾ ಯಾವುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಶೀಘ್ರವೇ ಅವರು ಹೊಸ ಸಿನಿಮಾ ಕೆಲಸ ಆರಂಭಿಸಲಿದ್ದಾರೆ. ಈ ಚಿತ್ರಕ್ಕೆ ಇಶಾನ್ ನಾಯಕ
1 / 5
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೀರೋ ಆಗಿ ಅಭಿನಯಿಸಿದ ಕೊನೆಯ ಚಿತ್ರ ‘ಜೇಮ್ಸ್’. ಈ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದರು. ಈಗ ಅವರು ಹೊಸ ಸಿನಿಮಾಗೆ ನಿರ್ದೇಶನ ಮಾಡಲು ರೆಡಿ ಆಗಿದ್ದಾರೆ. ಈ ಬಗ್ಗೆ ಘೋಷಣೆ ಆಗಿದ್ದು, ಶೀಘ್ರವೇ ಸಂಪೂರ್ಣ ಮಾಹಿತಿ ಹೊರ ಬೀಳಲಿದೆ.
2 / 5
‘ಜೇಮ್ಸ್’ ಬಳಿಕ ನಿರ್ದೇಶಕ ಚೇತನ್ ಕುಮಾರ್ ಅವರ ಮುಂದಿನ ಸಿನಿಮಾ ಯಾವುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಶೀಘ್ರವೇ ಅವರು ಹೊಸ ಸಿನಿಮಾ ಕೆಲಸ ಆರಂಭಿಸಲಿದ್ದಾರೆ. ಈ ಚಿತ್ರಕ್ಕೆ ಇಶಾನ್ ನಾಯಕ
3 / 5
‘ರೆಮೋ’ ಚಿತ್ರಕ್ಕೆ ಇಶಾನ್ ನಾಯಕ. ಆ ಚಿತ್ರದ ಹಾಡುಗಳು, ಟೀಸರ್ ಎಲ್ಲರ ಗಮನ ಸೆಳೆದಿವೆ. ಈ ಕಾರಣದಿಂದ ಇಶಾನ್ ಅನೇಕರಿಗೆ ಪರಿಚಯ ಆಗಿದ್ದಾರೆ. ಅವರ ನಟನೆಯ ಸಿನಿಮಾ ತೆರೆಗೆ ಬರುವುದಕ್ಕೆ ಮೊದಲೇ ಸ್ಟಾರ್ ನಿರ್ದೇಶಕನ ಜತೆ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ.
4 / 5
‘ರೆಮೋ’ ಸಿನಿಮಾ ಬಿಡುಗಡೆ ಆದ ನಂತರ ಹೊಸ ಚಿತ್ರದ ಕೆಲಸ ಆರಂಭವಾಗಲಿದೆ. ಶೀಘ್ರದಲ್ಲೇ ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ಚೇತನ್ ಕುಮಾರ್ ತಿಳಿಸಿದ್ದಾರೆ.
5 / 5
‘ಜೇಮ್ಸ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸು ಕಂಡಿತು. ಪುನೀತ್ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಫ್ಯಾನ್ಸ್ ಈ ಚಿತ್ರದ ಜತೆ ಭಾವನಾತ್ಮಕವಾಗಿ ಕನೆಕ್ಟ್ ಆದರು.