
ನಟಿ ಜಾನ್ವಿ ಕಪೂರ್ ಅವರು ಶಿಖರ್ ಪಹರಿಯಾ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಗುಟ್ಟಾಗಿ ಏನೂ ಉಳಿದಿಲ್ಲ. ಈ ಜೋಡಿ ಆಗಾಗ ಸಾರ್ವಜನಿಕವಾಗಿ ಸುತ್ತಾಟ ನಡೆಸುತ್ತಾರೆ. ಆದರೆ, ಇಷ್ಟು ದಿನ ಈ ವಿಚಾರದಲ್ಲಿ ಜಾನ್ವಿ ಮೌನ ತಾಳಿದ್ದರು.

ಜಾನ್ವಿ ಕಪೂರ್ ಅವರ ಮೌನ ಅನೇಕರಿಗೆ ಬೇಸರ ತರಿಸಿತ್ತು. ಅವರು ಸಾರ್ವಜನಿಕವಾಗಿ ಈ ಬಗ್ಗೆ ಮಾತನಾಡಲಿ ಎಂದು ಎಲ್ಲರೂ ಕೋರಿಕೊಂಡಿದ್ದರು. ಕೊನೆಗೂ ಜಾನ್ವಿ ಈ ಬಗ್ಗೆ ಮಾತನಾಡಿದ್ದಾರೆ. ಅವರು ಡೇಟಿಂಗ್ ವಿಚಾರ ಒಪ್ಪಿದ್ದಾರೆ.

ಇತ್ತೀಚೆಗೆ ಬೋನಿ ಕಪೂರ್ ನಿರ್ಮಾಣದ, ಅಜಯ್ ದೇವಗನ್ ನಟನೆಯ ‘ಮೈದಾನ್’ ಸಿನಿಮಾ ರಿಲೀಸ್ ಆಗಿದೆ. ಇದರ ಸ್ಪೆಷಲ್ ಶೋಗೆ ಜಾನ್ವಿ ಕಪೂರ್ ತೆರಳಿದ್ದರು. ಆಗ ಅವರು ಕತ್ತಿನ ಮೇಲಿರುವ ಚೈನ್ ಗಮನ ಸೆಳೆದಿದೆ.

ಕತ್ತಿನಲ್ಲಿರುವ ಚೈನ್ ಮೇಲೆ ‘ಶಿಖು’ ಎಂದು ಬರೆದುಕೊಂಡಿದೆ. ಇದನ್ನು ನೋಡಿದ ಅನೇಕರು ಜಾನ್ವಿ ಪ್ರೀತಿ ವಿಚಾರ ಒಪ್ಪಿಕಂಡರು ಎಂದು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಈ ಜೋಡಿ ಒಟ್ಟಾಗಿ ತಿರುಪತಿಗೆ ತೆರಳಿತ್ತು.

ಮಹಾರಾಷ್ಟ್ರ ಮಾಜಿ ಸಿಎಂ ಸುಶಿಲ್ ಕುಮಾರ್ ಶಿಂದೆ ಅವರ ಮೊಮ್ಮೊಗ ಶಿಖರ್ ಪಹಾರಿಯಾ. ಇಬ್ಬರೂ ಪ್ರೀತಿಯಲ್ಲಿ ಇದ್ದರು. ನಂತರ ಬ್ರೇಕಪ್ ಆಯಿತು. ಈಗ ಮತ್ತೆ ಪ್ಯಾಚಪ್ ಮಾಡಲಾಗಿದೆ.