
ಜಾನ್ಹವಿ ಕಪೂರ್ ಬಾಲಿವುಡ್ನ ಬಹು ಬೇಡಿಕೆಯ ಯುವ ನಟಿ.

ಶ್ರೀದೇವಿ-ಬೋನಿ ಕಪೂರ್ ಪುತ್ರಿ ಜಾನ್ಹವಿ ಕಪೂರ್ ನಟನೆ ಹಾಗೂ ಗ್ಲಾಮರಸ್ ಲುಕ್ನಿಂದ ಜನಪ್ರಿಯತೆ ಗಳಿಸಿದ್ದಾರೆ.

ಬಾಲಿವುಡ್ನಲ್ಲಿ ಈಗಾಗಲೇ ಕೆಲವಾರು ಸಿನಿಮಾಗಳಲ್ಲಿ ನಟಿಸಿರುವ ಜಾನ್ಹವಿ ಕಪೂರ್ ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಜೂ ಎನ್ಟಿಆರ್ ಜೊತೆಗೆ ತೆಲುಗು ಸಿನಿಮಾ 'ದೇವರ'ನಲ್ಲಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ.

ಈ ಸಿನಿಮಾಕ್ಕೆ ಭಾರಿ ಸಂಭಾವನೆಯನ್ನು ಜಾನ್ಹವಿ ಕಪೂರ್ ಪಡೆಯುತ್ತಿದ್ದಾರೆ.

ತಮ್ಮ ಮೊದಲ ತೆಲುಗು ಸಿನಿಮಾಕ್ಕೆ ಬರೋಬ್ಬರಿ 5 ಕೋಟಿ ಸಂಭಾವನೆಯನ್ನು ಜಾನ್ಹವಿ ಪಡೆಯುತ್ತಿದ್ದಾರೆ.

ತೆಲುಗಿನ ಇನ್ಯಾವುದೇ ನಟಿ ಒಂದು ಸಿನಿಮಾಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದಿಲ್ಲವಂತೆ.