- Kannada News Photo gallery Japan pm, Naredra Modi takes a walk at Delhi's Buddha Jayanti Park, some discussion: Here are the photos
ದೆಹಲಿಯ ಬುದ್ಧ ಜಯಂತಿ ಪಾರ್ಕ್ನಲ್ಲಿ ಜಪಾನ್ ಪ್ರಧಾನಿ, ಮೋದಿ ವಾಯು ವಿಹಾರ, ಒಂದಿಷ್ಟು ಚರ್ಚೆ: ಇಲ್ಲಿವೆ ಫೋಟೋಸ್
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದು, ಇಂದು (ಮಾ. 20) ಬೆಳಗ್ಗೆ ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ್ದಾರೆ.
Updated on:Mar 20, 2023 | 8:56 PM

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ (Fumio Kishida) ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದು, ಸೋಮವಾರ ಬೆಳಗ್ಗೆ ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ್ದಾರೆ.

ಫ್ಯೂಮಿಯೊ ಕಿಶಿದಾ ಅವರೊಂದಿಗೆ ದೆಹಲಿಯ ಬುದ್ಧ ಜಯಂತಿ ಪಾರ್ಕ್‌ಗೆ ಪ್ರಧಾನಿ ಮೋದಿ ಭೇಟಿ ನೀಡಿದರು. ಪಾರ್ಕ್ನಲ್ಲಿ ಕೆಲ ಹೊತ್ತು ಸಮಯ ಕಳೆದಿದ್ದಾರೆ.

15 ವರ್ಷಗಳ ಹಿಂದೆ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿ, ಇಂಡೋ-ಫೆಸಿಪಿಕ್ ಸಹಕಾರ ಕುರಿತಂತೆ ಮಾತನಾಡಿದ್ದರು. ಇದೀಗ ಫ್ಯೂಮಿಯೊ ಕಿಶಿದಾ ಜಿ7 ಹಿರೋಷಿಮಾ ಶೃಂಗಸಭೆಗೆ ಪ್ರಧಾನಿ ಮೋದಿ ಅವರನ್ನು ಔಪಚಾರಿಕವಾಗಿ ಆಹ್ವಾನಿಸಿದ್ದಾರೆ.

ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಜಪಾನ್- ಇಂಡಿಯಾ ಫೆಸಿಪಿಕ್ ಕಾರ್ಯತಂತ್ರ ಮತ್ತು ಅದರ ಹೊಸ ರಕ್ಷಣಾ ನಿಲುವು ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಎರಡು ದೇಶದ ಪ್ರಧಾನಿಗಳು ಪಾರ್ಕ್ನಲ್ಲಿ ಕೂತು ಲಸ್ಸಿ ಕುಡಿಯುತ ಮಾತುಕತೆಯಲ್ಲಿ ತೊಡಗಿಕೊಂಡಿರುವುದು ಹೀಗೆ.

ಬಳಿಕ ಫ್ಯೂಮಿಯೊ ಕಿಶಿದಾ ಮತ್ತು ನರೇಂದ್ರ ಮೋದಿ ಗೋಲ್ ಗಪ್ಪ ಸವಿದರು.

ಬುದ್ಧ ಜಯಂತಿ ಪಾರ್ಕ್ನಲ್ಲಿ ಫ್ಯೂಮಿಯೊ ಕಿಶಿದಾ ಮತ್ತು ನರೇಂದ್ರ ಮೋದಿ ವಾಯು ವಿಹಾರ ಮಾಡಿದರು.
Published On - 8:16 pm, Mon, 20 March 23




