
ನಟಿ ಮೇಘಾ ಶೆಟ್ಟಿ ಅವರು ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಬ್ಯುಸಿ ಆಗಿದ್ದಾರೆ. ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅವರು ಅನು ಸಿರಿಮನೆ ಹೆಸರಿನ ಪಾತ್ರ ಮಾಡುತ್ತಿದ್ದಾರೆ.

ಮೇಘಾ ಶೆಟ್ಟಿ ಹಲವು ಬಗೆಯ ಫೋಟೋಶೂಟ್ ಮಾಡಿಸುತ್ತಾ ಇರುತ್ತಾರೆ. ಈ ಬಾರಿ ಗುಲಾಬಿ ಹೂವಿನ ರೀತಿಯ ಬಟ್ಟೆ ಧರಿಸಿ ಗಮನ ಸೆಳೆದಿದ್ದಾರೆ.

ಮೇಘಾ ಶೆಟ್ಟಿ ಅವರು ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಫೇಮಸ್ ಆದ ಬಳಿಕ ಸಿನಿಮಾ ಆಫರ್ ಒಪ್ಪಿಕೊಳ್ಳೋಕೆ ಶುರುಮಾಡಿದರು.


ಮೇಘಾ ಶೆಟ್ಟಿ ಅವರನ್ನು ಎಲ್ಲರೂ ‘ಬಿಳಿ ಗುಲಾಬಿ’ ಎಂದು ಕರೆದಿದ್ದಾರೆ. ಅವರ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ. ಇದು ಅವರ 300ನೇ ಪೋಸ್ಟ್ ಅನ್ನೋದು ವಿಶೇಷ.