
ಚಿತ್ರರಂಗದಲ್ಲಿ ನಟಿ ಶ್ರೀಯಾ ಶರಣ್ ಅವರಿಗೆ 20 ವರ್ಷಗಳ ಅನುಭವ ಇದೆ. ಇಂದಿಗೂ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಬಹುಭಾಷೆಯಲ್ಲಿ ಸಿನಿಮಾ ಮಾಡಿ ಶ್ರೀಯಾ ಶರಣ್ ಸೈ ಎನಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಶ್ರೀಯಾ ಶರಣ್ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ತಮ್ಮ ದಿನಚರಿ ಬಗ್ಗೆಯೂ ಅವರು ಅಪ್ಡೇಟ್ ನೀಡುತ್ತಾರೆ.

ಇತ್ತೀಚೆಗೆ ಶ್ರೀಯಾ ಶರಣ್ ಅವರು ಬ್ಯಾಕ್ಲೆಸ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಈ ಫೋಟೋಗಳನ್ನು 2.9 ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಕಮೆಂಟ್ಗಳ ಮೂಲಕ ಜನರು ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ಗ್ಲಾಮರಸ್ ಆಗಿ ಫೋಟೋಶೂಟ್ ಮಾಡಿಸುವಲ್ಲಿ ಶ್ರೀಯಾ ಎಂದಿಗೂ ಹಿಂದೇಟು ಹಾಕುವವರಲ್ಲ.

ಸದ್ಯ ಶ್ರೀಯಾ ಶರಣ್ ಕೈಯಲ್ಲಿ ಅನೇಕ ಆಫರ್ಗಳಿಗೆ. ಕನ್ನಡದ ‘ಕಬ್ಜ’ ಚಿತ್ರಕ್ಕೆ ಅವರು ನಾಯಕಿ ಆಗಿದ್ದಾರೆ. ಉಪೇಂದ್ರ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದು, ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿದೆ.
Published On - 2:11 pm, Tue, 4 October 22