ಜನ್ಮದಿನದ ಖುಷಿಯಲ್ಲಿ ನಿಮಿಕಾ ರತ್ನಾಕರ್​; ಚಂದನವನದ ಚೆಲುವೆಯ ಕೈಯಲ್ಲಿವೆ ಮಸ್ತ್​ ಆಫರ್​ಗಳು

|

Updated on: Aug 01, 2023 | 8:00 AM

Nimika Ratnakar: ನಿಮಿಕಾ ರತ್ನಾಕರ್​ ಅವರು ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅಭಿನಯ, ಡ್ಯಾನ್ಸ್​, ಗ್ಲಾಮರ್​ ಎಲ್ಲದರಲ್ಲೂ ಅವರು ಗಮನ ಸೆಳೆಯುತ್ತಿದ್ದಾರೆ.

1 / 7
ಕನ್ನಡ ಚಿತ್ರರಂಗದಲ್ಲಿ ನಟಿ ನಿಮಿಕಾ ರತ್ನಾಕರ್​ ಅವರು ಮಿಂಚುತ್ತಿದ್ದಾರೆ. ಇಂದು (ಆಗಸ್ಟ್​ 1) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಅವರ ಅಭಿಮಾನಿಗಳು ಈ ದಿನವನ್ನು ಸಡಗರದಿಂದ ಆಚರಿಸುತ್ತಿದ್ದಾರೆ.

2 / 7
ಮಂಗಳೂರು ಮೂಲದ ನಿಮಿಕಾ ರತ್ನಾಕರ್​ ಅವರು ಇಂಜಿನಿಯರಿಂಗ್​ ಓದಿದ್ದಾರೆ. ಆದರೆ ಅವರಿಗೆ ನಟಿ ಆಗಬೇಕು ಎಂಬ ಬಯಕೆ ಮೂಡಿದ್ದರಿಂದ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ಈಗ ಅವರು ಚಂದನವನದಲ್ಲಿ ಮಿಂಚುತ್ತಿದ್ದಾರೆ.

3 / 7
ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವುದು ಮಾತ್ರವಲ್ಲದೇ ಸ್ಪೆಷಲ್​ ಸಾಂಗ್​ನಲ್ಲೂ ನರ್ತಿಸುವ ಮೂಲಕ ನಿಮಿಕಾ ರತ್ನಾಕರ್​ ಅವರು ಮನೆಮಾತಾಗಿದ್ದಾರೆ. ಅವರಿಗೆ ದಿನದಿಂದ ದಿನಕ್ಕೆ ಅಭಿಮಾನಿ ಬಳಗ ಹಿರಿದಾಗುತ್ತಿದೆ.

4 / 7
ನಿಮಿಕಾ ರತ್ನಾಕರ್​ ಅವರು ಸ್ಯಾಂಡಲ್​ವುಡ್​ನ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅಭಿನಯ, ಡ್ಯಾನ್ಸ್​, ಗ್ಲಾಮರ್​ ಎಲ್ಲದರಲ್ಲೂ ಅವರು ಗಮನ ಸೆಳೆಯುತ್ತಿದ್ದಾರೆ. ಹೊಸ ಹೊಸ ಅವಕಾಶಗಳು ಅವರಿಗೆ ಸಿಗುತ್ತಿವೆ.

5 / 7
ಓಂ ಪ್ರಕಾಶ್ ರಾವ್ ನಿರ್ದೇಶನದ ‘ತ್ರಿಶೂಲಂ’ ಸಿನಿಮಾದಲ್ಲಿ ‘ರಿಯಲ್​ ಸ್ಟಾರ್​’ ಉಪೇಂದ್ರ ಅವರಿಗೆ ಜೋಡಿಯಾಗಿ ನಿಮಿಕಾ ರತ್ನಾಕರ್​ ನಟಿಸಿದ್ದಾರೆ. ಆ ಸಿನಿಮಾ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.

6 / 7
ಕನ್ನಡ ಚಿತ್ರರಂಗದ ಘಟಾನುಘಟಿ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಸಿನಿಮಾ ಮಾಡುವ ಚಾನ್ಸ್​ ಸಿಕ್ಕಿದ್ದಕ್ಕೆ ನಿಮಿತಾ ರತ್ನಾಕರ್​ ಅವರಿಗೆ ಖುಷಿ ಆಗಿದೆ. ಬರ್ತ್​ಡೇ ಹೊಸ್ತಿಲಲ್ಲಿ ಹೊಸ ಪ್ರಾಜೆಕ್ಟ್​ಗಳ ಬಗ್ಗೆಯೂ ಮಾಹಿತಿ ಸಿಕ್ಕಿದೆ.

7 / 7
ಓಂ ಪ್ರಕಾಶ್​ ರಾವ್​ ನಿರ್ದೇಶಿಸಲಿರುವ ‘ಫೀನಿಕ್ಸ್​’ ಸಿನಿಮಾದಲ್ಲೂ ನಿಮಿತಾ ರತ್ನಾಕರ್​ ಅವರು ಅಭಿನಯಿಸುತ್ತಿದ್ದಾರೆ. ಇದು ಮಹಿಳಾಪ್ರಧಾನ ಕಥೆಯುಳ್ಳ ಸಿನಿಮಾ ಎಂಬುದು ಮತ್ತೊಂದು ವಿಶೇಷ.