ಅವಳಿ ಮಕ್ಕಳು, ಪತಿ ಜಗದೀಶ್ ಜೊತೆ ಚಿಕ್ಕಮಗಳೂರಲ್ಲಿ ಕಾಲ ಕಳೆದ ನಟಿ ಅಮೂಲ್ಯ
ಪತಿ ಜಗದೀಶ್ ಹಾಗೂ ಮಕ್ಕಳ ಜೊತೆ ಅಮೂಲ್ಯ ಚಿಕ್ಕಮಗಳೂರಿಗೆ ತೆರಳಿದ್ದಾರೆ. ಅಲ್ಲಿನ ರೆಸಾರ್ಟ್ನಲ್ಲಿ ಸಮಯ ಕಳೆದ ಫೋಟೋನ ಅಮೂಲ್ಯ ಹಂಚಿಕೊಂಡಿದ್ದಾರೆ.
Updated on:Aug 01, 2023 | 9:45 AM

ನಟಿ ಅಮೂಲ್ಯಗೆ 2022ರಲ್ಲಿ ಅವಳಿ ಮಕ್ಕಳಾದವು. ಮಕ್ಕಳ ಹಲವು ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈಗ ಪತಿ ಜಗದೀಶ್ ಹಾಗೂ ಮಕ್ಕಳ ಜೊತೆ ಅಮೂಲ್ಯ ಚಿಕ್ಕಮಗಳೂರಿಗೆ ತೆರಳಿದ್ದಾರೆ. ಅಲ್ಲಿನ ರೆಸಾರ್ಟ್ನಲ್ಲಿ ಸಮಯ ಕಳೆದ ಫೋಟೋಗಳನ್ನು ಅಮೂಲ್ಯ ಹಂಚಿಕೊಂಡಿದ್ದಾರೆ.

ಈಗ ಮಳೆಗಾಲದ ಸಂದರ್ಭ. ಎಲ್ಲ ಕಾಡು-ಬೆಟ್ಟಗಳು ಹಸಿರಾಗಿವೆ. ಹೀಗಾಗಿ, ಜಗದೀಶ್ ಹಾಗೂ ಅಮೂಲ್ಯ ಇಲ್ಲಿಗೆ ಮಕ್ಕಳ ಜೊತೆ ತೆರಳಿದ್ದಾರೆ.

ಮಕ್ಕಳಿಗೆ ಅಥರ್ವ್ ಹಾಗೂ ಆದವ್ ಎಂದು ನಾಮಕರಣ ಮಾಡಲಾಗಿದೆ. ಅಮೂಲ್ಯ ಅವರ ಮಕ್ಕಳು ಸಖತ್ ಕ್ಯೂಟ್ ಆಗಿದ್ದಾರೆ ಎನ್ನುವ ಕಮೆಂಟ್ಗಳು ಬಂದಿವೆ.

ಮಕ್ಕಳು ಜನಿಸಿದ ಬಳಿಕ ಹಲವು ವರ್ಷ ಅವರ ಆರೈಕೆಯಲ್ಲಿ ತಾಯಂದಿರು ಬ್ಯುಸಿ ಆಗುತ್ತಾರೆ. ನಟಿ ಅಮೂಲ್ಯ ಅವರು ಕೂಡ ಇದಕ್ಕೆ ಹೊರತಾಗಿಲ್ಲ.

ಅಮೂಲ್ಯ ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಅವರು ಮತ್ತೆ ನಟನೆಗೆ ಮರಳಲಿ ಎಂಬುದು ಅನೇಕರ ಆಸೆ.

ಸೋಶಿಯಲ್ ಮೀಡಿಯಾದಲ್ಲಿ ಅಮೂಲ್ಯ ಆ್ಯಕ್ಟೀವ್
Published On - 9:45 am, Tue, 1 August 23

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More



