‘ಕನ್ನಡತಿ’ ಧಾರಾವಾಹಿಯಲ್ಲಿ ರಮೋಲಾ ಅವರು ಖಳನಾಯಕಿ ಆಗಿದ್ದರು. ಸಾನಿಯಾ ಪಾತ್ರದಲ್ಲಿ ಅವರು ಮಿಂಚಿದ್ದರು. ಅವರ ನಟನೆಯನ್ನು ಸಾಕಷ್ಟು ಮಂದಿ ಇಷ್ಟಪಟ್ಟಿದ್ದರು.
ಆದರೆ, ರಮೋಲಾ ಏಕಾಏಕಿ ಕಿರುತೆರೆ ತೊರೆದು ಹೊರಬಂದಿದ್ದರು. ಇದಕ್ಕೆ ಕಾರಣ ಏನು ಎಂಬುದು ಈಗ ಗೊತ್ತಾಗಿದೆ. ಸಿನಿಮಾವೊಂದರಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.
‘ರಿಚ್ಚಿ’ ಸಿನಿಮಾದಲ್ಲಿ ಸಾನಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಸಾಂಗ್ ಶೂಟಿಂಗ್ ಪ್ರಗತಿಯಲ್ಲಿದೆ. ಸೆಟ್ನ ಫೋಟೋಗಳು ವೈರಲ್ ಆಗಿವೆ.
ಸಾನಿಯಾ ಹಿರಿತೆರೆಗೆ ಕಾಲಿಡೋಕೆ ಸಜ್ಜಾಗಿರುವ ವಿಚಾರ ಕೇಳಿ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಸಿನಿಮಾ ಬಗ್ಗೆ ಸಂಪೂರ್ಣ ಅಪ್ಡೇಟ್ ಇನ್ನಷ್ಟೇ ತಿಳಿದುಬರಬೇಕಿದೆ.
ರಮೋಲಾ
ರಮೋಲಾ