- Kannada News Photo gallery Karnataka Heavy Rains Malnad Region witness flood situation here is the photo story from Shivamogga and Uttara Kannada
ಮುಳುಗಿದ ಮಲೆನಾಡು; ತೀರ್ಥಹಳ್ಳಿ ಜಲಾವೃತ, ತತ್ತರಿಸಿದ ಉತ್ತರಕನ್ನಡ, ಮಳೆಯ ಭೀಕರತೆಗೆ ಸಾಕ್ಷಿಯಾದ ಚಿತ್ರಗಳು
Karnataka Rain Photos: ತೀರ್ಥಹಳ್ಳಿ ಪಟ್ಟಣಕ್ಕೆ ಹರಿದು ಬಂದ ನೀರು. ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮಮಂಟಪ ಮುಚ್ಚಿದರೆ ಬೆಚ್ಚುತ್ತಿದ್ದ ಮಲೆನಾಡು ಜನರಿಗೆ ಈ ಬಾರಿಯ ಮಳೆ ಅದಕ್ಕೂ ಮಿಗಿಲಾದ ರೌದ್ರಾವತಾರವನ್ನು ತೋರಿಸಿದೆ.
Updated on:Jul 24, 2021 | 12:49 PM

Karnataka Heavy Rains Malnad Region witness flood situation here is the photo story from Shivamogga and Uttara Kannada

Karnataka weather Today Rainfall Lashes Coastal Karnataka, Malnad and Bangalore till September 6 Karnataka Rain

ನೆರೆ ಮಳೆಯನ್ನು ನೋಡಿ ಕಂಗಾಲಾದ ಮಲೆನಾಡು ಜನ, ಮಳೆಯ ಸಹವಾಸವೇ ಸಾಕಪ್ಪಾ ಎಂದು ನಿಟ್ಟುಸಿರು ಬಿಡುವಂತಾಗಿದೆ.

ತೀರ್ಥಹಳ್ಳಿಯ ಬಾಳೆಬೈಲು ಬಳಿ ಅಂಗಡಿ, ಹೊಟೇಲ್ಗಳಿಗೆ ನುಗ್ಗಿದ ನೀರಿನಿಂದಾಗಿ ಸಾಮಾನು, ಸರಂಜಾಮುಗಳು ಹಾನಿಗೊಳಗಾಗಿವೆ.

Karnataka Weather Today Heavy Rain in Mangalore Udupi Uttara Kannada Friday Karnataka Rain

ಶಿರಸಿ-ಕುಮಟಾ ರಸ್ತೆಯ ಗದ್ದೆಮನೆ ಎಂಬಲ್ಲಿ ಕಂಡುಬಂದ ದೃಶ್ಯ. ಕುಂಭದ್ರೋಣ ಮಳೆಗೆ ಹೊಳೆಯ ನೀರು ರಸ್ತೆ, ತೋಟಗಳಿಗೆ ನುಗ್ಗಿ ಸಂಪೂರ್ಣ ಜಲಾವೃತ

Karwar Yellapura Shivamogga Malenadu region too faces Heavy Rainfall Floods Shivaram Hebbar Eshwarappa visits

ಮೈಲಿಗಲ್ಲು ಮುಳುಗಡೆ! ರಸ್ತೆಯ ಪಕ್ಕದಲ್ಲಿದ್ದ ಮೈಲಿಗಲ್ಲನ್ನು ಮುಳುಗಿಸುವಷ್ಟು ಎತ್ತರಕ್ಕೆ ನಿಂತ ನೀರು

ಉತ್ತರ ಕನ್ನಡದ ಶಿರಸಿ ಸಮೀಪದ ಕೂಗ್ತೇಮನೆ ಎಂಬ ಹಳ್ಳಿಯ ರಸ್ತೆಯೆಲ್ಲ ಜಲಾವೃತಗೊಂಡಿರುವುದು.

ಶಿರಸಿಯ ಸಂಪಖಂಡದ ಸಮೀಪದ ಹಳ್ಳಿಗಳ ತೋಟಕ್ಕೆ ನುಗ್ಗಿದ ನೀರು, ಜಮೀನು, ಹೊಲ, ಗದ್ದೆಗಳನ್ನೇ ನಂಬಿಕೊಂಡಿದ್ದ ಜನ ಕಂಗಾಲಾಗುವಂತೆ ಮಾಡಿದೆ. (ಚಿತ್ರ ಕೃಪೆ: ಸ್ಥಳೀಯ ಗ್ರಾಮಸ್ಥರು ಮತ್ತು ಸಾಮಾಜಿಕ ಜಾಲತಾಣಗಳು)
Published On - 12:26 pm, Sat, 24 July 21




