- Kannada News Photo gallery Karnataka Legislative Assembly speaker UT Khader gets New Car here Is Car features and price details
ಸ್ಪೀಕರ್ ಖಾದರ್‌ಗೆ ಹೊಸ ಐಶಾರಾಮಿ ಕಾರು: 360 ಡಿಗ್ರಿ ಕ್ಯಾಮೆರಾ, ವಿಶೇಷ LED ಲೈಟ್, ಬೆಲೆ ಎಷ್ಟು ಗೊತ್ತಾ?
ರಾಜ್ಯ ಸಚಿವಾಲಯವು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ವಿಶೇಷ ಐಷಾರಾಮಿ ಕಾರಿನ ಸೌಲಭ್ಯ ನೀಡಿದೆ. ಖಾದರ್ ಅವರಿಗೆ ನೀಡಿರುವುದು ಸಾಮಾನ್ಯ ಕಾರು ಅಲ್ಲ. ಹಲವು ವಿಶೇಷತೆ ಹೊಂದಿರುವ ಐಷಾರಾಮಿ ಫಾರ್ಚೂನರ್ ಕಾರು. ಹಾಗಾದ್ರೆ, ಈ ಕಾರಿನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎನ್ನುವ ವಿವರ ಇಲ್ಲಿದೆ.
Updated on: Feb 12, 2024 | 8:23 PM

ಸ್ಪೀಕರ್ ಯು.ಟಿ ಖಾದರ್ ಅವರ ಪ್ರಯಾಣಕ್ಕೆ ಇದೀಗ ಐಶಾರಾಮಿ ಕಾರು ಬಂದಿದೆ. ಸಚಿವಾಲಯದಿಂದ ವಿಶೇಷ ಕಾರಿನ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಐಶಾರಾಮಿ ಫಾರ್ಚೂನರ್ ಕಾರು ಹಲವು ವಿಶೇಷತೆಗಳನ್ನು ಕೂಡಾ ಹೊಂದಿದೆ.

ಖಾದರ್ ಮುಖಕ್ಕೆ ಬೆಳಕು ನೀಡುವ ವಿಶೇಷ ಎಲ್ ಇ ಡಿ ಲೈಟ್ ಸೌಲಭ್ಯ ಹೊಂದಿದೆ.

ಕಪ್ಪು ಬಣ್ಣದ ಫಾರ್ಚೂನರ್( ಇ ) ಕಾರಿನ ದರ 33.43 ಲಕ್ಷ ( ಪೆಟ್ರೋಲ್) ಹಾಗೂ ಡೀಸೆಲ್ ಕಾರಿನ ದರ 35.93 ರಿಂದ 51.44 ಲಕ್ಷ ರೂ. ಆಗುತ್ತದೆ. ಆದರೆ, ಈ ಫಾರ್ಚೂನರ್ ಗೆ ವಿಶೇಷ ವಿನ್ಯಾಸ ಮಾಡಿರುವುದರಿಂದ ಒಟ್ಟು 41 ಲಕ್ಷ ರೂ. ವೆಚ್ಚವಾಗಿದೆ ಎಂದು ತಿಳಿದುಬಂದಿದೆ.

ಕಾರಿಗೆ ಜಿಆರ್ ಕಿಟ್ ಅಳವಡಿಸುವ ಮೂಲಕ ವಿಶೇಷ ವಿನ್ಯಾಸ ಮಾಡಲಾಗಿದ್ದು, ಇನ್ನು ಹಲವು ವಿಶೇಷತೆ ಈ ಕಾರು ಹೊಂದಿದೆ

ಇನ್ನು ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಗಂಡಭೇರುಂಡ ಲಾಂಛನ ಹೊಂದಿದೆ. ರಾಜ್ಯಪಾಲರಿಗೆ ಹೊರತಾಗಿ ಸ್ಪೀಕರ್ ಗೆ ಮಾತ್ರ ಇದನ್ನು ಹಾಕಲು ಅವಕಾಶ ಇದೆ.

ಇನ್ನು, ಕೆಲ ವಾರಗಳ ಹಿಂದಷ್ಟೇ ರಾಜ್ಯ ಸರ್ಕಾರದ ಸಚಿವರ ಪ್ರಯಾಣಕ್ಕಾಗಿ 33 ಹೊಸ ಇನ್ನೊವಾ ಕ್ರಸ್ಟಾ ಹೈ ಬ್ರೀಡ್ ಕಾರನ್ನು ಖರೀದಿಸಲಾಗಿತ್ತು. ಸುಮಾರು 9.9 ಕೋಟಿ ರೂ. ವೆಚ್ಚದಲ್ಲಿ 33 ಸಚಿವರಿಗೆ ಹೊಸ ಕಾರು ಖರೀದಿ ಮಾಡಿ ನೀಡಲಾಗಿತ್ತು.

ರಾಜ್ಯದಲ್ಲಿ ಬರ ಪರಿಸ್ಥಿತಿ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಅನುದಾನದ ಕೊರತೆ ಇರುವ ಸಂದರ್ಭದಲ್ಲಿ ಸಚಿವರಿಗೆ ಐಶಾರಾಮಿ ಕಾರುಗಳನ್ನು ಖರೀದಿ ಮಾಡಿರುವ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತವಾಗಿತ್ತು. ಈಗ ಸ್ಪೀಕರ್ ಯುಟಿ ಖಾದರ್ ಅವರಿಗೆ 40 ಲಕ್ಷ ರೂ. ಮೊತ್ತದ ಐಷಾರಾಮಿ ಕಾರನ್ನು ಸಚಿವಾಲಯ ನೀಡಿದೆ.




