
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ವಿಡಿಯೋಗಳನ್ನು ಖ್ಯಾತ ಓಟಿಟಿ ಸಂಸ್ಥೆಯೊಂದಕ್ಕೆ ಬರೋಬ್ಬರಿ 100 ಕೋಟಿ ರೂ. ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಹಾಗಾಗಿ ಈ ಮದುವೆಯನ್ನು ಇಷ್ಟೊಂದು ಗುಟ್ಟಾಗಿ ನೆರವೇರಿಸಲಾಗಿದೆ.

ಯಾವುದೇ ಸಿನಿಮಾದಲ್ಲೂ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿಯಾಗಿ ನಟಿಸಿಲ್ಲ. ಒಂದೆರಡು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡ ಬಳಿಕ ಅವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಅವರ ಪ್ರೀತಿಗೆ ಈಗ ಮದುವೆಯ ಮುದ್ರೆ ಬಿದ್ದಿದೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ನಡುವೆ ವಯಸ್ಸಿನ ಅಂತರ ಇದೆ. ಕತ್ರಿನಾಗೆ 38 ವರ್ಷ ವಯಸ್ಸು. ವಿಕ್ಕಿ ಕೌಶಲ್ಗೆ ಈಗಿನ್ನೂ 33ರ ಪ್ರಾಯ. ತಮಗಿಂತ 5 ವರ್ಷ ಕಿರಿಯ ವ್ಯಕ್ತಿ ಜೊತೆ ಕತ್ರಿನಾ ದಾಂಪತ್ಯ ಜೀವನ ಆರಂಭಿಸಿದ್ದಾರೆ.

ಬಾಲಿವುಡ್ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ನೆಲೆ ಭದ್ರಪಡಿಸಿಕೊಂಡಿದ್ದಾರೆ. ಇಬ್ಬರ ಕೈಯಲ್ಲೂ ಒಳ್ಳೊಳ್ಳೆಯ ಆಫರ್ಗಳಿವೆ. ಇತ್ತೀಚೆಗೆ ತೆರೆಕಂಡ ‘ಸೂರ್ಯವಂಶಿ’ ಚಿತ್ರದಿಂದ ಕತ್ರಿನಾಗೆ ಮತ್ತೊಮ್ಮೆ ದೊಡ್ಡ ಗೆಲುವು ಸಿಕ್ಕಿದೆ.