
ನಟಿ ಕಾವ್ಯಾ ಶಾಸ್ತ್ರೀ ಅವರು ಉದಯ ಟಿವಿಯಲ್ಲಿ ಪ್ರಸಾರ ಕಾಣುತ್ತಿರುವ ‘ರಾಧಿಕಾ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿಯಿಂದ ಅವರು ಹೊರ ಬಂದಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಕಾವ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ರಾಧಿಕಾ ಆಗಿ ನನ್ನ ಪಯಣ ಮುಗಿದಿದೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ. ಶೀಘ್ರದಲ್ಲೇ ಉತ್ತಮ ಹಾಗೂ ಇನ್ನೂ ದೊಡ್ಡ ಸುದ್ದಿಯೊಂದಿಗೆ ಬರುತ್ತೇನೆ’ ಎಂದು ಕಾವ್ಯಾ ಬರೆದುಕೊಂಡಿದ್ದಾರೆ.

‘ರಾಧಿಕಾ’ ಧಾರಾವಾಹಿಯಲ್ಲಿ ಕಾವ್ಯಾ ಅವರು ಹೆಡ್ನರ್ಸ್ ಪಾತ್ರ ಮಾಡಿದ್ದರು. ಈ ಧಾರಾವಾಹಿಯಿಂದ ಅವರಿಗೆ ಜನಪ್ರಿಯತೆ ಸಿಕ್ಕಿತು.

ಸದ್ಯ ‘ರಾಧಿಕಾ’ ಧಾರಾವಾಹಿಯಲ್ಲಿ ಮುಂದಿನ ರಾಧಿಕಾ ಯಾರು ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ಅಷ್ಟೇ ಅಲ್ಲದೆ, ಕಾವ್ಯಾ ಶಾಸ್ತ್ರೀ ಅವರ ಹೊಸ ಪ್ರಾಜೆಕ್ಟ್ ಯಾವುದು ಇರಬಹುದು ಎನ್ನುವ ಕುತೂಹಲ ಮೂಡಿದೆ.

ಶ್ರೀದುರ್ಗಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ರಾಧಿಕಾ' ಧಾರಾವಾಹಿಗೆ ಗಣಪತಿ ಭಟ್ ಹಣ ಹಾಕಿದ್ದಾರೆ. ನಿರ್ದೇಶನದ ಹೊಣೆಯನ್ನು ದರ್ಶಿತ್ ಭಟ್ ಹೊತ್ತಿದ್ದಾರೆ. ಗಣೇಶ್ ಹೆಗಡೆ ಮತ್ತು ಕೃಷ್ಣ ಕಂಚನಹಳ್ಳಿ ಛಾಯಾಗ್ರಹಣ ಮಾಡುತ್ತಿದ್ದಾರೆ.