
ಗೋವಾದಲ್ಲಿ ಕೀರ್ತಿ ಸುರೇಶ್ ಹಾಗೂ ಆಂಟೊನಿ ತಟ್ಟಿಲ್ ಅವರು ಇಂದು (ಡಿಸೆಂಬರ್ 12) ಹಸೆಮಣೆ ಏರಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಆಪ್ತರು ಮತ್ತು ಕುಟುಂಬದವರು ಮಾತ್ರ ವಿವಾಹದಲ್ಲಿ ಭಾಗಿ ಆಗಿದ್ದಾರೆ.

ನಟಿ ಕೀರ್ತಿ ಸುರೇಶ್ ಅವರಿಗೆ ಈಗ 32ರ ಪ್ರಾಯ. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ನಂತರ ಹೀರೋಯಿನ್ ಆಗಿಯೂ ಪ್ರಸಿದ್ಧಿ ಪಡೆದರು. ಅವರನ್ನು ಮದುವೆ ಆಗಿರುವ ಉದ್ಯಮಿ ಆಂಟೊನಿ ತಟ್ಟಿಲ್ ಅವರಿಗೆ ಈಗ 35 ವರ್ಷ ವಯಸ್ಸು.

ಕೀರ್ತಿ ಸುರೇಶ್ ಮತ್ತು ಆಂಟೊನಿ ತಟ್ಟಿಲ್ ಅವರ ನಡುವೆ ಕೇವಲ 3 ವರ್ಷಗಳ ವಯಸ್ಸಿನ ಅಂತರ ಇದೆ. ಕಳೆದ 15 ವರ್ಷಗಳಿಂದ ಅವರಿಬ್ಬರು ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ಅವರ ಪ್ರೀತಿ ವಿಚಾರ ಬಹಿರಂಗ ಆಗಿತ್ತು. ಈಗ ಗೋವಾದಲ್ಲಿ ಸಂಭ್ರಮದಿಂದ ಮದುವೆ ನಡೆದಿದೆ.

ಉದ್ಯಮಿಯಾಗಿ ಆಂಟೊನಿ ತಟ್ಟಲ್ ಅವರು ಯಶಸ್ಸು ಕಂಡಿದ್ದಾರೆ. ಕೀರ್ತಿ ಸುರೇಶ್ ಅವರು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಕೀರ್ತಿ ಸುರೇಶ್ ಅವರ ಮದುವೆಯ ಫೊಟೋಗಳು ವೈರಲ್ ಆಗಿವೆ. ಅಭಿಮಾನಿಗಳು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಕೀರ್ತಿ ಸುರೇಶ್ ಅವರು ‘ಬೇಬಿ ಜಾನ್’ ಸಿನಿಮಾದ ಮೂಲಕ ಬಾಲಿವುಡ್ಗೂ ಕಾಲಿಡುತ್ತಿದ್ದಾರೆ. ಡಿಸೆಂಬರ್ 25ರಂದು ಬಿಡುಗಡೆ ಆಗಲಿರುವ ಈ ಸಿನಿಮಾದಲ್ಲಿ ವರುಣ್ ಧವನ್ ಜತೆ ಕೀರ್ತಿ ಸುರೇಶ್ ನಟಿಸಿದ್ದಾರೆ.