
ನಟಿ ಕೀರ್ತಿ ಸುರೇಶ್ ತಮ್ಮ ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಅವರ ಮುಖಚಹರೆ ಬದಲಾದಂತೆ ಕಾಣುತ್ತಿದೆ.

ಗುಲಾಬಿ ಬಣ್ಣದ ಬಟ್ಟೆ ತೊಟ್ಟು ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದು, ಮೇಕಪ್ನಿಂದಲೋ ಏನೋ ಅವರ ಮುಖ ಭಿನ್ನವಾಗಿ ಕಾಣುತ್ತಿದೆ.

ಕೀರ್ತಿ ಸುರೇಶ್ ದಕ್ಷಿಣ ಭಾರತದ ಪ್ರತಿಭಾವಂತ ಹಾಗೂ ಅತ್ಯಂತ ಬ್ಯುಸಿ ನಟಿಯರಲ್ಲಿ ಒಬ್ಬರು. ಇವರ ನಟನೆಯ ದಸರಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಹಿಟ್ ಆಗಿದೆ.

ಕೀರ್ತಿ ಸುರೇಶ್ ಪ್ರಸ್ತುತ ಐದು ಸಿನಿಮಾಗಳನ್ನು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ತಮಿಳಿನ ನಾಲ್ಕು ಹಾಗೂ ತೆಲುಗಿನ ಒಂದು ಸಿನಿಮಾ ಇದೆ.

ಕೀರ್ತಿ ಸುರೇಶ್ ಚಿರಂಜೀವಿ ಜೊತೆಗೆ ಭೋಲಾ ಶಂಕರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ತಮಿಳು ಸಿನಿಮಾದ ರೀಮೇಕ್ ಆಗಿದೆ.

ಕೀರ್ತಿ ಸುರೇಶ್