‘ಕೆಜಿಎಫ್ 2’ ಮಾತ್ರವಲ್ಲ, ಅತಿ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 10 ಸಿನಿಮಾಗಳ ಲಿಸ್ಟ್ ಇಲ್ಲಿದೆ..
TV9 Web | Updated By: ಮದನ್ ಕುಮಾರ್
Updated on:
Apr 27, 2022 | 12:29 PM
ವಿಶ್ವಾದ್ಯಂತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಹಾಗಾದರೆ ಬಾಕ್ಸ್ ಆಫೀಸ್ ಗಳಿಕೆಯ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ಸಿನಿಮಾಗಳು ಯಾವವು? ಇಲ್ಲಿದೆ ವಿವರ..
1 / 10
ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅನೇಕ ದಾಖಲೆಗಳನ್ನು ಬರೆಯುತ್ತಿದೆ. ವಿಶ್ವಾದ್ಯಂತ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಟಾಪ್ 10 ಸಿನಿಮಾಗಳ ಜೊತೆ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾವನ್ನು ಹೋಲಿಸಲಾಗುತ್ತಿದೆ. ಆಮಿರ್ ಖಾನ್ ನಟನೆಯ ‘ದಂಗಲ್’ ಚಿತ್ರ 1924 ಕೋಟಿ ರೂ. ಗಳಿಸಿತ್ತು. ಆ ಚಿತ್ರ ನಂಬರ್ ಸ್ಥಾನದಲ್ಲಿದೆ.
2 / 10
ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಸಿನಿಮಾದ ಸಾಧನೆ ಕೂಡ ದೊಡ್ಡದು. ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣ ಮುಂತಾದವರು ನಟಿಸಿದ್ದ ಆ ಚಿತ್ರ ಬರೋಬ್ಬರಿ 1749 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ 2ನೇ ಸ್ಥಾನ ಪಡೆದುಕೊಂಡಿದೆ.
3 / 10
ಇತ್ತೀಚೆಗೆ ತೆರೆಕಂಡ ‘ಆರ್ಆರ್ಆರ್’ ಸಿನಿಮಾ ಕೂಡ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡಿದೆ. ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವಿಶ್ವಾದ್ಯಂತ ಈ ಸಿನಿಮಾ 1114 ಕೋಟಿ ರೂಪಾಯಿ ಗಳಿಸಿದೆ. ಇನ್ನೂ ಕೆಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದು 3ನೇ ಸ್ಥಾನದಲ್ಲಿದೆ.
4 / 10
ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ಕೊಂಡೊಯ್ದಿದೆ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ. ಯಶ್ ವೃತ್ತಿ ಜೀವನಕ್ಕೆ ಈ ಸಿನಿಮಾದಿಂದ ದೊಡ್ಡ ಮೈಲೇಜ್ ಸಿಕ್ಕಿದೆ. ಈಗಲೂ ಅನೇಕ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಈವರೆಗೆ 939 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುತ್ತಿದೆ. 4ನೇ ಸ್ಥಾನ ಕಾಯ್ದುಕೊಂಡಿದೆ.
5 / 10
ಸಲ್ಮಾನ್ ಖಾನ್, ಕರೀನಾ ಕಪೂರ್ ಖಾನ್, ಹರ್ಷಾಲಿ ಮಲ್ಹೋತ್ರಾ ನಟನೆಯ ‘ಬಜರಂಗಿ ಭಾಯಿಜಾನ್’ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗಲ್ಲಾ ಪೆಟ್ಟಿಗೆಯಲ್ಲಿ 858 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಈ ಸಿನಿಮಾ 5ನೇ ಸ್ಥಾನದಲ್ಲಿದೆ.
6 / 10
ಆಮಿರ್ ಖಾನ್, ಝೈರಾ ವಾಸಿಮ್ ನಟನೆಯ ಸೀಕ್ರೆಟ್ ಸೂಪರ್ ಸ್ಟಾರ್ ಸಿನಿಮಾ 830 ಕೋಟಿ ರೂಪಾಯಿ ಗಳಿಸಿತ್ತು. ಈ ಚಿತ್ರಕ್ಕೆ 6ನೇ ಸ್ಥಾನವಿದೆ.
7 / 10
ಆಮಿರ್ ಖಾನ್ ಅಭಿನಯದ ‘ಪಿಕೆ’ ಸಿನಿಮಾ 742 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ 7ನೇ ಸ್ಥಾನ ಪಡೆದುಕೊಂಡಿದೆ.
8 / 10
ಶಂಕರ್ ನಿರ್ದೇಶನದ, ರಜನಿಕಾಂತ್ ನಟನೆಯ ‘2.0’ ಸಿನಿಮಾ ಗಳಿಸಿದ್ದು 654 ಕೋಟಿ ರೂಪಾಯಿ. ಆ ಮೂಲಕ 8ನೇ ಸ್ಥಾನದಲ್ಲಿದೆ.
9 / 10
ಸಲ್ಮಾನ್ ಖಾನ್ ನಟನೆಯ ‘ಸುಲ್ತಾನ್’ ಚಿತ್ರ ಕೂಡ ಸೂಪರ್ ಹಿಟ್ ಆಗಿತ್ತು. 614 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾಗೆ 9ನೇ ಸ್ಥಾನವಿದೆ.
10 / 10
2015ರಲ್ಲಿ ಬಿಡುಗಡೆಯಾದ ‘ಬಾಹುಬಲಿ 1’ ಸಿನಿಮಾ ಹೊಸ ಸಂಚಲನ ಸೃಷ್ಟಿ ಮಾಡಿತ್ತು. 600 ಕೋಟಿ ರೂಪಾಯಿ ಕಮಾಯಿ ಮಾಡಿದ ಈ ಚಿತ್ರ 10ನೇ ಸ್ಥಾನದಲ್ಲಿದೆ.