
ಬಿಗ್ ಬಾಸ್ ಕನ್ನಡ ಟಿವಿ ಸೀಸನ್ ಈಗಾಗಲೇ ಆರಂಭ ಆಗಿದೆ. ನಟಿ ಸಾನ್ಯಾ ಐಯ್ಯರ್ ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಐಯ್ಯರ್ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಆಗಾಗ ಅವರ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗುತ್ತದೆ.

ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ನಡುವಿನ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದೆ. ಈ ಕಾರಣಕ್ಕೆ ಇವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆದರೆ, ಅವರ ರೊಮ್ಯಾನ್ಸ್ ಮಿತಿ ಮೀರಿದೆ.

ಶನಿವಾರ (ಅಕ್ಟೋಬರ್ 15) ಎಪಿಸೋಡ್ನಲ್ಲಿ ಸುದೀಪ್ ಅವರು ರೂಪೇಶ್ ಹಾಗೂ ಸಾನ್ಯಾ ಐಯ್ಯರ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಇಬ್ಬರೂ ಕುಳಿತು ರೊಮ್ಯಾನ್ಸ್ ಮಾಡುತ್ತಿದ್ದರು. ಅದು ಮಿತಿ ಮೀರಿತ್ತು. ಈ ಕಾರಣಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ ಸುದೀಪ್.