Updated on:Oct 15, 2022 | 9:19 PM
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಬೇಕೆಂಬ ಕೋಟಿ ಕೋಟಿ ಭಕ್ತರ ಆಶಯ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವುದು ಕೋಟ್ಯಂತರ ಭಾರತೀಯರ ಕನಸು. ರಾಮಭಕ್ತರ ಕನಸು, ಹೋರಾಟದ ಧ್ಯೇಯ ಈಗ ಸಾಕಾರವಾಗುತ್ತಿದೆ. ಅಯೋಧ್ಯೆಯಲ್ಲಿ ಭವ್ಯ, ದಿವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ನೀಲಿನಕ್ಷೆಯಂತೆ ಶ್ರೀರಾಮ ಮಂದಿರ ಕಾಮಗಾರಿ ಹೇಗೆಲ್ಲಾ ನಡೆದಿದೆ? ಯಾವ ಹಂತದಲ್ಲಿದೆ ಎನ್ನುವ ಮಾಹಿತಿ ಇಲ್ಲಿದೆ.
ರಾಮಮಂದಿರ ನಿರ್ಮಾಣ ಕಾರ್ಯವನ್ನು ಎಲ್ ಅಂಡ್ ಟಿ ಕಂಪನಿ ನಿರ್ವಹಿಸುತ್ತಿದ್ದು, ಟಾಟಾ ಕಂಪನಿಯು ಟೆಕ್ನಿಕಲ್ ಕನ್ಸಲ್ಟೆನ್ಸಿ ಜವಾಬ್ದಾರಿ ಹೊತ್ತುಕೊಂಡಿದೆ. ಮಂದಿರ ನಿರ್ಮಾಣಕ್ಕಾಗಿ ಎರಡು ಬೃಹತ್ ಕ್ರೇನ್ಗಳನ್ನು ಬಳಸಲಾಗುತ್ತಿದೆ.
ಪ್ರಬಲ ಭೂಕಂಪವನ್ನು ತಡೆದುಕೊಳ್ಳುವ ಸಾಮರ್ಥ್ಯ ಇರುವಂತೆ ತಳಪಾಯ ನಿರ್ಮಿಸಿರುವುದು ವಿಶೇಷ. ತಳಪಾಯದಲ್ಲಿ ಮೊದಲು 44 ಪದರಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೇ, ಅಂತಿಮವಾಗಿ 48 ಪದರಗಳನ್ನು ನಿರ್ಮಿಸಲಾಗಿದೆ.
ರಾಮಮಂದಿರದ ತಳಪಾಯವು ಸಮುದ್ರ ಮಟ್ಟಕ್ಕಿಂತ 107 ಮೀಟರ್ ಎತ್ತರದಲ್ಲಿದೆ. ಮಂದಿರ ತಳಪಾಯ ನಿರ್ಮಾಣದಲ್ಲಿ ಸಿಮೆಂಟ್ನ್ನು ಹೆಚ್ಚಾಗಿ ಬಳಸುತ್ತಿಲ್ಲ. ಸಿಮೆಂಟ್ ಬಳಸಿದರೇ, ಆ ಜಾಗದಲ್ಲಿ ಹೀಟ್ ಜಾಸ್ತಿಯಾಗುತ್ತೆ. ಹೀಗಾಗಿ ಸಿಮೆಂಟ್ನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದೆ.
ಸ್ಟೋನ್ ಡಸ್ಟ್ ಹಾಗೂ ಹಾರುವ ಬೂದಿಯನ್ನು ಹೆಚ್ಚಾಗಿ ಬಳಸಲಾಗಿದೆ. ಒಂದು ಅಡಿ ಕಾಂಕ್ರೀಟ್ ಹಾಕಿ ಅದರ ಮೇಲೆ ರೋಲರ್ ಹಾಕಿ, ಒಂದರ ಮೇಲೊಂದು ಪದರಗಳನ್ನು ನಿರ್ಮಿಸಲಾಗಿದೆ. ಹೀಗೆ 48 ಪದರಗಳನ್ನು ನಿರ್ಮಿಸಲಾಗಿದೆ. ಆರ್ಟಿಫಿಷಿಯಲ್ ಕಲ್ಲುಗಳನ್ನ ತಳಪಾಯ ನಿರ್ಮಾಣದಲ್ಲಿ ಬಳಸಲಾಗಿದೆ.
2023ರ ಅಂತ್ಯದ ವೇಳೆಗೆ ಶ್ರೀ ರಾಮ ಮಂದಿರ ನಿರ್ಮಾಣ ಮುಗಿಯುವ ನಿರೀಕ್ಷೆಯಿದೆ. 2024ರ ಸಂಕ್ರಾಂತಿಯಂದು ಶ್ರೀ ರಾಮ ಮಂದಿರದ ಅನಾವರಣ ನಡೆಯಲಿದೆ ಎನ್ನಲಾಗಿದೆ.
Published On - 9:14 pm, Sat, 15 October 22