- Kannada News Photo gallery K 47 Muhurtha Kichcha Sudeep new movie with Vijay Karthikeya Photo goes viral
‘K 47’ ಚಿತ್ರದ ಮುಹೂರ್ತ; ಇಲ್ಲಿವೆ ಸುದೀಪ್ ಹೊಸ ಸಿನಿಮಾದ ಸೆಟ್ ಫೋಟೋ
ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಬಳಿಕ ‘ಬಿಲ್ಲ ರಂಗ ಬಾಷ’ ಚಿತ್ರದಲ್ಲಿ ತೊಡಗಿಕೊಂಡರು. ಈಗ ಸುದೀಪ್ ಅವರು ಇತ್ತೀಚೆಗೆ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಕೆ 47’ ಎನ್ನುವ ಟೈಟಲ್ ಇಡಲಾಗಿದೆ. ಈ ಚಿತ್ರದ ಮುಹೂರ್ತ ಫೊಟೋ ಇಲ್ಲಿದೆ.
Updated on:Jul 07, 2025 | 2:44 PM

ಸುದೀಪ್ ಅವರು ಹೊಸ ಸಿನಿಮಾದ ಮುಹೂರ್ತ ತಮಿಳುನಾಡಿನಲ್ಲಿ ನಡೆದಿದೆ. ಈ ಸಂದರ್ಭದ ಫೋಟೋನ ಚಿತ್ರ ತಂಡದವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎಲ್ಲರೂ ಕಿಚ್ಚನಿಗೆ ಹಾಗೂ ಅವರ ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ.

‘ಮ್ಯಾಕ್ಸ್’ ಚಿತ್ರದಿಂದ ಸುದೀಪ್ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ವಿಜಯ್ ಕಾರ್ತಿಕೇಯ ಅವರು. ಅವರೇ ಹೊಸ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಇಬ್ಬರೂ ಎರಡನೇ ಬಾರಿಗೆ ಒಂದಾಗಿದ್ದಾರೆ.

ಸುದೀಪ್ ಅವರ ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮ ಆಗಿಲ್ಲ. ಈ ಸಿನಿಮಾಗೆ ತಾತ್ಕಲಿಕವಾಗಿ ‘K 47’ ಎನ್ನುವ ಟೈಟಲ್ ಇಡಲಾಗಿದೆ. ಈ ಸಿನಿಮಾದ ಮುಹೂರ್ತಕ್ಕೆ ಕಿಚ್ಚನ ಪತ್ನಿ ಪ್ರಿಯಾ ಕೂಡ ಹಾಜರಿ ಹಾಕಿದ್ದರು. ಅವರು ಫೋಟೋದಲ್ಲಿ ಗಮನ ಸೆಳೆದಿದ್ದಾರೆ.

ಸುದೀಪ್ ಅವರು ಕೇವಲ 6 ತಿಂಗಳಲ್ಲಿ ಈ ಚಿತ್ರವನ್ನು ಪೂರ್ಣಗೊಳಿಸುವ ಟಾರ್ಗೆಟ್ ಇಟ್ಟುಕೊಂಡಿದ್ದಾರೆ. ಡಿಸೆಂಬರ್ 25ರಂದು ಸಿನಿಮಾನ ತೆರೆಗೆ ತರುವ ಆಲೋಚನೆಯಲ್ಲಿ ಅವರಿದ್ದಾರೆ. ಹೀಗಾಗಿ, ಶನಿವಾರ ಹಾಗೂ ಭಾನುವಾರ ಎರಡೂ ದಿನ ಅವರು ಕೆಲಸ ಮಾಡಲಿದ್ದಾರೆ.

ಸುದೀಪ್ ಅವರು ‘ಕೆ 47’ ಚಿತ್ರದ ಜೊತೆಗೆ ‘ಬಿಲ್ಲ ರಂಗ ಬಷಾ’ ಅಥವಾ ‘BRB’ ಚಿತ್ರದಲ್ಲೂ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅನುಪ್ ಭಂಡಾರಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಾ ಇದ್ದಾರೆ.
Published On - 2:43 pm, Mon, 7 July 25




