
ಸಿನಿಮಾ ಆದ್ರೂ ಸರಿ, ರಿಯಲ್ ಲೈಫ್ ಆದ್ರೂ ಸರಿ.. ನಟಿ ಸಂಯುಕ್ತಾ ಹೆಗಡೆ ಅವರದ್ದು ಬೋಲ್ಡ್ ವ್ಯಕ್ತಿತ್ವ. ಅನಿಸಿದ್ದನ್ನು ನೇರವಾಗಿ ಹೇಳುವ ಗುಣ ಅವರದ್ದು. ತಮಗಿಷ್ಟ ಎನಿಸುವ ಬಟ್ಟೆಗಳನ್ನು ಧರಿಸುವ ಅವರು ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಆ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ಸಿಗುತ್ತದೆ.

‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಸಂಯುಕ್ತಾ ಹೆಗಡೆ ಅವರಿಗೆ ಬಹುದೊಡ್ಡ ಗೆಲುವು ಸಿಕ್ಕಿತು. ಆ ಬಳಿಕ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದರು. ಸದ್ಯ ಅವರು ಬಣ್ಣದ ಲೋಕದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಬೋಲ್ಡ್ ಫೋಟೋಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಬಿಕಿನಿ ಧರಿಸಿ ಸಂಯುಕ್ತಾ ಹೆಗಡೆ ಅವರು ಪೋಸ್ ನೀಡಿದ್ದಾರೆ. ಸ್ಮಿಮಿಂಗ್ ಪೂಲ್ ದಂಡೆಯಲ್ಲಿ ಕುಳಿತಿರುವ ಅವರ ಈ ಫೋಟೋಗಳನ್ನು ಕಂಡು ಅಭಿಮಾನಿಗಳು ಕಣ್ಣರಳಿಸಿದ್ದಾರೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ‘ನೀವು ಟೆಂಪ್ರೇಚರ್’ ಹೆಚ್ಚಿಸಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ ಅಭಿಮಾನಿಗಳು.

ಸಿನಿಮಾಗಷ್ಟೇ ಸಂಯುಕ್ತಾ ಹೆಗಡೆ ಸೀಮಿತವಾಗಿಲ್ಲ. ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸುವ ಮೂಲಕವೂ ಅವರು ಖ್ಯಾತಿ ಗಳಿಸಿದ್ದಾರೆ. ರೋಡಿಸ್, ಬಿಗ್ ಬಾಸ್, Splitsvilla ಮುಂತಾದ ಶೋಗಳಲ್ಲಿ ಭಾಗವಹಿಸಿದ ಅನುಭವ ಅವರಿಗೆ ಇದೆ. ಅನೇಕ ಸಿನಿಮಾ ಕೆಲಸಗಳಲ್ಲಿ ಸಂಯುಕ್ತಾ ಹೆಗ್ಟೆ ಬ್ಯುಸಿ ಆಗಿದ್ದಾರೆ.

ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸುವ ಮೂಲಕ ಸಂಯುಕ್ತಾ ಹೆಗಡೆ ಅವರು ಬಹುಭಾಷೆಯ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ‘ಕ್ರೀಂ’ ಸೇರಿದಂತೆ ಹಲವು ಚಿತ್ರಗಳು ಅವರ ಕೈಯಲ್ಲಿವೆ. ಅವರು ಉತ್ತಮ ಡ್ಯಾನ್ಸರ್ ಕೂಡ ಹೌದು.
Published On - 4:03 pm, Tue, 17 May 22