ವೇಗವಾಗಿ ವಿವಿಧ ಬಣ್ಣಗಳನ್ನು ಗುರುತಿಸುವಲ್ಲಿ ಹುಡುಗಿಯರೇ ಮುಂದು; ಇದರ ಹಿಂದಿನ ಕಾರಣವೇನು?
TV9 Web | Updated By: ganapathi bhat
Updated on:
Mar 13, 2022 | 8:30 AM
ಹುಡುಗರನ್ನು ಹೋಲಿಸಿ ನೋಡಿದರೆ ಹುಡುಗಿಯರು ಬಣ್ಣಗಳ ಬಗ್ಗೆ ಹೆಚ್ಚು ತಿಳಿದಿರುವುದನ್ನು ನೀವು ಗಮನಿಸಿರುತ್ತೀರಿ. ಹುಡುಗಿಯರು ಒಂದೇ ರೀತಿಯ ಬಣ್ಣಗಳ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುತ್ತಾರೆ. ಮತ್ತು ಅದರ ಆಧಾರದ ಮೇಲೆಯೇ ಅವರು ಶಾಪಿಂಗ್ ಕೂಡ ಮಾಡುತ್ತಾರೆ.
1 / 5
ಹುಡುಗರನ್ನು ಹೋಲಿಸಿ ನೋಡಿದರೆ ಹುಡುಗಿಯರು ಬಣ್ಣಗಳ ಬಗ್ಗೆ ಹೆಚ್ಚು ತಿಳಿದಿರುವುದನ್ನು ನೀವು ಗಮನಿಸಿರುತ್ತೀರಿ. ಹುಡುಗಿಯರು ಒಂದೇ ರೀತಿಯ ಬಣ್ಣಗಳ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುತ್ತಾರೆ. ಮತ್ತು ಅದರ ಆಧಾರದ ಮೇಲೆಯೇ ಅವರು ಶಾಪಿಂಗ್ ಕೂಡ ಮಾಡುತ್ತಾರೆ. ಆದರೆ, ಹೀಗೆ ಬಣ್ಣಗಳ ಗುರುತಿಸುವಿಕೆ ಹೆಚ್ಚಿರಲು ಇದರಲ್ಲಿ ವಿಜ್ಞಾನವೂ ಒಂದು ಕಾರಣವಂತೆ! ಇದು ವಿಜ್ಞಾನದ ಕಾರಣದಿಂದ ಸಂಭವಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಹುಡುಗಿಯರು ಹೆಚ್ಚು ಬಣ್ಣಗಳ ಬಗ್ಗೆ ತಿಳಿದಿರುವುದರ ಹಿಂದಿನ ಕಾರಣ ಏನು ಎಂದು ಇಲ್ಲಿ ತಿಳಿಯೋಣ.
2 / 5
color-meanings.com ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬಣ್ಣಗಳನ್ನು ಗುರುತಿಸುವಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ವೇಗವನ್ನು ಹೊಂದಿದ್ದಾರೆ. ಮತ್ತು ಅವರು ಹೆಚ್ಚು ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಹಿಳೆಯರು ಯಾವುದೇ ಒಂದು ಬಣ್ಣದ ವಿವಿಧ ಛಾಯೆಗಳನ್ನು ಗುರುತಿಸುತ್ತಾರೆ ಮತ್ತು ಅದರ ಹೆಸರಿನಿಂದ ಅದನ್ನು ತಿಳಿದುಕೊಳ್ಳುತ್ತಾರೆ.
3 / 5
ಬಣ್ಣ ಗುರುತಿಸುವಿಕೆಯ ಅಧ್ಯಯನದಲ್ಲಿ ಪುರುಷರು ಮತ್ತು ಮಹಿಳೆಯರು ಒಂದೇ ಬಣ್ಣವನ್ನು ವಿಭಿನ್ನವಾಗಿ ಗ್ರಹಿಸುತ್ತಾರೆ ಎಂಬುದಕ್ಕೆ ಪುರಾವೆಗಳಿವೆ. ಪುರುಷರು ಸರಳ ರೀತಿಯಲ್ಲಿ ಬಣ್ಣವನ್ನು ನೋಡುತ್ತಾರೆ, ಆದರೆ ಮಹಿಳೆಯರು ಆ ಬಣ್ಣದೊಳಗೆ ಇರುವ ಸೂಕ್ಷ್ಮ ಬಣ್ಣವನ್ನು, ವ್ಯತ್ಯಾಸವನ್ನು ಗುರುತಿಸುತ್ತಾರೆ. ಆದ್ದರಿಂದ, ಬಣ್ಣಗಳ ವ್ಯತ್ಯಾಸವನ್ನು ಕಂಡುಹಿಡಿಯುವ ವಿಷಯಕ್ಕೆ ಬಂದಾಗ, ಇಲ್ಲಿ ಮಹಿಳೆಯರು ಪುರುಷರನ್ನು ಮೀರಿಸುತ್ತಾರೆ.
4 / 5
ಕೆಂಪು ಬಣ್ಣ ಅಥವಾ ಇನ್ನಾವುದೇ ಬಣ್ಣದಲ್ಲಿ ಇರುವ ಛಾಯೆಗಳನ್ನು ಗುರುತಿಸುವಲ್ಲಿ ಪುರುಷರು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೆಂಪು ಬಣ್ಣವನ್ನು ಚೆರ್ರಿ ರೆಡ್, ರೋಸ್ ರೆಡ್, ಜಾಮ್ ರೆಡ್, ಗಾರ್ನೆಟ್ ರೆಡ್, ರೂಬಿ ರೆಡ್, ಸ್ಕಾರ್ಲೆಟ್ ರೆಡ್, ವೈನ್ ರೆಡ್, ಆಪಲ್ ರೆಡ್, ಬ್ಲಡ್ ರೆಡ್, ಸಾಂಗ್ರಿಯಾ ರೆಡ್, ಬೆರ್ರಿ ರೆಡ್, ಬ್ಲಶ್ ರೆಡ್ ಎಂದೆಲ್ಲಾ ಗುರುತಿಸಬಹುದು. ಹುಡುಗಿಯರು ಹೀಗೆಯೇ ಗುರುತಿಸಿದರೆ, ಬಹುತೇಕ ಪುರುಷರು ಮಾತ್ರ ಈ ಎಲ್ಲಾ ಬಣ್ಣಗಳನ್ನು ನೇರವಾಗಿ ಕೆಂಪು ಬಣ್ಣ ಎಂದು ತಿಳಿಸುತ್ತಾರೆ.
5 / 5
ಮಹಿಳೆಯರು ಮತ್ತು ಪುರುಷರ ಬಣ್ಣ ಗುರುತಿಸುವಿಕೆಯನ್ನು ಅಧ್ಯಯನ ಮಾಡಿದ ನ್ಯೂಯಾರ್ಕ್ (ಯುಎಸ್ಎ) ನಲ್ಲಿರುವ ಬ್ರೂಕ್ಲಿನ್ ಕಾಲೇಜು ಈ ಬಗ್ಗೆ ಸ್ಪಷ್ಟ ಚಿತ್ರಣವನ್ನು ಹೊಂದಿಲ್ಲ. ಆದರೆ ಈ ಅಧ್ಯಯನದಿಂದ ಬಹಳಷ್ಟು ಮಾಹಿತಿಗಳು ಹೊರಬಂದಿದೆ. ಬಣ್ಣಗಳ ಗುರುತಿಸುವಿಕೆಯು ಪುರುಷರು ಮತ್ತು ಮಹಿಳೆಯರಲ್ಲಿ ವಿಭಿನ್ನವಾಗಿರುವ ಹಾರ್ಮೋನುಗಳಿಗೆ ಸಂಬಂಧಿಸಿದೆ ಎಂದು ಅಧ್ಯಯನವು ಹೇಳುತ್ತದೆ. ಸಂಶೋಧಕರ ಪ್ರಕಾರ, ಪುರುಷರು ಮತ್ತು ಮಹಿಳೆಯರ ಆರಂಭಿಕ ಬೆಳವಣಿಗೆಯ ಸಮಯದಲ್ಲಿ, ಟೆಸ್ಟೋಸ್ಟೆರಾನ್ ಮೆದುಳಿನ ದೃಷ್ಟಿ, ಅಭಿವ್ಯಕ್ತಿ, ಕಾರ್ಟೆಕ್ಸ್ನಲ್ಲಿರುವ ನರಕೋಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.