- Kannada News Photo gallery Kolaramma birth anniversary celebrations devotees visited temple Kolar kannada news
ಕೋಲಾರ: ಕೋಲಾರಮ್ಮ ಜನ್ಮ ದಿನೋತ್ಸವ ಸಂಭ್ರಮ, ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ
ಕೋಲಾರದ ಕೋಲಾರಮ್ಮ ದೇವಸ್ಥಾನದಲ್ಲಿ ಜನ್ಮ ದಿನೋತ್ಸವ ಸಂಭ್ರಮ ಮನೆ ಮಾಡಿದೆ. ಕೋಲಾರದ ಶಕ್ತಿದೇವತೆ ಕೋಲಾರಮ್ಮನಿಗೆ ಇಂದು ಜನ್ಮ ದಿನೋತ್ಸವ ಹಿನ್ನೆಲೆ ದೇವಸ್ಥಾನ ಹಾಗೂ ತಾಯಿಯನ್ನು ಹೂಗಳಿಂದ ಅಲಂಕರಿಸಲಾಗಿದೆ. ತಾಯಿಯ ದರ್ಶನ ಮಾಡಲು ಜನ ಸಾಗರವೇ ಹರಿದು ಬಂದಿದೆ.
Updated on: Jul 27, 2024 | 11:40 AM

ಕೋಲಾರದಲ್ಲಿಂದು ಕೋಲಾರಮ್ಮ ಜನ್ಮ ದಿನೋತ್ಸವ ಸಂಭ್ರಮ ಮನೆ ಮಾಡಿದೆ. ಕೋಲಾರದ ಶಕ್ತಿದೇವತೆ, ಮೈಸೂರು ಚಾಮುಂಡೇಶ್ವರಿ ದೇವಿಯ ಪ್ರತಿರೂಪವಾಗಿರುವ ಕೋಲಾರಮ್ಮನ ದರ್ಶನ ಮಾಡಲು ಜನ ಸಾಗರವೇ ಹರಿದು ಬಂದಿದೆ.

ಕೋಲಾರಮ್ಮ ಜನ್ಮದಿನೋತ್ಸವ ಹಿನ್ನೆಲೆ ದೇವಾಲಯಕ್ಕೆ ಜನ ಸಾಗರ ಹರಿದು ಬಂದಿದ್ದು ಸರತಿ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ದೇವಾಲಯಕ್ಕೆ ಭಕ್ತರಿಂದ ಅದ್ದೂರಿ ಹೂವಿನ ಅಲಂಕಾರ ಮಾಡಲಾಗಿದೆ.

ಅಮ್ಮನವರ ಜನ್ಮದಿನಾಚರಣೆ ಹಿನ್ನೆಲೆ ದೇವಾಲಯಕ್ಕೆ ಬರುವ ಮಹಿಳೆಯರಿಗೆ ಅರಿಸಿನ ಕುಂಕುಮ ಕೊಟ್ಟು ಸತ್ಕಾರ ಮಾಡಲಾಗುತ್ತಿದೆ. ಕೋಲಾರಮ್ಮ ಉತ್ಸವ ಮೂರ್ತಿಗೂ ಅದ್ದೂರಿ ಅಲಂಕಾರ ಮಾಡಲಾಗಿದೆ.

ಇಲ್ಲಿನ ಕೋಟೆಯಲ್ಲಿರುವ ಕೋಲಾರಮ್ಮ ದೇವಸ್ಥಾನದಲ್ಲಿ ಇಂದು ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯ ನೆರವೇರಿದೆ. ಲಲಿತ ಸಹಸ್ರ ನಾಮ, ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ ನಡೆಯಿತು.

ಕೋಲಾರಮ್ಮ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿಯ ಸಹೋದರಿ ಎಂದು ಹೇಳಲಾಗುತ್ತೆ. ಸುಮಾರು 4 ಅಡಿ ಎತ್ತರದ ಶಿಲೆಯಲ್ಲಿ ತಾಯಿಯ ರೂಪ ಅರಳಿದೆ.

ಕೋಲಾರಮ್ಮ ದೇವಾಲಯದಲ್ಲಿ 5 ಅಡಿ ಎತ್ತರದ ಚೇಳೂರಮ್ಮ ದೇವಿ ಇದೆ. ಇದು ರಾಜ್ಯದಲ್ಲೇ ಅಪರೂಪದ ವಿಗ್ರಹವಾಗಿದೆ. ಮನೆಗಳಲ್ಲಿ ಕಾಣಿಸುವ ಚೇಳು, ಜರಿಗಳಂತಹ ವಿಷ ಜಂತುಗಳು ಅಪಾಯದಿಂದ ಪಾರಾಗಲು ಜನರು ಈ ದೇವಾಲಯಕ್ಕೆ ಬಂದು ಚೇಳೂರಮ್ಮನಿಗೆ ಹರಕೆ ಹೊತ್ತುಕೊಳ್ಳುತ್ತಾರೆ.

ಕೋಲಾರಮ್ಮ ಜನ್ಮದಿನೋತ್ಸವ ಹಿನ್ನೆಲೆ ದೇವಾಲಯ ತುಂಬೆಲ್ಲ ಅಲಂಕಾರ ಮಾಡಲಾಗಿದ್ದು ಮುಂಜಾನೆಯಿಂದಲೂ ಭಕ್ತರು ಬಂದು ತಾಯಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ತಾಯಿಯನ್ನೂ ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿದ್ದು ದೇವಾಲಯದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
























