Undenaama Movie: ‘2020’ ಅಲ್ಲ, ಇದು ‘ಉಂಡೆನಾಮ’; ಕೋಮಲ್​ ಚಿತ್ರಕ್ಕೆ ಹೊಸ ಶೀರ್ಷಿಕೆ: ಏ.14ಕ್ಕೆ ಬಿಡುಗಡೆ

Updated on: Mar 20, 2023 | 4:38 PM

Komal Kumar: ಬಹುದಿನಗಳ ಬಳಿಕ ನಟ ಕೋಮಲ್​ ಅವರು ದೊಡ್ಡ ಪರದೆಯಲ್ಲಿ ಕಾಮಿಡಿ ಕಚಗುಳಿ ಇಡಲು ಬರುತ್ತಿದ್ದಾರೆ. ಅವರು ನಟಿಸಿರುವ ‘ಉಂಡೆನಾಮ’ ಚಿತ್ರ ರಿಲೀಸ್​ಗೆ ಸಜ್ಜಾಗಿದೆ.

1 / 5
ನಟ ಕೋಮಲ್​ ಅಭಿನಯದ ಹೊಸ ಚಿತ್ರಕ್ಕೆ ಈ ಮೊದಲು ‘2020’ ಎಂದು ಶೀರ್ಷಿಕೆ ಇಡಲಾಗಿತ್ತು. ಆದರೆ ಈಗ ಟೈಟಲ್​ ಬದಲಾಯಿಸಲಾಗಿದೆ. ಈ ಸಿನಿಮಾಗೆ ‘ಉಂಡೆನಾಮ’ ಎಂದು ಹೆಸರು ಇಡಲಾಗಿದೆ.

ನಟ ಕೋಮಲ್​ ಅಭಿನಯದ ಹೊಸ ಚಿತ್ರಕ್ಕೆ ಈ ಮೊದಲು ‘2020’ ಎಂದು ಶೀರ್ಷಿಕೆ ಇಡಲಾಗಿತ್ತು. ಆದರೆ ಈಗ ಟೈಟಲ್​ ಬದಲಾಯಿಸಲಾಗಿದೆ. ಈ ಸಿನಿಮಾಗೆ ‘ಉಂಡೆನಾಮ’ ಎಂದು ಹೆಸರು ಇಡಲಾಗಿದೆ.

2 / 5

ಲಾಕ್​ಡೌನ್​ ಕುರಿತ ಕಥೆಯನ್ನು ಹೊಂದಿರುವ ಈ ಸಿನಿಮಾಗೆ ಕೆ.ಎಲ್​. ರಾಜಶೇಖರ್​ ಅವರು ನಿರ್ದೇಶನ ಮಾಡಿದ್ದಾರೆ. ಕನ್ನಡ ಚಿತ್ರರಂಗ ಸೆಲೆಬ್ರಿಟಿಗಳು ‘ಉಂಡೆನಾಮ’ ಶೀರ್ಷಿಕೆ ಕೇಳಿ ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ನಗು ಉಕ್ಕಿಸುವ ಟೈಟಲ್’​ ಎಂಬ ಅಭಿಪ್ರಾಯ ಎಲ್ಲರಿಂದ ವ್ಯಕ್ತವಾಗಿದೆ.

3 / 5

‘ಉಂಡೆನಾಮ’ ಸಿನಿಮಾದಲ್ಲಿ ಕೋಮಲ್​ ಜೊತೆ ಹರೀಶ್ ರಾಜ್, ಧನ್ಯಾ ಬಾಲಕೃಷ್ಣ, ತಬಲಾನಾಣಿ, ಅಪೂರ್ವ, ವೈಷ್ಣವಿ, ತನಿಷಾ ಕುಪ್ಪಂಡ, ಬ್ಯಾಕ್ ಜನಾರ್ಧನ್ ಮುಂತಾದವರು ನಟಿಸಿದ್ದಾರೆ. ‘ಎನ್.ಕೆ. ಸ್ಟುಡಿಯೋಸ್’ ಮೂಲಕ ಸಿ. ನಂದಕಿಶೋರ್ ಅವರು ನಿರ್ಮಾಣ ಮಾಡಿದ್ದಾರೆ.

4 / 5

ಏಪ್ರಿಲ್ 14ರಂದು ರಾಜ್ಯಾದ್ಯಂತ ‘ಉಂಡೆನಾಮ’ ಸಿನಿಮಾ ಬಿಡುಗಡೆ ಆಗಲಿದೆ. ಬಹುದಿನಗಳ ಬಳಿಕ ಕೋಮಲ್​ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ಸಹಜವಾಗಿ ನಿರೀಕ್ಷೆ ಹೆಚ್ಚಾಗಿದೆ. ಪೋಸ್ಟರ್​ಗಳು ಗಮನ ಸೆಳೆಯುತ್ತಿವೆ.

5 / 5

ರಾಜಶೇಖರ್ ಅವರು ‘ಉಂಡೆನಾಮ’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಶ್ರೀಧರ್ ವಿ. ಸಂಭ್ರಮ್​ ಅವರ ಸಂಗೀತ ನಿರ್ದೇಶನ, ನವೀನ್​ ಕುಮಾರ್ ಅವರ ಛಾಯಾಗ್ರಾಹಣ ಹಾಗೂ ಕೆ.ಎಂ. ಪ್ರಕಾಶ್ ಅವರ ಸಂಕಲನದಲ್ಲಿ ಈ ಚಿತ್ರ ಮೂಡಿಬಂದಿದೆ.

Published On - 4:38 pm, Mon, 20 March 23

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us