ಅದು ದಕ್ಷಿಣ ಭಾರತದ ಕುಂಭ ಮೇಳವೆಂದೇ ಪ್ರಸಿದ್ದಿ ಪಡೆದ ಜಾತ್ರೆ. ಕರಾಳ ಕೊರೊನಾದಿಂದಾಗಿ ಎರಡು ವರ್ಷದಿಂದ ಬಹಳ ಸರಳವಾಗಿ ಜಾತ್ರೆ ಮಾಡಲಾಗಿತ್ತು. ಆದ್ರೆ ಈ ಬಾರಿ 6 ಲಕ್ಷ ಭಕ್ತಸಾಗರ ಸೇರಿ ಅದ್ದೂರಿ ಜಾತ್ರೆ ಮಾಡೋ ಮೂಲಕ ಗತವೈಭವನ್ನ ಮರಕಳಿಸುವಂತೆ ಮಾಡಿದೆ. ಅದ್ದೂರಿಯಾಗಿ ನೆರವೇರಿದ ಕೊಪ್ಪಳದ ಗವಿಮಠ ಜಾತ್ರೆಯಲ್ಲಿ ಲಕ್ಷಾಂತರ ಭಕ್ತಸಾಗರ ಪಾಲ್ಗೊಂಡಿತ್ತು.
ಹೌದು.ಇಲ್ಲಿ ಸೇರುವ ಭಕ್ತ ಸಾಗರವನ್ನ ನೋಡಿಯೇ ಇದು ದಕ್ಷಿಣದ ಕುಂಭಮೇಳ ಎಂದಿರಬೇಕು. ಯಾಕೆಂದ್ರೆ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿರೋ ಈ ದೃಶ್ಯ ನೋಡಿದ್ರೆ ಇದು ದೇವರ ಜಾತ್ರೆನಾ ಇಲ್ಲ, ಜನಜಾತ್ರೆನಾ ಎನ್ನೋದು ಗೊತ್ತಾಗಲ್ಲ. ಯಾಕೆಂದ್ರೆ ಕಣ್ಣಿಗೂ ನಿಲಕದಷ್ಟು ಜಾಗವೇ ಸಾಲದಷ್ಟು ಭಕ್ತಸಾಗರವೇ ಹರಿದು ಬಂದಿತ್ತು. ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ರು.
ಸಂಜೆ ವೇಳೆಗೆ ಜನಪ್ರವಾಹವೇ ಸೇರಿತ್ತು. ನೆರೆದಿದ್ದ ಭಕ್ತ ಸಾಗದದ ಮಧ್ಯೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಶಿರ ಭಾಗುತ್ತಿದ್ದಂತೆ ಭಕ್ತಗಣದ ಕರತಾಡನ ಮುಗಿಲು ಮುಟ್ಟಿತ್ತು.
ಅಂದಾಜು ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಸೇರಿದ್ದ ಭಕ್ತ ಸಮೂಹ ನೋಡಿ ರಥೋತ್ಸವಕ್ಕೆ ಚಾಲನೆ ನೀಡೋಕೆ ಬಂದಿದ್ದ ಇಶಾ ಫೌಂಡೇಶನ್ ನ ಸದ್ಗುರು ಜಗ್ಗಿ ವಾಸುದೇವ ಅವರೇ ಮೂಕವಿಸ್ಮಿತರಾಗಿದ್ದರು.
ಅತ್ತ ರಥೋತ್ಸವವಕ್ಕೆ ಚಾಲನೆ ನೀಡ್ತಿದ್ದಂತೆ ಇತ್ತ ಭಕ್ತಗಣ ಮಧ್ಯೆ ರಥ ಮುನ್ನಡೆಯಿತು.
ರಥೋತ್ಸವ ಮುಗಿದು ಕತ್ತಲಾದ್ರು ಮಠದ ಆವರದಣದಲ್ಲಿ ಮಾತ್ರ ಭಕ್ತರ ಸಂಖ್ಯೆ ಮಾತ್ರ ಕಡಿಮೆಯಾಗಿರಲಿಲ್ಲ. ಯಾಕೆಂದ್ರೆ ಮಠದಿಂದ ಕೈಲಾಸ ಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೇಶದ ನಾನಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅದಕ್ಕಾಗಿ ಜನ ರಸ್ತೆಯನ್ನೂ ಲೆಕ್ಕಸಿದೇ ಕಳಿತಿದ್ದು ಭಕ್ತಸಾಗರ ಅಜ್ಜನ ಮೇಲೆ ಮೇಲಿಟ್ಟಿರೋ ಭಕ್ತಿಗೆ ಸಾಕ್ಷಿಯಾಗಿತ್ತು. ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಸಾಧುಸಂತರ ಮಾತನ್ನ ಕೇಳಿಸಿಕೊಂಡು ಕುಳಿತಿದ್ದರು
ಜಗ್ಗಿ ವಾಸುದೇವ, ರಥೋತ್ಸವಕ್ಕೆ ಚಾಲನೆ ನೀಡಿದ ಸ್ವಾಮೀಜಿ.
ಇನ್ನು ಗವಿಮಠದ ವಿಶೇಷ ಅಂದ್ರೆ ಅದು ಮಹಾದಾಸೋಹ, ಅಜ್ಜನ ಜಾತ್ರೆಗೆ ಅದೆಷ್ಟೇ ಭಕ್ತರು ಬಂದರೂ ಒಬ್ಬರಿಗೂ ಕಿಂಚಿತ್ತೂ ಕಡಿಮೆಯಾಗದಂತೆ ವಿಶೇಷ ಪ್ರಸಾದ ವ್ಯವಸ್ಥೆಯನ್ನ ಮಾಡಲಾಗಿರುತ್ತಿದೆ.
ಅಷ್ಟಾಗಿದ್ದೇ ತಡ ಅತ್ತ ಕ್ಷಣಕ್ಷಣಕ್ಕೂ ಕುತೂಹಲದಿಂದ ಕಾಯುತ್ತಿದ್ದ ಭಕ್ತ ಸಾಗರ, ರಥವನ್ನ ಏಳೆಯುವುದರ ಮೂಲಕ ಹೆಜ್ಜೆ ಹಾಕಿದ್ರು. ಸಂಭ್ರಮ ಸಡಗರದಿಂದ ನೆರೆದಿದ್ದ ಐದಾರು ಲಕ್ಷ ಜನ ಗವಿಸಿದ್ದೇಶ್ವರನ ರಥೋತ್ಸವವನ್ನ ಕಣ್ತುಂಬಿಕೊಂಡ್ರು.
ಅತ್ತ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹಕ್ಕೆ ತರಹೇವಾರಿ ಭೋಜನದ ವ್ಯವಸ್ಥೆ ಮಾಡಾಗಿತ್ತು. 15 ಲಕ್ಷ ಜೋಳದ ರೊಟ್ಟಿ,7 ಲಕ್ಷ ಶೇಂಗಾ ಹೊಳಿಗೆ 275 ಕ್ವಿಂಟಾಲ್ ಮಾದಲಿ ಜೊತೆಗೆ ಎರಡು ರೀತಿ ಫಲ್ಯ ಹಾಗೂ ಅನ್ನಸಾರು ಮಾಡಲಾಗಿತ್ತು. ಎಲ್ಲಿಂದೆಲ್ಲಿಂದಲೋ ಬಂದಿದ್ದ ಭಕ್ತ ಸಮೂದ ಮಹಾ ಪ್ರಸಾದ ಸೇವಿಸಿ ಪಾವನರಾದ್ರು. ಇತ್ತ ವೇದಿಕೆಯ ಮೇಲೆ ನಾನಾ ಮಠದ ಸ್ವಾಮೀಜಿಗಳು ಹಾಗೂ ರಾಜಕಾರಣಿಗಳು ಜಾತ್ರೆಯಲ್ಲಿ ಉಪಸ್ಥಿತರಿದ್ದರು.
ಭಾನುವಾರ ಬೆಳಿಗ್ಗೆಯಿಂದಲೇ ರಾಜ್ಯದ ನಾನಾ ಜಿಲ್ಲೆಗಳಿಂದ ಗವಿಸಿದ್ದೇಶ್ವರನ ಜಾತ್ರೆಗೆ ಭಕ್ತ ಸಾಗರವೇ ಹರಿದು ಬಂದಿತ್ತು. ಮಧ್ಯಾಹ್ನದ ವೇಳೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಮಠದ ಆವರಣದಲ್ಲಿ ಭಕ್ತಗಣ ಜಮಾಯಿಸಿದ್ದರು. ಗವಿಸಿದ್ದೇಶ್ವರನ ಪಾದಸ್ಪರ್ಶ ಮಾಡಿ ಪುನಿತರಾದ್ರು.
ಜನಸಾಗರದ ಮಧ್ಯೆ ಅದ್ದೂರಿ ರಥೋತ್ಸವ- ಕಣ್ಣು ಹಾಯಿಸಿದಷ್ಟು ಜನ ಸಾಗರ. ಕತ್ತು ತಿರುಗಿಸಿದಷ್ಡು ಕಾಣ್ತಿರೋ ಭಕ್ತಪ್ರವಾಹ..ಯಸ್ ಜಾತ್ರೆ ಅಂದ್ರೆ ಇದು. ಜನಸಾಗರ ಅಂದ್ರೆ ಇದೇ ಇರಬೇಕು.
ಒಟ್ನಲ್ಲಿ ಎರಡೂವರೆ ವರ್ಷಗಳ ಕೊರೊನಾದ ಬಳಿಕ ಗವಿಮಠದ ಭಾರಿ ಜಾತ್ರೆ ಮತ್ತೊಮ್ಮೆ ತನ್ನ ವೈಭವನ್ನ ಸಾರಿ ಹೇಳಿತ್ತು. ದಶದಿಕ್ಕುಗಳನ್ನ ಲೆಕ್ಕಿಸದೇ ಜನ ಪ್ರವಾಹದ ರೀತಿ ಹರಿದು ಬಂದಿದ್ದರು. ಸೋಮವಾರ-ಮಂಗಳವಾರವೂ ಕೂಡಾ ಜಾತ್ರೆ ನಡೆಯಲಿದ್ದು ಭಕ್ತರ ಸಂಖ್ಯೆ ಇನ್ನೂ ಹೆಚ್ಚಾಗೋ ಸಾಧ್ಯತೆ ಇದೆ. (ವರದಿ: ದತ್ತಾತ್ರೇಯ ಪಾಟೀಲ್, ಟಿ ವಿ9, ಕೊಪ್ಪಳ
ಈ ಬಾರಿಯೂ ಸುಮಾರು 10 ಎಕರೆ ವಿಶಾಲವಾದ ಪ್ರದೇಶದಲ್ಲಿ ಪೆಂಡಾಲ್ ಹಾಕಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಭಾರಿ 15 ಲಕ್ಷಕ್ಕೂ ಹೆಚ್ಚು ರೊಟ್ಟಿ, 7 ಲಕ್ಷ ಶೇಂಗಾ ಹೋಳಿಗೆ, 270 ಕ್ವಿಂಟಾಲ್ ತುಪ್ಪದ ಜೊತೆಗೆ ಅನ್ನ ಸಾರು ಕೂಡಾ ಇತ್ತು.
ಈ ಬಾರಿಯೂ ಸುಮಾರು 10 ಎಕರೆ ವಿಶಾಲವಾದ ಪ್ರದೇಶದಲ್ಲಿ ಪೆಂಡಾಲ್ ಹಾಕಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಭಾರಿ 15 ಲಕ್ಷಕ್ಕೂ ಹೆಚ್ಚು ರೊಟ್ಟಿ, 7 ಲಕ್ಷ ಶೇಂಗಾ ಹೋಳಿಗೆ, 270 ಕ್ವಿಂಟಾಲ್ ತುಪ್ಪದ ಜೊತೆಗೆ ಅನ್ನ ಸಾರು ಕೂಡಾ ಇತ್ತು.
ಈ ಬಾರಿಯೂ ಸುಮಾರು 10 ಎಕರೆ ವಿಶಾಲವಾದ ಪ್ರದೇಶದಲ್ಲಿ ಪೆಂಡಾಲ್ ಹಾಕಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಭಾರಿ 15 ಲಕ್ಷಕ್ಕೂ ಹೆಚ್ಚು ರೊಟ್ಟಿ, 7 ಲಕ್ಷ ಶೇಂಗಾ ಹೋಳಿಗೆ, 270 ಕ್ವಿಂಟಾಲ್ ತುಪ್ಪದ ಜೊತೆಗೆ ಅನ್ನ ಸಾರು ಕೂಡಾ ಇತ್ತು.
ಇನ್ನು ಗವಿಮಠದ ವಿಶೇಷ ಅಂದ್ರೆ ಅದು ಮಹಾದಾಸೋಹ, ಅಜ್ಜನ ಜಾತ್ರೆಗೆ ಅದೆಷ್ಟೇ ಭಕ್ತರು ಬಂದರೂ ಒಬ್ಬರಿಗೂ ಕಿಂಚಿತ್ತೂ ಕಡಿಮೆಯಾಗದಂತೆ ವಿಶೇಷ ಪ್ರಸಾದ ವ್ಯವಸ್ಥೆಯನ್ನ ಮಾಡಲಾಗಿರುತ್ತಿದೆ.
ಇನ್ನು ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ವೇದಿಕೆಗೆ ಬರುತ್ತಿದ್ದಂತೆ ನೆರೆದಿದ್ದ ಭಕ್ತದ ಸಾಗರದ ಕರತಾಡನ ಮುಗಿಲು ಮುಟ್ಟಿತ್ತು. ಬಳಿಕ ಸರಿಯಾಗಿ ಸಂಜೆ 5.30ಕ್ಕೆ ಆಧ್ಯಾತಿಕ ಚಿಂತಕ, ಸದ್ಗುರು ಜಗ್ಗಿ ವಾಸುದೇವ ಧ್ವಜಾರೋಹಣ ಮಾಡೋ ಮೂಲಕ ರಥೋತ್ಸವವಕ್ಕೆ ಚಾಲನೆ ನೀಡಿದ್ರು....
ಇನ್ನು ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ವೇದಿಕೆಗೆ ಬರುತ್ತಿದ್ದಂತೆ ನೆರೆದಿದ್ದ ಭಕ್ತದ ಸಾಗರದ ಕರತಾಡನ ಮುಗಿಲು ಮುಟ್ಟಿತ್ತು. ಬಳಿಕ ಸರಿಯಾಗಿ ಸಂಜೆ 5.30ಕ್ಕೆ ಆಧ್ಯಾತಿಕ ಚಿಂತಕ, ಸದ್ಗುರು ಜಗ್ಗಿ ವಾಸುದೇವ ಧ್ವಜಾರೋಹಣ ಮಾಡೋ ಮೂಲಕ ರಥೋತ್ಸವವಕ್ಕೆ ಚಾಲನೆ ನೀಡಿದ್ರು...
ಅಷ್ಟಾಗಿದ್ದೇ ತಡ ಅತ್ತ ಕ್ಷಣಕ್ಷಣಕ್ಕೂ ಕುತೂಹಲದಿಂದ ಕಾಯುತ್ತಿದ್ದ ಭಕ್ತ ಸಾಗರ, ರಥವನ್ನ ಏಳೆಯುವುದರ ಮೂಲಕ ಹೆಜ್ಜೆ ಹಾಕಿದ್ರು. ಸಂಭ್ರಮ ಸಡಗರದಿಂದ ನೆರೆದಿದ್ದ ಐದಾರು ಲಕ್ಷ ಜನ ಗವಿಸಿದ್ದೇಶ್ವರನ ರಥೋತ್ಸವವನ್ನ ಕಣ್ತುಂಬಿಕೊಂಡ್ರು.
ಅತ್ತ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹಕ್ಕೆ ತರಹೇವಾರಿ ಭೋಜನದ ವ್ಯವಸ್ಥೆ ಮಾಡಾಗಿತ್ತು. 15 ಲಕ್ಷ ಜೋಳದ ರೊಟ್ಟಿ,7 ಲಕ್ಷ ಶೇಂಗಾ ಹೊಳಿಗೆ 275 ಕ್ವಿಂಟಾಲ್ ಮಾದಲಿ ಜೊತೆಗೆ ಎರಡು ರೀತಿ ಫಲ್ಯ ಹಾಗೂ ಅನ್ನಸಾರು ಮಾಡಲಾಗಿತ್ತು. ಎಲ್ಲಿಂದೆಲ್ಲಿಂದಲೋ ಬಂದಿದ್ದ ಭಕ್ತ ಸಮೂದ ಮಹಾ ಪ್ರಸಾದ ಸೇವಿಸಿ ಪಾವನರಾದ್ರು. ಇತ್ತ ವೇದಿಕೆಯ ಮೇಲೆ ನಾನಾ ಮಠದ ಸ್ವಾಮೀಜಿಗಳು ಹಾಗೂ ರಾಜಕಾರಣಿಗಳು ಜಾತ್ರೆಯಲ್ಲಿ ಉಪಸ್ಥಿತರಿದ್ದರು.
ಒಟ್ನಲ್ಲಿ ಎರಡೂವರೆ ವರ್ಷಗಳ ಬಳಿಕ ನಡೆದ ಅದ್ದೂರಿ ರಥೋತ್ಸವ ನಡೆಸಲಾಯಿತು. ನೀರಿಕ್ಷೆಗೂ ಮೀರಿ ಮಠದತ್ತ ಬಂದಿದ್ದ ಜನರನ್ನ ನೋಡಿ ಶ್ರೀಗಳು ಒಂದು ಕ್ಷಣ ಮೂಕ ವಿಶ್ಮಿತರಾಗಿದ್ರು. ಅದೇನೇ ಇರಲಿ, ದಕ್ಷಿಣದ ಕುಂಭಮೇಳ ಅಂತ ಇಲ್ಲಿ ಸೆರೋ ಭಕ್ತ ಸಾಗವರನ್ನ ನೋಡೋ ಕರೆದಿರಬೇಕು ಅನ್ಸುತ್ತೆ.
ಇರುವೆಗಳಂತೆ ಕಾಣ್ತಿರೋ ಭಕ್ತರ ಈ ದೃಶ್ಯ ನೋಡಿದ್ರೆ ನಿಜಕ್ಕೂ ವರ್ಣನೆಗೂ ಪದಗಳು ಸಿಗೋದಿಲ್ಲ. ಅಷ್ಟೊಂದು ದೊಡ್ಡ ಮಟ್ಟದ ಜನಸಾಗರವೇ ಗವಿಸಿದ್ದೇಶ್ವನ ರಥೋತ್ಸವಕ್ಕೆ ಹರಿದು ಬಂದಿತ್ತು.