Updated on: Jan 09, 2023 | 4:54 PM
ಮಂಡ್ಯದ ಬೆಲ್ಲದ ಬರ್ಫಿಗೆ ಡಿಮ್ಯಾಂಡ್ ಬರ್ತಾಯಿರೋದು ಕೇವಲ ಮನ್ಮೂಲ್ ಗಷ್ಟೆ ಅಲ್ಲದೆ ರೈತರ ಮೊಗದಲ್ಲಿಯೂ ಮಂದಹಾಸ ಮೂಡಿಸಿದೆ.
ಧಾರವಾಡ ಅಂದ್ರೆ ಪೇಡಾ... ಬೆಳಗಾವಿ ಅಂದ್ರೆ ಕುಂದ ಎಂದು ಹೇಗೆ ಕರೆಯುತ್ತಾರೊ ಅದೇ ರೀತಿ ಈಗ ಮಂಡ್ಯ ಅಂದ್ರೆ ಬೆಲ್ಲದ ಬರ್ಫಿ ಎಂಬ ಟ್ರೆಂಡ್ ಸೃಷ್ಟಿಯಾಗಿದೆ.. ಅಷ್ಟಕ್ಕೂ ಈ ಬೆಲ್ಲದ ಬರ್ಫಿಯ ವಿಶೇಷತೆ ಏನು ಅದಕ್ಕೆ ಏನೆಲ್ಲ ಮಿಶ್ರಣ ಮಾಡ್ತಾರೆ ಅನ್ನೋದನ್ನ ನೊಡಿ
ಕೆಮಿಕಲ್ ರಹಿತ ಬೆಲ್ಲವನ್ನ ವಿಸಿ ಫಾರ್ಮ್ ನಲ್ಲಿ ರೈತರಿಂದ ನೇರವಾಗಿ ಕೊಳ್ತಾರೆ. ಬಳಿಕ ಆ ಬೆಲ್ಲವನ್ನ ಪಾಕ ಮಾಡಿ ಬಳಿಕ ಅದಕ್ಕೆ ಡ್ರೈ ಫ್ರೂಟ್ ಗಳಾದ ಗೋಡಂಬಿ, ಬಾದಾಮಿ ಹಾಗೂ ಕಲ್ಲಂಗಡಿ ಹಣ್ಣಿನ ಬೀಜಗಳನ್ನ ಮಿಶ್ರಣ ಮಾಡಿ ಶುದ್ಧ ಬೆಲ್ಲದ ಬರ್ಫಿಯನ್ನ ತಯಾರು ಮಾಡ್ತಾರೆ..
ಅಮಿತ್ ಶಾ ಇನಾಗ್ರೇಷನ್ ಮಾಡಿದ್ದೇ ಮಾಡಿದ್ದು.. ಮೆಗಾ ಡೇರಿಯಲ್ಲಿ ಹೊಸದಾಗಿ ಉತ್ಪಾದನೆ ಮಾಡುತ್ತಿರೊ ಬೆಲ್ಲದ ಬರ್ಫಿಗೆ ಇನ್ನಿಲ್ಲದ ಡಿಮ್ಯಾಂಡ್ ಸೃಷ್ಟಿಯಾಗಿದೆ.. ಮಾರ್ಕೆಟ್ ನಲ್ಲಿ ಬೆಲ್ಲದ ಬರ್ಫಿಯನ್ನ ಕೊಳ್ಳಲು ಜನ ನಾ ಮುಂದು ತಾ ಮುಂದು ಎಂದು ಕ್ಯೂ ನಲ್ಲಿ ನಿಲ್ತಾಯಿದ್ದಾರೆ.
ಹೌದು ಡಿಸೆಂಬರ್ 30 ರಂದು ಗೆಜ್ಜಲಗೆರೆಗೆ ಆಗಮಿಸಿದ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಮೆಗಾ ಡೇರಿಯನ್ನ ಉದ್ಘಾಟನೆ ಮಾಡಿದ್ದರು. ಇನ್ನು ದಿನಕ್ಕೆ 100 ಕೆಜಿಯಷ್ಟು ಬೆಲ್ಲದ ಬರ್ಫಿ ತಯಾರಾಗುತ್ತಿದೆ.. ಈಗ ಮಾರುಕಟ್ಟೆಯಲ್ಲಿ ಬೆಲ್ಲದ ಬರ್ಫಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದ್ಥು.. ಮುಂಬರುವ ದಿನಗಳಲ್ಲಿ ಉತ್ಪಾದನೆಯಲ್ಲಿ ಮತ್ತಷ್ಟು ಹೆಚ್ಚಿಸೋಕೆ ಮನ್ಮೂಲ್ ನಿರ್ಧರಿಸಿದೆ..
ಈ ಎಲ್ಲಾ ದೃಶ್ಯ ಕಣ್ಣಿಗೆ ಬಿದ್ದಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿರೊ ಮೆಗಾ ಡೇರಿಯಲ್ಲಿ. ವರದಿ: ಸೂರಜ್ ಪ್ರಸಾದ್ ಟಿವಿ9 ಮಂಡ್ಯ
ಅಷ್ಟಕ್ಕೂ ಈ ಬರ್ಫಿ ತಯಾರಾಗೋದು ಹೇಗೆ, ಅದಕ್ಕೆ ಏನೆಲ್ಲ ಮಿಶ್ರಣ ಮಾಡ್ತಾರೆ.. ಬೆಲ್ಲದ ಬರ್ಫಿ ಮಾರುಕಟ್ಟೆಯಲ್ಲಿ ಸೃಷ್ಟಿಸಿರೊ ಹವಾ ಹೇಗಿದೆ ಅನ್ನೋದ್ರ ಒಂದು ರಿಪೋರ್ಟ್ ನಿಮ್ಮ ಮುಂದೆ..
ಇನ್ನೂ ವಿಶೇಷ ಏನಪ್ಪ ಅಂದ್ರೆ ಮಧುಮೇಹಿಗಳು ಸಹ ಈ ಬೆಲ್ಲದ ಬರ್ಫಿಯನ್ನ ಸವಿಯಬಹುದು. ಹಾಗಾಗಿಯೇ ಈ ಬೆಲ್ಲದ ಬರ್ಫಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ ಎನ್ನುತ್ತಾರೆ ವ್ಯವಸ್ಥಾಪಕಿ ಚೇತನಾ.
ಮಧುಮೇಹಿಗಳ ಬಾಯಿಯನ್ನ ಸಿಹಿ ಮಾಡುತ್ತಿರೊ ಈ ಬರ್ಫಿ ಈಗ ಮಾರ್ಕೆಟ್ ಕಿಂಗ್ ಆಗ್ತಾಯಿದೆ..
ಆಗತಾನೆ ಇಳಿಸಿರೊ ಬಿಸಿ ಬಿಸಿ ಪಾಕ.. ಪಾಕವನ್ನ ಟ್ರೇ ನಲ್ಲಿ ಹಾಕುತ್ತಿರೊ ಮಹಿಳೆ.. ಕೈಯಲ್ಲಿ ಸ್ಕೇಲ್ ಹಿಡಿದು ಅಳತೆ ಪ್ರಕಾರ ಬರ್ಫಿಯನ್ನ ಕತ್ತರಿಸುತ್ತಿರೊ ಮಹಿಳೆ..
ಮಂಡ್ಯದ ಮನ್ಮೂಲ್ ನಲ್ಲಿ (ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ -Mandya District Co-operative Milk Producers Society's Union Limited) ತಯಾರಾಗುತ್ತಿರೊ ಬೆಲ್ಲದ ಬರ್ಫಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ..