ನಟಿ ಕೃತಿ ಶೆಟ್ಟಿ ಮಿಂಚುತ್ತಿರುವುದು ಪರಭಾಷೆಯಲ್ಲಾದರೂ ಅವರ ಮೂಲ ಕರ್ನಾಟಕದ ಮಂಗಳೂರು.
ಬಾಲಿವುಡ್ನ ಕೆಲ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದ ಕೃತಿ, ಕೆಲವು ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಂಡಿದ್ದರು.
ತೆಲುಗಿನ ‘ಉಪ್ಪೆನ’ ಸಿನಿಮಾ ಮೂಲಕ ನಾಯಕಿಯಾದರು ಕೃತಿ ಶೆಟ್ಟಿ, ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಯ್ತು.
‘ಉಪ್ಪೆನ’ ಸಿನಿಮಾದಿಂದಾಗಿ ಹಲವು ಅವಕಾಶಗಳು ಕೃತಿ ಶೆಟ್ಟಿಯನ್ನು ಅರಸಿ ಬಂದವು. ಕೃತಿ ತೆಲುಗಿನಲ್ಲಿ ಸಖತ್ ಬ್ಯುಸಿ ನಟಿಯಾದರು.
ಆದರೆ ‘ಉಪ್ಪೆನ’ ಸಿನಿಮಾದ ಬಳಿಕ ಯಾವುದೇ ದೊಡ್ಡ ಹಿಟ್ ಕೃತಿ ಶೆಟ್ಟಿಗೆ ಈ ವರೆಗೆ ಲಭಿಸಿಲ್ಲ. ಅವರ ಸಿನಿಮಾಗಳು ಪ್ಲಾಪ್ ಅಥವಾ ಸಾಧಾರಣ ಯಶಸ್ಸಷ್ಟೆ ಗಳಿಸುತ್ತಿವೆ.
ಸುಂದರಿಯಾಗಿರುವ ಜೊತೆಗೆ ಒಳ್ಳೆಯ ನಟಿಯೂ ಆಗಿರುವ ಕೃತಿ ಶೆಟ್ಟಿ ಒಂದೊಳ್ಳೆ ದೊಡ್ಡ ಹಿಟ್ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.
ಕೃತಿ ಶೆಟ್ಟಿ ಪ್ರಸ್ತುತ ಒಂದು ಮಲಯಾಳಂ ಸಿನಿಮಾ, ಎರಡು ತಮಿಳು ಹಾಗೂ ಒಂದು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.