Updated on: Dec 16, 2023 | 8:56 PM
ಕರ್ನಾಟಕ ಮೂಲದ ಕೃತಿ ಶೆಟ್ಟಿ, ಕನ್ನಡ ಸಿನಿಮಾಗಳಲ್ಲಿ ನಟಿಸುವುದ್ಯಾವಾಗ?
ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ನಟಿ ಕೃತಿ ಶೆಟ್ಟಿ, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಕೃತಿ ಶೆಟ್ಟಿ ಮೂಲತಃ ಕರ್ನಾಟಕ ಮೂಲದ ಚೆಲುವೆ, ಅವರ ಪೋಷಕರು ಅಪ್ಪಟ ಮಂಗಳೂರಿಗರು.
ಆದರೆ ಕೃತಿ ಶೆಟ್ಟಿ ಬೆಳೆದಿದ್ದೆಲ್ಲ ಮುಂಬೈನಲ್ಲಿ. ಅಲ್ಲಿಯೇ ಬಾಲ ನಟಿಯಾಗಿ, ಜಾಹೀರಾತು ಮಾಡೆಲ್ ಆಗಿ ಕೃತಿ ಹೆಸರು ಗಳಿಸಿದರು.
ಹಿಂದಿ ಸಿನಿಮಾಗಳಲ್ಲಿ ಬಾಲನಟಿಯಾಗಿದ್ದರೂ ಸಹ, ಕೃತಿ ನಟನೆಗೆ ಎಂಟ್ರಿ ನೀಡಿದ್ದು ತೆಲುಗಿನ ‘ಉಪ್ಪೆನ’ ಸಿನಿಮಾ ಮೂಲಕ.
‘ಉಪ್ಪೆನ’ ಸಿನಿಮಾ ಬಳಿಕ ಕೃತಿ ಶೆಟ್ಟಿ ತೆಲುಗು, ತಮಿಳು ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸದರು. ಒಂದು ಮಲಯಾಳಂ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
ಆದರೆ ಕೃತಿ ಶೆಟ್ಟಿ ಈ ವರೆಗೆ ಒಂದೂ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಕರ್ನಾಟಕ ಮೂಲದರೇ ಆದರೂ ಕನ್ನಡ ಸಿನಿಮಾದಲ್ಲಿ ಕೃತಿ ನಟಿಸಲಾಗಿಲ್ಲ.