
ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್. ಸಿನಿಮಾ ಸಂಗೀತ ಲೋಕದಲ್ಲಿ ಅವರ ಸಾಧನೆಗೆ ಬೇರೆ ಯಾರೂ ಸಾಟಿ ಇಲ್ಲ. ಅವರ ನಿಧನ ತೀವ್ರ ದುಃಖವನ್ನುಂಟು ಮಾಡಿದೆ. (Photo Credit: Lata Mangeshkar Instagram)

25 ಸಾವಿರಕ್ಕೂ ಅಧಿಕ ಗೀತೆಗಳನ್ನು ಲತಾ ಮಂಗೇಶ್ಕರ್ ಹಾಡಿದ್ದರು. ಅವರ ಕಂಠದಲ್ಲಿ ಮೂಡಿಬಂದ ಹಾಡುಗಳಿಗೆ ಕೋಟ್ಯಂತರ ಜನರು ತಲೆದೂಗಿದ್ದಾರೆ. ವಿಶ್ವಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದರು. (Photo Credit: Lata Mangeshkar Instagram)

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜೊತೆ ಲತಾ ಮಂಗೇಶ್ಕರ್ ಅವರ ಅಪರೂಪದ ಫೋಟೋ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಲತಾ ಅವರ ಹಾಡುಗಳು ಅಚ್ಚುಮೆಚ್ಚು. (Photo Credit: Lata Mangeshkar Instagram)

ಪಂಡಿತ್ ಭೀಮ್ ಸೇನ್ ಜೋಷಿ ಅವರ ಬಗ್ಗೆ ಲತಾ ಮಂಗೇಶ್ಕರ್ ಅವರು ಅಪಾರ ಗೌರವವನ್ನು ಹೊಂದಿದ್ದರು. ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಒಡನಾಟವನ್ನು ಮೆಲುಕು ಹಾಕಿದ್ದರು. (Photo Credit: Lata Mangeshkar Instagram)

ಶಾಸ್ತ್ರೀಯ ಸಂಗೀತ ಲೋಕದ ಮಹಾನ್ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಜೊತೆಗೆ ಲತಾ ಮಂಗೇಶ್ಕರ್ ಅವರಿಗೆ ಸ್ನೇಹ ಇತ್ತು. ಸುಬ್ಬುಲಕ್ಷ್ಮಿ ಅವರ ಗಾಯನ ಎಂದರೆ ನನಗೆ ತುಂಬ ಇಷ್ಟ ಎಂದು ಅವರು ಹೇಳುತ್ತಿದ್ದರು. (Photo Credit: Lata Mangeshkar Instagram)

ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಮತ್ತು ಲತಾ ಮಂಗೇಶ್ಕರ್ ಅವರ ಕಾಂಬಿನೇಷನ್ನಲ್ಲಿ ಹಲವಾರು ಸೂಪರ್ ಹಿಟ್ ಗೀತೆಗಳು ಮೂಡಿಬಂದಿವೆ. ಆ ಹಾಡುಗಳೆಲ್ಲವೂ ಎವರ್ಗ್ರೀನ್ ಆಗಿ ಉಳಿದುಕೊಂಡಿವೆ. (Photo Credit: Lata Mangeshkar Instagram)

ಖ್ಯಾತ ನಟ ದಿಲೀಪ್ ಕುಮಾರ್ ಅವರ ಜೊತೆ ಲತಾ ಮಂಗೇಶ್ಕರ್ ಅವರಿಗೆ ಆಪ್ತ ಒಡನಾಟ ಇತ್ತು. ಅವರನ್ನು ಸಹೋದರ ಎಂದು ಲತಾ ಕರೆಯುತ್ತಿದ್ದರು. ಅನೇಕ ಸಿನಿಮಾಗಳಲ್ಲಿ ಅವರು ಒಟ್ಟಿಗೆ ಕೆಲಸ ಮಾಡಿದ್ದರು. (Photo Credit: Lata Mangeshkar Instagram)

ಸಂಗೀತ ನಿರ್ದೇಶಕ ಎಸ್.ಡಿ. ಬರ್ಮನ್ ಅವರನ್ನು ಲತಾ ಮಂಗೇಶ್ಕರ್ ಅಪಾರವಾಗಿ ಗೌರವಿಸುತ್ತಿದ್ದರು. ಅವರನ್ನು ತಂದೆಯ ಸಮಾನರು ಎಂದು ಲತಾ ಹೇಳಿದ್ದುಂಟು. (Photo Credit: Lata Mangeshkar Instagram)

ಲತಾ ಮಂಗೇಶ್ಕರ್ ಅವರ ಕಂಠಕ್ಕೆ ಮರುಳಾಗದವರೇ ಇಲ್ಲ. ಅನೇಕ ಸ್ಟಾರ್ ಕಲಾವಿದರು ಕೂಡ ಸಾಂಗ್ ರೆಕಾರ್ಡಿಂಗ್ ಸಂದರ್ಭದಲ್ಲಿ ಸ್ಟುಡಿಯೋಗೆ ಬರುತ್ತಿದ್ದರು. ಲತಾ ಹಾಡುವ ಸಮಯದಲ್ಲಿ ನಟಿ ಮೀನಾ ಕುಮಾರಿ ಅವರು ಹಾಜರಿರುತ್ತಿದ್ದರು. (Photo Credit: Lata Mangeshkar Instagram)