ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಆಕರ್ಷಕ​ ಪುಷ್ಪ ಪ್ರದರ್ಶನ

Edited By:

Updated on: Jan 27, 2025 | 10:42 AM

ಮಡಿಕೇರಿಯ ರಾಜಾಸೀಟ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಅದ್ಭುತವಾದ ಫಲ-ಪುಷ್ಪ ಪ್ರದರ್ಶನ ನಡೆಯುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಹೂವುಗಳಿಂದ ಇಗ್ಗುಟಪ್ಪ ದೇವಸ್ಥಾನದ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಡೇಲಿಯಾ, ಚೆಂಡು ಹೂವು, ಸೇವಂತಿಗೆ, ಜರಬ್ರಾ ಸೇರಿದಂತೆ ದೇಸಿ ಮತ್ತು ವಿದೇಶಿ ಹೂವುಗಳು ಕಣ್ಮನ ಸೆಳೆಯುತ್ತಿವೆ. ಪ್ರವಾಸಿಗರಿಗೆ ಇದು ಅದ್ಭುತ ಅನುಭವವಾಗಿದೆ.

1 / 5
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಮಡಿಕೇರಿ ರಾಜಾಸೀಟ್​ನಲ್ಲಿ ಪುಷ್ಪಕಾಶಿಯೇ ಸೃಷ್ಟಿಯಾಗಿದೆ. ದೇಸಿ ಮತ್ತು ವಿದೇಶೀ ತಳಿಯ ಹೂವುಗಳು ಅರಳಿ ನಸು ನಗುತ್ತಿವೆ. ಡೇಲಿಯಾ, ಚೆಂಡು ಹೂವು, ಸೇವಂತಿಗೆ, ಜರಬ್ರಾ, ವಾಟರ್​ ಲಿಲ್ಲಿ, ಕ್ಯಾಕ್ಟಸ್​, ಗುಲಾಬಿ, ಗ್ಲಾಡಿಯೋಲಸ್, ಜೀನಿಯಾ ಹೀಗೆ ಹತ್ತು ಹಲವು ಬಗೆಯ ಹೂವುಗಳು ಅರಳಿವೆ.

2 / 5
ಫಲ-ಪುಷ್ಪ ಪ್ರದರ್ಶನದ ಅಂಗವಾಗಿ ರಾಜಾಸೀಟ್​ನಲ್ಲಿ ಇಗ್ಗುತ್ತಪ್ಪ ದೇವಸ್ಥಾನದ ಪ್ರತಿಕೃತಿಯನ್ನು ಹೂವಿನಿಂದ ನಿರ್ಮಿಸಲಾಗಿದೆ. 20ಕ್ಕೂ ಅಧಿಕ ಬಗೆಯ ಸುಮಾರು ಒಂದು ಲಕ್ಷ ಹೂವುಗಳಿಂದ ದೇವಸ್ಥಾನ ನಿರ್ಮಿಸಲಾಗಿದೆ.

3 / 5
ವಿಶೇಷ ಅಂದರೇ, ದೇವಸ್ಥಾನದಲ್ಲಿನ ಶಿವಲಿಂಗ ಕೂಡ ಹೂವುಗಳಿಂದಲೇ ನಿರ್ಮಿಸಲಾಗಿದ್ದು, ಬಹಳ ಆಕರ್ಷಕವಾಗಿದೆ. ಈ ದೇವಸ್ಥಾನದ ಎದುರು ಫೋಟೋ ತೆಗೆಸಿಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ. ರಾಜಾಸೀಟ್ ಉದ್ಯಾನವದಲ್ಲಿ ಸುಮಾರು 15 ಸಾವಿರ ಹೂವಿನಗಿಡಗಳನ್ನು ಬೆಳೆಸಲಾಗಿದೆ.

4 / 5
ಈ ಎಲ್ಲ ಹೂವುಗಳನ್ನು ಕಳೆದ ಎರಡು ತಿಂಗಳಿನಿಂದ ಪೋಷಿಸಿ ಬೆಳೆಸಲಾಗುತ್ತಿದೆ. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷ ಮುತುವರ್ಜಿ ವಹಿಸಿ ಹೂವುಗಳನ್ನ ಬೆಳೆಸಿದ್ದಾರೆ.

5 / 5
ಗಣರಾಜ್ಯೋತ್ಸವ ಹಾಗೂ ವೀಕೆಂಡ್ ಹಿನ್ನೆಲೆಯಲ್ಲಿ ಈ ಬಾರಿ ಸಾಕಷ್ಟು ಪ್ರವಾಸಿಗರು ಮಡಿಕೇರಿಯತ್ತ ಆಗಮಿಸಿದ್ದಾರೆ. ವಾರಾಂತ್ಯದಲ್ಲಿ ಇದರ ಸಂಖ್ಯೆ ದುಪ್ಪಟ್ಟಾಗಲಿದೆ. ಹೀಗಾಗಿ ರಾಜಾಸೀಟ್​ ಆಗಮಿಸುವ ಪ್ರವಾಸಿಗರ ಕಣ್ಣಿಗೆ ಹಬ್ಬದೂಟದಂತಿದೆ ಫಲಪುಷ್ಪ ಪ್ರದರ್ಶನದ ಸೊಬಗು ಬರ ಸೆಳೆಯುತ್ತಿದೆ.

Published On - 10:36 am, Mon, 27 January 25