ಗರಗ ಗ್ರಾಮದಲ್ಲಿ ವಿಜೃಂಭಣೆಯ ಮಡಿವಾಳೇಶ್ವರ ಜಾತ್ರೆ: ಏನಿಲ್ಲಿಯ ಸ್ಪೆಷಲ್?​ ಇಲ್ಲಿದೆ ನೋಡಿ

| Updated By: ಸಾಧು ಶ್ರೀನಾಥ್​

Updated on: Feb 28, 2024 | 11:29 AM

Garaga Madiwaleshwar village fair : ದುಡಿದು ದಣಿದ ದೇಹಗಳಿಗೆ ಕೊಂಚ ವಿಶ್ರಾಂತಿ, ಕೊಂಚ ಮನರಂಜನೆ ಅವಶ್ಯಕ. ಇಂಥ ಸಂದರ್ಭದಲ್ಲಿ ಜಾತ್ರೆಗಳು ಜನರಿಗೆ ಖುಷಿಯನ್ನು ಕೊಡುತ್ತವೆ. ಒಟ್ಟಿನಲ್ಲಿ ನಾವು ಎಷ್ಟೇ ಆಧುನಿಕ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಅಂದುಕೊಂಡರೂ, ಸಾಂಪ್ರದಾಯಿಕ ಹಾಗೂ ಜಾನಪದ ಬದುಕನ್ನ ಬಿಡಲು ಸಿದ್ಧರಿಲ್ಲ ಅನ್ನೋದಕ್ಕೆ ಈ ಜಾತ್ರೆಯೇ ಸಾಕ್ಷಿ.

1 / 8

2 / 8
ಜಾತ್ರೆಗಳು ಜಾನಪದ ವೈಭವದ ಸೊಬಗನ್ನು ಹೆಚ್ಚಿಸೋ ಹಬ್ಬಗಳು. ಇದೇ ಕಾರಣಕ್ಕೆ ಜಾತ್ರೆ ಅಂದ್ರೆ ಸಾಕು ಇಂದಿಗೂ ಗ್ರಾಮೀಣ ಜನರಿಗೆ ಅದೇನೋ ಉತ್ಸಾಹ-ಸಂಭ್ರಮ. ಸುಗ್ಗಿ ಕಾಲ ಮುಗಿದ ಬಳಿಕ ಬರೋ ಜಾತ್ರೆಗಳಂತೂ ತುಂಬಾನೇ ವಿಶಿಷ್ಟ. ಅದುವರೆಗೂ ಹೊಲಗಳಲ್ಲಿ ದುಡಿದು ಹೈರಾಣಾದ ಅನ್ನದಾತರ ಪಾಲಿಗೆ ಈ ಜಾತ್ರೆಗಳು ಶಕ್ತಿಯನ್ನ ಕೊಡೋ ಟಾನಿಕ್. ಇಂಥ ಜಾತ್ರೆಗಳ ಪೈಕಿ ಧಾರವಾಡದ ಗರಗ್ (Garaga, Dharwad) ನಲ್ಲಿ ಮಡಿವಾಳೇಶ್ವರ ಜಾತ್ರೆ (Madiwaleshwar village fair) ವಿಶೇಷ. ಈ ಬಾರಿಯ ಜಾತ್ರೆಯ ಸೊಬಗು ಹೇಗಿತ್ತು? ಬನ್ನಿ ನೋಡೋಣ...

3 / 8
ಜಾತ್ರೆ ಅಂದ್ರೆ ಸಾಕು ಅಲ್ಲಿ ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಂಡು ದೇವರ ಬಳಿ ಹರಕೆ ಹೊರಲು ಜನರು ಬಂದೇ ಬರುತ್ತಾರೆ. ಅಂಥ ಜಾತ್ರೆಗಳಲ್ಲಿ ಕಣ್ಣು ಹಾಯಿಸಿದಷ್ಟೂ ಕಾಣುತ್ತಿರೋ ಜನರು; ತಂದೆಯ ತಲೆ ಮೇಲೆ ಕುಳಿತು ಜಾತ್ರೆಯ ಸೊಬಗು ಸವಿಯುತ್ತಿರೋ ಮಕ್ಕಳು; ಮುಗಿಲೆತ್ತರಕ್ಕೆ ಎದ್ದು ನಿಂತಿರೋ ರಥ; ರಥವನ್ನು ಎಳೆಯಲು ಸಿದ್ಧವಾಗಿರೋ ಭಕ್ತ ಸಮೂಹ; ರಥದ ಮುಂದೆ ಬಗೆ ಬಗೆಯ ಜಾನಪದ ನೃತ್ಯದಲ್ಲಿ ಪಾಲ್ಗೊಳ್ಳೋ ಕಲಾವಿದರು

4 / 8
ಇಂಥ ದೃಶ್ಯಗಳನ್ನು ನೋಡಬೇಕೆಂದರೆ ನೀವು ಧಾರವಾಡ ತಾಲೂಕಿನ ಗರಗ್ ಗ್ರಾಮದಲ್ಲಿ ನಡೆಯೋ ಪ್ರಸಿದ್ಧ ಶ್ರೀ ಮಡಿವಾಳೇಶ್ವರ ಜಾತ್ರೆಗೆ ಬರಬೇಕು... ಹೌದು; ಈ ಭಾಗದ ಅತ್ಯಂತ ಪ್ರಸಿದ್ಧ ಮಠಗಳಲ್ಲಿ ಒಂದಾದ ಮಡಿವಾಳೇಶ್ವರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಅದ್ಧೂರಿ ಜಾತ್ರಾ ಮಹೋತ್ಸವ ನಡೆಯಿತು. ಮಡಿವಾಳೇಶ್ವರ 143 ನೇ ಪುಣ್ಯಸ್ಮರಣೆ ಅಂಗವಾಗಿ ನಡೆದ ಈ ಜಾತ್ರೆ ಗಮನ ಸೆಳೆಯಿತು. ಪ್ರತಿವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ, ಭಕ್ತಿಯ ಕ್ಷಣಗಳಿಗೆ ಸಾಕ್ಷಿಯಾದರು.

5 / 8
ಮಧ್ಯಾಹ್ನ ಮಹಾಪ್ರಸಾದಕ್ಕೆ ಚಾಲನೆ ಸಿಕ್ಕರೆ, ಸಂಜೆ ಹೊತ್ತಿಗೆ ಹಲವಾರು ಶ್ರೀಗಳ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಗಿತು. ರಥದ ಮುಂದೆ ಉಚ್ಛಾಯ ಚಲಿಸುತ್ತಿದ್ದರೆ, ಅದರ ಹಿಂದೆ ಭಕ್ತರು ರಥವನ್ನು ಎಳೆದು ಭಕ್ತಿ ಪ್ರದರ್ಶಿಸುತ್ತಿದ್ದರು. ಈ ವೇಳೆ ಕರಡಿ ಮಜಲು, ಭಜನೆ ಸೇರಿದಂತೆ ವಿವಿಧ ಬಗೆಯ ಕಲೆಗಳ ಅನಾವರಣ ಕಂಡು ಬಂತು.

6 / 8
ಇನ್ನು ಜಾತ್ರೆಯಲ್ಲಿ ದೊಡ್ಡ ದೊಡ್ಡ ಮನರಂಜನಾ ವ್ಯವಸ್ಥೆ ಮಾಡಲಾಗಿದೆ. ಜೇಂಟ್ ವ್ಹೀಲ್ ಸೇರಿದಂತೆ ಅನೇಕ ಮನೋರಂಜನೆಯ ಆಟಗಳು ಜನರನ್ನು ಸೆಳೆಯುತ್ತಿವೆ. ಈಗ ಬೇಸಿಗೆ ಕಾಲ ಶುರುವಾಗಿದೆ. ಹೀಗಾಗಿ ಹೊಲದಲ್ಲಿ ಯಾವುದೇ ಕೆಲಸಗಳಿರೋದಿಲ್ಲ. ಇದುವರೆಗೂ ದುಡಿದು ದಣಿದ ದೇಹಗಳಿಗೆ ಕೊಂಚ ವಿಶ್ರಾಂತಿ, ಕೊಂಚ ಮನರಂಜನೆ ಅವಶ್ಯಕ.

7 / 8
ಇನ್ನು ಮಕ್ಕಳು ತಮ್ಮ ತಮ್ಮ ತಂದೆ, ಅಣ್ಣ, ಮಾವನ ಮೇಲೆ ಕುಳಿತು ಜಾತ್ರೆಯ ಸೊಬಗನ್ನು ಸವಿಯುತ್ತಿದ್ದರೆ ಮಹಿಳೆಯರು ಕಟ್ಟಡಗಳ ಮೇಲೆ ನಿಂತು ರಥೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಂಡರು. ಇನ್ನು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾಭಾವವನ್ನು ಅನುಭವಿಸಿದರು. ಇನ್ನು ಕೇಳಿದ ವರ ನೀಡೋ ಮಡಿವಾಳೇಶ್ವರ ಜಾತ್ರೆಗೆ ಬರೋದೇ ಒಂದು ಸಂಭ್ರಮ ಅಂತಾ ಅನೇಕ ಭಕ್ತರು ಖುಷಿಯಿಂದ ಹೇಳಿದರು.

8 / 8
ಥ ಸಂದರ್ಭದಲ್ಲಿ ಜಾತ್ರೆಗಳು ಜನರಿಗೆ ಖುಷಿಯನ್ನು ಕೊಡುತ್ತವೆ. ಒಟ್ಟಿನಲ್ಲಿ ನಾವು ಎಷ್ಟೇ ಆಧುನಿಕ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಅಂದುಕೊಂಡರೂ, ಸಾಂಪ್ರದಾಯಿಕ ಹಾಗೂ ಜಾನಪದ ಬದುಕನ್ನ ಬಿಡಲು ಸಿದ್ಧರಿಲ್ಲ ಅನ್ನೋದಕ್ಕೆ ಈ ಜಾತ್ರೆಯೇ ಸಾಕ್ಷಿ.