
ಕೇರಳ ಮೂಲದ ನಟಿ, ಹಿನ್ನೆಲೆ ಗಾಯಕಿ ಮಡೋನ್ನ ಸೆಬಾಸ್ಟಿಯನ್ 'ಪ್ರೇಮಂ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು.

‘ಪ್ರೇಮಂ‘ ಚಿತ್ರದ ಯಶಸ್ಸು ವಿವಿಧ ಚಿತ್ರರಂಗಗಳಲ್ಲಿ ನಟಿಗೆ ಅವಕಾಶಗಳ ಬಾಗಿಲನ್ನೇ ತೆರೆಯಿತು. ಇಂದು ಅವರ ಜನ್ಮದಿನ. ನಟಿಯ ಹಿಟ್ ಚಿತ್ರಗಳು ಹಾಗೂ ಕುತೂಹಲಕರ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

2015ರಲ್ಲಿ ಮಾಲಿವುಡ್ ಗೆ ಪ್ರವೇಶ ಮಾಡಿದ ಮಡೋನ್ನಾ ಮರುವರ್ಷವೇ ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೂ ಎಂಟ್ರಿ ನೀಡಿದರು.

2021ರಲ್ಲಿ ಕಿಚ್ಚ ಸುದೀಪ್ ನಟನೆಯ 'ಕೋಟಿಗೊಬ್ಬ 3' ಮೂಲಕ ಅವರು ಸ್ಯಾಂಡಲ್ ವುಡ್ ಪ್ರವೇಶಿಸಿದರು.

ಕೇರಳದ ಕಣ್ಣೂರಿನ ಚೆರುಪುಳದಲ್ಲಿ ಜನಿಸಿದ ಮಡೋನ್ನಾ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದು ಬೆಂಗಳೂರಿನ ಕ್ರಿಸ್ಟ್ ಯೂನಿವರ್ಸಿಟಿಯಲ್ಲಿ.

ನಟನೆಗೂ ಮುನ್ನ ಪ್ರಖ್ಯಾತ ಸಂಗೀತ ನಿರ್ದೇಶಕರ ಗರಡಿಯಲ್ಲಿ ಟ್ರ್ಯಾಕ್ ಹಾಡುತ್ತಿದ್ದ ಮಡೋನ್ನಾ, ನಿರೂಪಕಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದರು.

ನಿರೂಪಣೆ ಮಾಡುತ್ತಿದ್ದ ಮಡೋನ್ನಾ ಅವರನ್ನು ಗಮನಿಸಿದ 'ಪ್ರೇಮಂ' ನಿರ್ದೇಶಕ ಅಲ್ಫೋನ್ಸ್ ಪುತರೆನ್ ಆಡಿಷನ್ ಗೆ ಆಹ್ವಾನ ನೀಡಿದರು.

ನಟನೆಯಲ್ಲಿ ಆಸಕ್ತಿ ಇಲ್ಲದಿದ್ದರೂ ‘ಪ್ರೇಮಂ’ ಆಡಿಷನ್ನಲ್ಲಿ ಭಾಗವಹಿಸಿದ ಮಡೋನ್ನಾ 'ಮೇರಿ' ಪಾತ್ರಕ್ಕೆ ಆಯ್ಕೆಯಾದರು. ಆದರೆ ಸೆಲಿನ್ ಪಾತ್ರ ತಮಗೆ ಹೆಚ್ಚು ಹೊಂದಾಣಿಕೆಯಾಗುತ್ತದೆಂದು ಅದನ್ನು ಆಯ್ದುಕೊಂಡರು ಮಡೋನ್ನಾ. ಮೇರಿ ಪಾತ್ರಕ್ಕೆ ಪ್ರಸ್ತುತ ಚಿತ್ರರಂಗದಲ್ಲಿ ಮಿಂಚುತ್ತಿರುವ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಆಯ್ಕೆಯಾದರು.

ಇತ್ತೀಚೆಗೆ ‘ಶ್ಯಾಮ್ ಸಿಂಗಾ ರಾಯ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಮಡೋನ್ನಾ, ಪ್ರಸ್ತುತ ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಹಾಡುಗಳನ್ನೂ ಹಾಡಿದ್ದಾರೆ ನಟಿ.

ಮಡೋನ್ನಾ ಸೆಬಾಸ್ಟಿಯನ್ ಕ್ಯೂಟ್ ಫೋಟೋಗಳು ಇಲ್ಲಿವೆ

ಮಡೋನ್ನಾ ಸೆಬಾಸ್ಟಿಯನ್ ಕ್ಯೂಟ್ ಫೋಟೋಗಳು ಇಲ್ಲಿವೆ
Published On - 8:13 am, Thu, 19 May 22