Updated on: Oct 27, 2022 | 1:03 PM
ನಟ ಮಹೇಶ್ ಬಾಬು ಅವರು ‘ಸರ್ಕಾರು ವಾರಿ ಪಾಟ’ ಯಶಸ್ಸಿನ ನಂತರದಲ್ಲಿ ಹಲವಷ್ಟು ಬ್ರೇಕ್ ತೆಗೆದುಕೊಂಡರು. ಅವರು ಸದ್ಯ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.
ಈಗ ಅವರು ಒಂದು ಬ್ರೇಕ್ ತೆಗೆದುಕೊಂಡು ಇಂಗ್ಲೆಂಡ್ ತೆರಳಿದ್ದಾರೆ. ಲಂಡನ್ನಲ್ಲಿ ಪತ್ನಿ ನಮ್ರತಾ, ಮಗಳು ಸಿತಾರಾ, ಮಗ ಗೌತಮ್ ಜತೆ ವೆಕೇಶನ್ ಎಂಜಾಯ್ ಮಾಡುತ್ತಿದ್ದಾರೆ.
ಈ ಫೋಟೋಗಳನ್ನು ನಮ್ರತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಲಂಡನ್ ಫೇವರಿಟ್ ಸ್ಪಾಟ್ ಎಂದು ಅವರು ಹೇಳಿದ್ದಾರೆ.
ಮಹೇಶ್ ಬಾಬುಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಕೋಟ್ಯಂತರ ಮಂದಿ ಹಿಂಬಾಲಿಸುತ್ತಿದ್ದಾರೆ. ಅವರ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್ಗೆ ಸಾಕಷ್ಟು ನಿರೀಕ್ಷೆ ಇದೆ.
ಮಹೇಶ್ ಬಾಬು ತಾಯಿ ಇಂದಿರಾ ದೇವಿ ಅವರು ಕೆಲ ವಾರಗಳ ಹಿಂದೆ ಮೃತಪಟ್ಟಿದ್ದರು. ಈ ದುಃಖ ಮರೆಯಲು ಅವರು ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ.