- Kannada News Photo gallery Makar Sankranti 2023: Here are mehndi designs that enhance the beauty of hands during the festival in kannada
Makar Sankranti 2023: ಕೈಗಳ ಅಂದವನ್ನು ಹೆಚ್ಚಿಸುವ ಮೆಹಂದಿ ಡಿಸೈನ್ಸ್ಗಳು ಇಲ್ಲಿವೆ
ಹಬ್ಬಗಳ ಸಮಯದಲ್ಲಿ ಕೈಗಳಿಗೆ ಮೆಹಂದಿಯನ್ನು ಹಚ್ಚಿ ಸಂಭ್ರಮಿಸಲು ನೀವು ಬಯಸಿದರೆ, ವಿವಿಧ ವಿನ್ಯಾಸಗಳ ಮೆಹಂದಿ ಡಿಸೈನ್ಸ್ಗಳು ಇಲ್ಲಿವೆ.
Updated on:Jan 12, 2023 | 4:58 PM

ಹಬ್ಬಗಳ ಸಮಯದಲ್ಲಿ ಕೈಗಳಿಗೆ ಮೆಹಂದಿಯನ್ನು ಹಚ್ಚಿ ಸಂಭ್ರಮಿಸಲು ನೀವು ಬಯಸಿದರೆ, ವಿವಿಧ ವಿನ್ಯಾಸಗಳ ಮೆಹಂದಿ ಡಿಸೈನ್ಸ್ಗಳು ಇಲ್ಲಿವೆ.

ಮೆಹಂದಿ ಕೈ,ಗಳ ಅಂದವನ್ನು ಹೆಚ್ಚಿಸುವುದು, ಮಾತ್ರವಲ್ಲದೇ ನಿಮ್ಮ ದೇಹವನ್ನು ತಂಪಾಗಿರುವಂತೆ ಮಾಡುತ್ತದೆ. ಸೌಂದರ್ಯದ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು.

ಈ ಮಕರ ಸಂಕ್ರಾಂತಿ ಹಬ್ಬದಂದು ಹಬ್ಬದ ಥೀಮ್ ಇಟ್ಟುಕೊಂಡು ಗಾಳಿಪಟದ ವಿನ್ಯಾಸಗಳ ಮೆಹಂದಿಯನ್ನು ಬಿಡಿಸಿ.

ಅಂಗೈ ಮಾತ್ರವಲ್ಲದೇ ಕೈಗಳ ಮುಂಭಾಗದಲ್ಲಿಯೂ ಕೂಡ ಈ ರೀತಿಯ ಮೆಹಂದಿ ಡಿಸೈನ್ಸ್ಗಳನ್ನು ಮಾಡಿ. ಇದು ನಿಮ್ಮ ಕೈಗಳು ಹಬ್ಬದ ಸಮಯದಲ್ಲಿ ಆಕರ್ಷಕ ಲುಕ್ ನೀಡುವಂತೆ ಮಾಡುತ್ತದೆ.

ನಿಮಗೆ ಕ್ರಿಯೇಟಿವ್ ಆಗಿ ಮೆಹಂದಿ ಹಾಕಲು ಬರದಿದ್ದರೆ , ಈ ರೀತಿಯ ಸಿಂಪಲ್ ಮೆಹಂದಿ ಡಿಸೈನ್ಸ್ಗಳನ್ನು ಪ್ರಯತ್ನಿಸಿ. ಇದು ಅತ್ಯಂತ ಸುಲಭ ಮತ್ತು ಕಡಿಮೆ ಸಮಯದಲ್ಲಿ ಬಿಡಿಸಬಹುದಾಗಿದೆ.

ಮೆಹಂದಿ ಡಿಸೈನ್ಸ್ಗಳಲ್ಲಿ ಅತ್ಯಂತ ಜನಪ್ರಿಯವೆಂದರೆ ಅದು ಅರೇಬಿಕ್ ಮೆಹೆಂದಿ. ಇದು ನಿಮ್ಮ ಕೈಗಳಿಗೆ ಗ್ರ್ಯಾಂಡ್ ಲುಕ್ ನೀಡುವುದರ ಜೊತೆಗೆ ಹಬ್ಬದ ಕಳೆಯನ್ನು ನೀಡುತ್ತದೆ.

ಹೂವಿನ ವಿನ್ಯಾಸಗಳ ಮೆಹಂದಿ ಡಿಸೈನ್ಗಳು ಹಬ್ಬದ ಸಮಯದಲ್ಲಿ ಉತ್ತಮ ಆಯ್ಕೆಯಾಗಿದೆ. ಇದು ನಿಮ್ಮ ಕೈಗಳಿಗೆ ಅಂದವನ್ನು ಹೆಚ್ಚಿಸುವುದರ ಜೊತೆಗೆ ಸಾಂಪ್ರದಾಯಿಕ ಲುಕ್ ನೀಡುತ್ತದೆ.
Published On - 4:58 pm, Thu, 12 January 23




