- Kannada News Photo gallery Malavika mohanan hints about tollywood debut reports says she will collaborate with Prabhas
ಪ್ರಭಾಸ್ ಜತೆ ತೆರೆ ಹಂಚಿಕೊಳ್ಳಲಿದ್ದಾರಾ ಮಾಳವಿಕಾ ಮೋಹನನ್? ನಟಿ ಹೇಳಿದ ಉತ್ತರ ಇದು
Malavika Mohanan | Prabhas: ಬಹುಭಾಷಾ ನಟಿ ಮಾಳವಿಕಾ ಮೋಹನನ್ ಟಾಲಿವುಡ್ ಪ್ರವೇಶದ ಬಗ್ಗೆ ಕೆಲ ಸಮಯದ ಹಿಂದೆಯೇ ಗುಸುಗುಸು ಕೇಳಿಬಂದಿತ್ತು. ಕೆಲವು ವರದಿಗಳ ಪ್ರಕಾರ ನಟಿ ಪ್ರಭಾಸ್ ಹಾಗೂ ಮಾರುತಿ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ‘ರಾಜಾ ಡಿಲಕ್ಸ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಮಾಳವಿಕಾ ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ.
Updated on:Mar 09, 2022 | 10:07 AM

ಮಲಯಾಳಂ ಚಿತ್ರದ ಮೂಲಕ ಪದಾರ್ಪಣೆ ಮಾಡಿದ ಮಾಳವಿಕಾ ಮೋಹನನ್ ಈಗ ಬಹುಭಾಷಾ ನಟಿ. ವಿಜಯ್ ಜತೆ ತಮಿಳಿನ ‘ಮಾಸ್ಟರ್’ನಲ್ಲಿ ತೆರೆಹಂಚಿಕೊಂಡ ನಂತರ ನಟಿಯ ಬೇಡಿಕೆ ಹೆಚ್ಚಾಗಿದೆ.

ಸ್ಯಾಂಡಲ್ವುಡ್ನಲ್ಲೂ ನಟಿ ಗುರುತಿಸಿಕೊಂಡಿದ್ದರು. ಪ್ರಸ್ತುತ ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಕಡೆಯಿಂದ ಹೊಸ ಸಮಾಚಾರ ಬಂದಿದೆ.

ಕಳೆದ ಕೆಲವು ಸಮಯದಿಂದ ಮಾಳವಿಕಾ ಟಾಲಿವುಡ್ ಪ್ರವೇಶದ ಬಗ್ಗೆ ಗುಸುಗುಸು ಹರಿದಾಡಿತ್ತು. ಇದೀಗ ತಮ್ಮ ತೆಲುಗು ಚಿತ್ರರಂಗದ ಪ್ರವೇಶದ ಬಗ್ಗೆ ಮಾಳವಿಕಾ ಸುಳಿವು ಬಿಟ್ಟುಕೊಟ್ಟಿದ್ದಾರೆ.

ತಮಿಳು ಮಾಧ್ಯಮವೊಂದರೊಂದಿಗೆ ಮಾತನಾಡುತ್ತಾ, ತೆಲುಗು ಚಿತ್ರವೊಂದರ ಮಾತುಕತೆಗಳು ನಡೆಯುತ್ತಿವೆ. ಸದ್ಯ ಯಾವುದನ್ನೂ ಹೇಳುವ ಹಾಗಿಲ್ಲ ಎಂದಿದ್ದಾರೆ.

ಕೆಲವು ಮೂಲಗಳ ಪ್ರಕಾರ ಮಾಳವಿಕಾ ಪ್ರಭಾಸ್ ಹಾಗೂ ಮಾರುತಿ ಕಾಂಬಿನೇಷನ್ನಲ್ಲಿ ಬರುತ್ತಿರುವ ‘ರಾಜಾ ಡಿಲಕ್ಸ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಮತ್ತೋರ್ವ ನಟಿ ಕೃತಿ ಶೆಟ್ಟಿ ಕೂಡ ‘ರಾಜಾ ಡಿಲಕ್ಸ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳಿವೆ. ಈ ನಡುವೆ ಮಾಳವಿಕಾ ಕೂಡ ಚಿತ್ರತಂಡ ಸೇರಿಕೊಳ್ಳುವ ಸಮಾಚಾರ ಬಂದಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.
Published On - 9:55 am, Wed, 9 March 22









