- Kannada News Photo gallery Mangaluru: Lata, the elephant of Dharmasthala died on Maha Shivratri due to heart attack
ಹೃದಯಾಘಾತದಿಂದ ಶಿವರಾತ್ರಿಯಂದೇ ಶಿವೈಕ್ಯಳಾದ ಧರ್ಮಸ್ಥಳದ ಆನೆ ಲತಾ
ಧರ್ಮಸ್ಥಳ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಶ್ರೀ ಮಂಜುನಾಥನಿಗೆ ಸೇವೆ ಸಲ್ಲಿಸುತ್ತಿದ್ದ ಲತಾ ಎಂಬ ಹೆಸರಿನ ಆನೆ ಇಂದು ನಿಧನ ಹೊಂದಿದೆ. 60 ವರ್ಷ ಪ್ರಾಯದ ಲತಾ ಆನೆ ಶುಕ್ರವಾರ ಹೃದಯಾಘಾತದಿಂದ ಶಿವರಾತ್ರಿಯಂದೇ ಶಿವೈಕ್ಯಳಾಗಿದ್ದಾಳೆ. ಧರ್ಮಸ್ಥಳ ಕ್ಷೇತ್ರದ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಲತಾ ಎಂದಿಗೂ ಮುಂಚೂಣಿಯಲ್ಲಿರುತ್ತಿದ್ದಳು.
Updated on:Mar 08, 2024 | 5:35 PM

ಧರ್ಮಸ್ಥಳ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಶ್ರೀ ಮಂಜುನಾಥನಿಗೆ ಸೇವೆ ಸಲ್ಲಿಸುತ್ತಿದ್ದ ಲತಾ ಎಂಬ ಹೆಸರಿನ ಆನೆ ಇಂದು ನಿಧನ ಹೊಂದಿದೆ.

60 ವರ್ಷ ಪ್ರಾಯದ ಲತಾ ಆನೆ ಶುಕ್ರವಾರ ಹೃದಯಾಘಾತದಿಂದ ಶಿವರಾತ್ರಿಯಂದೇ ಶಿವೈಕ್ಯಳಾಗಿದ್ದಾಳೆ.

ಧರ್ಮಸ್ಥಳ ಕ್ಷೇತ್ರದ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಳು. ಅದರಲ್ಲಿಯೂ ಮಂಜನಾಥನ ರಥೋತ್ಸವ, ಲಕ್ಷದೀಪೋತ್ಸವ, ಶಿವರಾತ್ರಿ ಉತ್ಸವಗಳಲ್ಲಿ ಲತಾ ಎಂದಿಗೂ ಮುಂಚೂಣಿಯಲ್ಲಿರುತ್ತಿದ್ದಳು.

ಲತಾ ಎಂದಿಗೂ ಭಕ್ತಾಧಿಗಳಿಗೆ ತೊಂದರೆಕೊಟ್ಟವಳಲ್ಲ. ಹಾಗಾಗಿ ಲತಾನ ಕಂಡರೆ ಭಕ್ತರಿಗೂ ಇಷ್ಟ. ಏನನ್ನೂ ಅಪೇಕ್ಷಿಸದ ಲತಾನಾ ಕಂಡರೆ ಧರ್ಮಸ್ಥಳ ಧರ್ಮಾಧಿಕಾರಿಗಳಿಗೂ ಅಚ್ಚುಮೆಚ್ಚಿನವಳಾಗಿದ್ದಳು.

ಲತಾ ಆನೆ ಲಕ್ಷ್ಮಿಯ ತಾಯಿಯಾಗಿದ್ದು, ಲಕ್ಷ್ಮಿ ಹಾಗೂ ಶಿವಾನಿಯ ಜೊತೆಯಾಗಿದ್ದಳು. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಇಂದು ಸಂಜೆ ಲತಾಳ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
Published On - 5:33 pm, Fri, 8 March 24









