Mauni Amavasya 2023: ಇತಿಹಾಸ ಪ್ರಸಿದ್ಧ ಬೀದರ್ ನಗರದ ಶನೇಶ್ವರ ಮಂದಿರದಲ್ಲಿ ಜನವೋ ಜನ, ಫೋಟೋಗಳಿವೆ ನೋಡಿ
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರದ ಬಳಿ ಇರುವ ಶನೀಶ್ವರ ಮಂದಿರಕ್ಕೆ ಜನಸಾಗರವೇ ಹರಿದು ಬಂದಿದೆ.
Updated on:Jan 21, 2023 | 3:39 PM

ಶನಿವಾರದಂದು ಮೌನಿ ಅಮಾವಾಸ್ಯೆ ಬಂದ ಕಾರಣ ಬೀದರ್ನ ಶನಿ ದೇವಸ್ಥಾನಕ್ಕೆ ಜನ ಸಾಗರವೆ ಹರಿದು ಬಂದಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಿಂದ ಅಪಾರ ಪ್ರಮಾಣ ಭಕ್ತ ಸಮೂಹವೇ ಹರಿದು ಬಂದಿದೆ.

ಇಂದು ಮೌನಿ ಅಮಾವಾಸ್ಯೆ. ಅದರಲ್ಲೂ ಈ ಅಮಾವಾಸ್ಯೆ ಶನಿವಾರ ಬಂದಿರುವುದುರಿಂದ ಶನಿ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದುಬಂದಿದೆ. ಹಾಗೂ ಶನಿ ಮಹಾತ್ಮನಿಗೆ ಇಷ್ಟವಾದ ಪೂಜಾ ಸಾಮಗ್ರಿಗಳನ್ನ ಅರ್ಪಿಸಿ ಪಾಪ ಪರಿಹರಿಸು ಎಂದು ಭಕ್ತರು ಕೇಳಿಕೊಂಡಿದ್ದಾರೆ.

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರದ ಬಳಿ ಇರುವ ಶನೀಶ್ವರ ಮಂದಿರಕ್ಕೆ ಜನಸಾಗರವೇ ಹರಿದು ಬಂದಿದೆ. ಇಂದು ಶನಿವಾರ ಅಮಾವಾಸ್ಯೆಯಿದ್ದ ಕಾರಣ ಶನೀಶ್ವರ ಮಂದಿರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಶನಿದೇವರ ದರ್ಶನ ಪಡೆದರು.

ಜಿಲ್ಲೆಯಲ್ಲಿರುವ ಏಕೈಕ ಶನಿದೇವರ ದೇವಸ್ಥಾನ ಇದಾಗಿದ್ದು ಹೀಗಾಗಿ ಜಿಲ್ಲೆಯ ಮೂಲೇ ಮೂಲೇಯಿಂದ ಜನರು ಬಂದಿದ್ದಾರೆ.ಈ ದೇವಸ್ಥಾನಕ್ಕೆ ಬರುವವರಿಗೆ ಕುಡಿಯುವ ನೀರು ಊಟದ ವ್ಯವಸ್ಥೆಯನ್ನ ಕೂಡಾ ಮಾಡಿದ್ದು ಭಕ್ತರು ಖುಷಿಯಿಂದಲೇ ದರ್ಶನ ಮಾಡಿ ಮನೆಗಳಿಗೆ ತೆರಳಿಸಿದರು.

ಇನ್ನೂರು ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಇಲ್ಲಿನ ಶನಿಶ್ವರ ದೇವಸ್ಥಾನ ಖಾನಾಪುರ ಗ್ರಾಮದ ಕಾಡಿನಲ್ಲಿದೆ. ಈ ಶನಿದೇವರ ದರ್ಶನ ಪಡೆಯಬೇಕು ಅಂದರೆ ಐನ್ನೂರು ಮೆಟ್ಟಿಲುಗಳನ್ನ ಇಳಿದುಕೊಂಡು ಈ ದೇವರ ದರ್ಶನ ಮಾಡಬೇಕು.

ಇನ್ನೂ ಹಚ್ಚ ಹಸುರಿನಿಂದ ಕೂಡಿದ ಕಾಡಿನಲ್ಲಿ ಈ ಶನಿ ದೇವಾಲಯವಿದ್ದು ವರ್ಷದ 12 ತಿಂಗಳು ಕೂಡಾ ಇಲ್ಲಿನ ಹಳ್ಳದ ನೀರು ಬತ್ತಿದ ಉದಾಹರಣೆಯಿಲ್ಲ. ಇನ್ನೂ ಶನಿದೇವಾಲಯದ ಪಕ್ಕದಲ್ಲಿಯೇ ಬಾವಿಯಿದ್ದು ಈ ಭಾವಿಯಲ್ಲಿ ಸ್ನಾನ ಮಾಡಿ ಅಥವಾ ಕೈಕಾಲು ಮುಖ ತೊಳದೆಕೊಂಡೆ ಶನಿದೇವರ ದರ್ಶನ ಮಾಡಬೇಕು ಅನ್ನೂವ ಪ್ರತಿಥಿಯೂ ಇಲ್ಲಿದೆ.

ಈ ಬಾವಿಯಲ್ಲಿನ ನೀರಿನಲ್ಲಿ ರೋಗಗಳನ್ನ ವಾಸಿ ಮಾಡುವ ಶಕ್ತಿಯಿದೆ ಅಂತಲೇ ಜನರು ನಂಬಿದ್ದಾರೆ ಹೀಗಾಗಿ ಶನಿವಾರದಂದು ಅಮಾವಾಸ್ಯೆ ಬಂದರೆ ಇಲ್ಲಿನ ಶನಿದೇವರ ಆರ್ಶಿವಾದ ಪಡೆಯಲು ಜನರ ಸಾಗರವೇ ಇಲ್ಲಿಗೆ ಹರಿದು ಬರುತ್ತದೆ. ಎರಡು ಶತಮಾನದಷ್ಟು ಹಳೆಯದಾದ ಈ ದೇವಸ್ಥಾನ ಬಂದಿರುವ ಭಕ್ತರ ಕಷ್ಟಗಳನ್ನ ಇಲ್ಲಿನ ಶನಿದೇವರು ಪರಿಹಾರ ಮಾಡುತ್ತಾನೆಂದು ಇಲ್ಲಿನ ಅರ್ಚಕರು ಹೇಳುತ್ತಿದ್ದಾರೆ.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶನಿಶ್ವರ ಹತ್ತಾರು ಪವಾಡಗಳನ್ನ ಮಾಡುತ್ತಲೇ ಭಕ್ತರನ್ನ ತನ್ನತ್ತ ಸೆಳೆಯುತ್ತಿದ್ದಾರೆ. ಇತಿಹಾಸ ಪ್ರಸಿದ್ಧ ಇಂತಹ ಅಪರೂಪದ ದೇವಸ್ಥಾನದ ಬಗ್ಗೆ ಇಲ್ಲಿ ನಡೆಯುವ ಪವಾಡದ ಬಗ್ಗೆ ಭಕ್ತರು ನಂಬಿದ್ದಾರೆ. ಇಂಥಾ ಅಪರೂಪದ ದೇವಾಲಯ ಗಡಿ ಜಿಲ್ಲೆ ಬೀದರ್ನಲ್ಲಿ ಇದೆ ಅನ್ನೋದೆ ಹೆಮ್ಮೆಯ ವಿಷಯ.
Published On - 3:39 pm, Sat, 21 January 23



















