ಬಿಗ್ ಬಾಸ್ ಮನೆಯಲ್ಲಿ ವಾತಾವರಣ ಗರಂ ಆಗುತ್ತಿದೆ. ಈ ರಿಯಾಲಿಟಿ ಶೋನಲ್ಲಿ ಚಿಕ್ಕ ವಿಚಾರಗಳು ಕೂಡ ದೊಡ್ಡ ಜಗಳಕ್ಕೆ ಕಾರಣವಾದ ಉದಾಹರಣೆ ಸಾಕಷ್ಟಿದೆ. ಬಿಗ್ ಬಾಸ್ ಕನ್ನಡ 9ನೇ ಸೀಸನ್ನಲ್ಲೂ ಅದು ಮುಂದುವರಿದಿದೆ.
ನಟಿ ಮಯೂರಿ ಅವರು ತಮ್ಮ ಒಂದೂವರೆ ತಿಂಗಳ ಮಗುವನ್ನು ಬಿಟ್ಟು ಬಿಗ್ ಬಾಸ್ಗೆ ಬಂದಿದ್ದಾರೆ. ಊಟದ ವಿಚಾರಕ್ಕೆ ಮೊದಲ ವಾರವೇ ಅವರು ಕಣ್ಣೀರು ಹಾಕುವಂತಾಗಿದೆ. ‘ಎಲ್ಲರಿಗಿಂತ ಮುಂಚೆ ಊಟ ಮಾಡ್ತಾರೆ’ ಅಂತ ನೇಹಾ ಗೌಡ ಹೇಳಿದ್ದು ಮಯೂರಿಗೆ ನೋವು ತರಿಸಿದೆ.
ನೇಹಾ ಹೇಳಿದ ಮಾತು ಕೇಳಿಸಿಕೊಂಡ ಮಯೂರಿ ಗಳಗಳನೆ ಅತ್ತಿದ್ದಾರೆ. ಊಟದ ವಿಚಾರಕ್ಕೆ ಇಂಥ ಮಾತು ಬರುತ್ತದೆ ಎಂದು ಅವರು ಊಹಿಸಿರಲಿಲ್ಲ. ನಂತರ ಅವರನ್ನು ಎಲ್ಲರೂ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.
ಇಷ್ಟೆಲ್ಲ ಕಿರಿಕ್ ಆದರೂ ಕೂಡ ನೇಹಾ ಗೌಡ ಮತ್ತು ಮಯೂರಿ ನಡುವೆ ಸಂಧಾನ ನಡೆಯಿತು. ಒಟ್ಟಾರೆ ಘಟನೆಯ ಬಗ್ಗೆ ಮಯೂರಿ ಅವರು ತಮ್ಮ ನಿಲುವು ಏನು ಎಂಬುದನ್ನು ಖಡಕ್ ಆಗಿ ಹೇಳಿದ್ದಾರೆ.
‘ಒಂದು ಪುಟ್ಟ ಮಗುವನ್ನು ಬಿಟ್ಟು ನಾನು ಇಲ್ಲಿ ಸಂಬಂಧ ಬೆಳೆಸೋಕೆ ಬಂದಿಲ್ಲ. ನಾನು ಕೂಡ ಆಟ ಆಡೋಕೆ ಬಂದಿರೋದು’ ಎಂದು ಮಯೂರಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಆಟದ ಕಾವು ಇನ್ನೂ ಹೆಚ್ಚಲಿದೆ.