Updated on: Sep 28, 2022 | 6:15 AM
‘ಬಿಗ್ ಬಾಸ್ ಹಿಂದಿ ಸೀಸನ್ 16’ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ರಿಯಾಲಿಟಿ ಶೋ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ಪ್ರೆಸ್ಕಾನ್ಫರೆನ್ಸ್ನಲ್ಲಿ ಸಲ್ಲು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಸೆಪ್ಟೆಂಬರ್ 30 ಹಾಗೂ ಆಗಸ್ಟ್ 1ರಂದು ‘ಬಿಗ್ ಬಾಸ್ 16’ ಗ್ರ್ಯಾಂಡ್ ಆಗಿ ಲಾಂಚ್ ಆಗಲಿದೆ. ಈ ವಿಚಾರ ಈಗ ರಿವೀಲ್ ಆಗಿದೆ.
ಸಲ್ಮಾನ್ ಖಾನ್ ಅವರು ಈ ಶೋಗಾಗಿ 1,000 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆ ಬಗ್ಗೆ ಸಲ್ಲು ಸ್ಪಷ್ಟನೆ ನೀಡಿದ್ದಾರೆ.
‘ನಾನು ಅಷ್ಟೊಂದು ಹಣವನ್ನು ಜೀವನದಲ್ಲಿ ಕಂಡಿಲ್ಲ. ಅಷ್ಟೊಂದು ಹಣ ಸಿಕ್ಕರೆ ನಿಜವಾಗಲೂ ಕೆಲಸ ಮಾಡಲ್ಲ. ನನಗೆ ವಕೀಲರಂತೆ ಸಾಕಷ್ಟು ಖರ್ಚುಗಳಿವೆ. ಈ ವದಂತಿಗಳಿಂದಾಗಿ ಆದಾಯ ತೆರಿಗೆ ಇಲಾಖೆಯವರು ನನ್ನ ಮನೆಗೆ ಬರುತ್ತಾರೆ’ ಎಂದು ನಕ್ಕಿದ್ದಾರೆ ಸಲ್ಲು.
ಕಳೆದ ಹಲವು ಸೀಸನ್ಗಳನ್ನು ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಸಲ್ಲು ಅವರು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಬಗ್ಗೆ ಈ ಮೊದಲಿನಿಂದಲೂ ಚರ್ಚೆ ಆಗುತ್ತಲೇ ಇದೆ. ಈ ಬಾರಿ ಅವರು ಸ್ಪಷ್ಟನೆ ನೀಡಿದ್ದಾರೆ.
ಸಲ್ಮಾನ್ ಖಾನ್