
ನಟಿ ಮೇಘಾ ಶೆಟ್ಟಿ ಅಭಿನಯದ ‘ಜೊತೆ ಜೊತೆಯಲಿ’ ಧಾರಾವಾಹಿ ಇತ್ತೀಚೆಗೆ ಪೂರ್ಣಗೊಂಡಿದೆ. ಈಗ ಅವರ ಸಂಪೂರ್ಣ ಗಮನ ಸಿನಿಮಾ ಮೇಲಿದೆ. ಈ ಮಧ್ಯೆ ಅವರು ಬಗೆಬಗೆಯಲ್ಲಿ ಫೋಟೋಶೂಟ್ ಮಾಡಿಸುತ್ತಿದ್ದಾರೆ.

ನಟಿ ಮೇಘಾ ಶೆಟ್ಟಿ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆರೆಯ ಪಕ್ಕದಲ್ಲಿ ಬಿಳಿ ಬಣ್ಣದ ಬಟ್ಟೆ ಧರಿಸಿ ಅವರು ಗಮನ ಸೆಳೆದಿದ್ದಾರೆ.

ಮೇಘಾ ಶೆಟ್ಟಿ ಅವರ ಫೋಟೋ ಕಂಡು ಅನೇಕರು ಕಣ್ಣರಳಿಸಿದ್ದಾರೆ. ‘ಮೇಘಾ ಶೆಟ್ಟಿ ಲುಕ್ ಸ್ಟನ್ನಿಂಗ್ ಆಗಿದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಮೇಘಾ ಶೆಟ್ಟಿ ಫೋಟೋ ಅನೇಕರಿಗೆ ಇಷ್ಟವಾಗಿದೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಮೇಘಾ ಶೆಟ್ಟಿ ಅವರು ಸದ್ಯ ಹಿರಿತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರು ಹೊಸ ಹೊಸ ಸಿನಿಮಾ ಒಪ್ಪಿಕೊಳ್ಳಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.