
ಮೇಘನಾ ರಾಜ್ ಅವರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತು ಮುಂದೆ ಸಾಗಲು ಪ್ರಯತ್ನಿಸುತ್ತಿದ್ದಾರೆ. ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಕೆಲವು ಚಿತ್ರ ಒಪ್ಪಿಕೊಂಡು ನಟಿಸಿದ್ದಾರೆ.

ಮೇಘನಾ ರಾಜ್ ಅವರ ಪತಿ, ನಟ ಚಿರಂಜೀವಿ ಸರ್ಜಾ ಅವರು ನಿಧನ ಹೊಂದಿದರು. ಆ ಬಳಿಕ ರಾಯನ್ ಜನಿಸಿದ. ನಂತರ ಅವರ ಬದುಕು ಬದಲಾಗಿದೆ.

ಮೇಘನಾ ಖುಷಿಯಿಂದ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದಾರೆ. ಈಗ ಅವರು ಥೈಲ್ಯಾಂಡ್ಗೆ ಹೋಗಿದ್ದಾರೆ.

ಗರ್ಲ್ಸ್ ಗ್ಯಾಂಗ್ ಜತೆ ಮೇಘನಾ ಅವರು ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋಗೆ ಎಲ್ಲರೂ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಮೇಘನಾ ಹೀಗೆಯೇ ಖುಷಿಖುಷಿಯಿಂದ ಇರಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

ಥೈಲ್ಯಾಂಡ್ನಲ್ಲಿ ಮೇಘನಾ ರಾಜ್ ಮೋಜು-ಮಸ್ತಿ