- Kannada News Photo gallery Melukote chaluvanarayana swamy vairamudi brahmotsava in madya pandavapura
ಮೇಲುಕೋಟೆ ಚೆಲುವನಾರಾಯಣ ವೈರಮುಡಿ ಬ್ರಹ್ಮೋತ್ಸವ ದರ್ಶನ ಪಡೆದು ಪುನೀತರಾದ ಭಕ್ತ ಗಣ, ಅದ್ದೂರಿ ಜಾತ್ರೆಯ ಫೋಟೋ ಝಲಕ್ ಇಲ್ಲಿದೆ
ಅದ್ದೂರಿ ವೈರಮುಡಿ ಬ್ರಹ್ಮೋತ್ಸವಕ್ಕೆ ಮೇಲುಕೋಟೆ ಸಾಕ್ಷಿಯಾಯ್ತು. ಚಲುವನಾರಾಯಣ ದರ್ಶನ ಪಡೆದ ಲಕ್ಷಾಂತರ ಭಕ್ತಗಣ ಪುನೀತರಾದ್ರು.
Updated on:Apr 02, 2023 | 6:56 AM

ಅದ್ದೂರಿ ವೈರಮುಡಿ ಉತ್ಸವ ಸಡಗರ ಸಂಭ್ರಮದಿಂದ ನೆರವೇರಿತು. ಚಲುವನಾರಾಯಣ ದರ್ಶನ ಪಡೆದ ಲಕ್ಷಾಂತರ ಭಕ್ತಗಣ ಪುನೀತರಾದ್ರು.

ಅದ್ದೂರಿ ವೈರಮುಡಿ ಬ್ರಹ್ಮೋತ್ಸವಕ್ಕೆ ಮೇಲುಕೋಟೆ ಸಾಕ್ಷಿಯಾಯ್ತು. ಖಜಾನೆಯಲ್ಲಿದ್ದ ರತ್ನ ಖಚಿತ ವಜ್ರದ ವೈರಮುಡಿ ಕಿರೀಟಕ್ಕೆ ಜಿಲ್ಲಾಧಿಕಾರಿ ಪೂಜೆ ಸಲ್ಲಿಸುವ ಮೂಲಕ ಖಜಾನೆಯಿಂದ ನೇರವಾಗಿ ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ಸನ್ನಿಧಾನಕ್ಕೆ ಬಿಗಿ ಭದ್ರತೆಯೊಂದಿಗೆ ಚಿನ್ನಾಭರವನ್ನ ತರಲಾಯ್ತು.

ದಾರಿಯುದ್ದಕ್ಕೂ ಚಿನ್ನಾಭರಣಕ್ಕೆ ಪೂಜೆ ಸಲ್ಲಿಸಲಾಯ್ತು. ಬಳಿಕ 8 ಗಂಟೆಗೆ ಚಲುವನಾರಾಯಣನಿಗೆ ವಿಶೇಷ ಅಲಂಕಾರ ಮಾಡುವ ಮೂಲಕ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಯ್ತು.

ಉತ್ಸವ ಮೂರ್ತಿಗೆ ವೈರಮುಡಿ ಕಿರೀಟವನ್ನ ಧಾರಣೆ ಮಾಡಿ ಉತ್ಸವ ಮೂರ್ತಿಯನ್ನ ಪ್ರತಿಯೊಂದು ಬೀದಿಯಲ್ಲಿಯೂ ಮೆರವಣಿಗೆ ನಡೆಸಲಾಯ್ತು.

ಮುಂಜಾನೆ 3 ಗಂಟೆಯ ವರ್ಗೂ ಅದ್ದೂರಿಯಾಗಿ ಬ್ರಹ್ಮೋತ್ಸವಕ್ಕೆ ತೆರೆ ಬೀಳ್ತು. ಇನ್ನು ಪ್ರತಿ ಬಾರಿಯಂತೆ ಈ ಬಾರಿಯೂ ರೇವಣ್ಣನ ಕುಟುಂಬಸ್ಥರು ಚಲುವನಾರಾಯಣ ಸ್ವಾಮಿಯ ದರ್ಶನ ಪಡೆದ್ರು ಹೆಚ್.ಡಿ ರೇವಣ್ಣ ಪತ್ನಿ ಭವಾನಿ ಪುತ್ರ ಸೂರಜ್ ಸಹ ವಿಶೇಷ ಪೂಜೆಯಲ್ಲಿ ಭಾಗಿಯಾದ್ರು.

ಈ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ಬೇಕು ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರ್ಬೇಕೆಂದು ಚಲುವನಾರಾಯಣನಲ್ಲಿ ಬಿನ್ನಹ ಮಾಡಿ ಕೊಂಡಿದ್ದೇನೆಂದು ರೇವಣ್ಣ ತಿಳಿಸಿದ್ರು.

ಇನ್ನು ದೇವರ ಬಳಿ ಪೂಜೆಗೆಂದು ರೇವಣ್ಣ ನಾಣ್ಯವನ್ನ ನೀಡಿದ್ರು ವಾಪಸ್ಸು ನಾಣ್ಯ ಪಡೆಯುವಾಗ ಕೈ ತಪ್ಪಿ ಕೆಳಗೆ ಬಿದ್ದ ಪ್ರಸಂಗ ಸಹ ನಡೆಯಿತು.

ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದಲು ವೈರಮುಡಿ ಉತ್ಸವ ನೋಡಿ ಕಣ್ತೂಂಬಿ ಕೊಳ್ಳಲು ಭಕ್ತಗಣ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ್ರು. ರಸ್ತೆಯ ಇಕ್ಕೆಲಗಳಲ್ಲಿ ಕಾದು ಕುಳಿತು ಚಲುವನಾರಾಯಣಸ್ವಾಮಿ ಹಾಗೂ ವೈರಮುಡಿಯ ದರ್ಶನವನ್ನ ಪಡೆದು ಪುನೀತರಾದ್ರು.

ಮಂಡ್ಯ ಜಿಲ್ಲಾ ಖಜಾನೆಯಿಂದ ವೈರಮುಡಿ ರಾಜಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ಮೇಲುಕೋಟೆಗೆ ತಂದು ಇಲ್ಲಿನ ವೀರಾಂಜನೇಯಸ್ವಾಮಿ ಸನ್ನಿಧಿಯಲ್ಲಿ ಪೂಜೆ ಮಾಡಿ ನಂತರ ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ದೇಗುಲಕ್ಕೆ ತರಲಾಗುತ್ತದೆ.

ಹೋದ ಬಾರಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಭಕ್ತರ ಸಂಖ್ಯೆ ದ್ವಿಗುಣವಾಗಿತ್ತು. ಅದೇನೆ ಹೇಳಿ ವೈರಮುಡಿಯನ್ನ ಕಣ್ತುಂಬಿಕೊಂಡು ಭಕ್ತಾಧಿಗಳು ಸಂತಸ ವ್ಯಕ್ತ ಪಡಿಸಿದ್ರು. ವರದಿ: ಸೂರಜ್ ಪ್ರಸಾದ್

ವೈರಮುಡಿ ಕಿರೀಟ ಧರಿಸಿ ಚೆಲುವನಾರಾಯಣ ತನ್ನ ಭಕ್ತರಿಗೆ ಊರೂರು ಸುತ್ತಿಕೊಂಡು ದರ್ಶನ ನೀಡಿದ್ದಾನೆ.
Published On - 6:56 am, Sun, 2 April 23









