
ಶಹಿಕ್ ರಿಯಾನ್, ಶಹಿತ್ ಶಾಹಿದ್ ಸೇರಿದಂತೆ ಹರ್ಷಿಕಾ ಪೂಣಚ್ಚ, ಶೋಭರಾಜ್, ಸಾಧುಕೋಕಿಲ ಇನ್ನೂ ಕೆಲವರು ನಟನೆ ಮಾಡಿರುವ ‘ತಾಯ್ತ’ ಹೆಸರಿನ ಕನ್ನಡ ಸಿನಿಮಾ ಈ ಶುಕ್ರವಾರ ಬಿಡುಗಡೆ ಆಗುತ್ತಿದೆ. ಹಾರರ್ ಥ್ರಿಲ್ಲರ್ ಆಗಿರು ಈ ಸಿನಿಮಾವನ್ನು ಲಯ ಕೋಕಿಲ ನಿರ್ದೇಶನ ಮಾಡಿದ್ದಾರೆ.
ರಜನೀಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿ, ಶಿವರಾಜ್ ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್, ಹೃತಿಕ್ ರೋಷನ್ ಇನ್ನೂ ಕೆಲವರು ಅತಿಥಿ ಪಾತ್ರಗಳಲ್ಲಿ ನಟನೆ ಮಾಡಿರುವ ‘ಜೈಲರ್ 2’ ಸಿನಿಮಾ ನಾಳೆ (ಗುರುವಾರ) ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲೂ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಒಟ್ಟಿಗೆ ನಟನೆ ಮಾಡಿರುವ ‘ರಣಬಾಲಿ’ ಸಿನಿಮಾ ಸಹ ಇದೇ ವಾರ ಚಿತ್ರಮಂದಿರಕ್ಕೆ ಬರುತ್ತಿದೆ. ಅಕ್ಟೋಬರ್ 16ರಂದು ಈ ಸಿನಿಮಾ ಭಾರಿ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ಸ್ವಾತಂತ್ರ್ಯ ಪೂರ್ವದ ಕತೆಯನ್ನು ಒಳಗೊಂಡಿದೆ.
ರಾಜ್ಕುಮಾರ್ ರಾವ್ ನಿರ್ದೇಶನ ಮಾಡಿರುವ ‘ಪ್ರಹಾರ್’ ಹಿಂದಿ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಉಗ್ರ ಕಸಬ್ ಬಂಧನದ ನಂತರ ನಡೆದ ಪ್ರಕರಣದ ವಿಚಾರಣೆಯ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ವಾಮಿಕಾ ಗಬ್ಬಿ ನಾಯಕಿ.
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಯಾಮಿ ಗೌತಮ್ ನಟನೆಯ ‘ನಯೀ ನವೇಲಿ’ ಹಿಂದಿ ಸಿನಿಮಾ ಸಹ ಇದೇ ವಾರ ತೆರೆಗೆ ಬರುತ್ತಿದೆ. ಮಹಿಳಾ ಪ್ರಧಾನ ಸಿನಿಮಾ ಆಗಿರುವ ‘ನಯೀ ನವೇಲಿ’ ಇದೇ ಶುಕ್ರವಾರ ಚಿತ್ರಮಂದಿರಗಳಿಗೆ ಬರುತ್ತಿದೆ.