ಈ ವಾರ ತೆರೆಗೆ ಬರುತ್ತಿವೆ ಆಸಕ್ತಿಕರ ಸಿನಿಮಾಗಳು, ಪಟ್ಟಿ ಇಲ್ಲಿದೆ

Updated on: Jul 22, 2026 | 5:41 PM

Movies releasing this week: ಮತ್ತೊಂದು ಶುಕ್ರವಾರ ಹತ್ತಿರವಾಗಿದೆ. ಪ್ರತಿ ವಾರದಂತೆ ಈ ವಾರವೂ ಸಹ ಹಲವು ಹೊಸ ಸಿನಿಮಾಗಳು, ಹೊಸ ಕನಸುಗಳ ಜೊತೆಗೆ, ಹೊಸ ನಿರೀಕ್ಷೆಗಳ ಜೊತೆಗೆ, ಕಾತರತೆಯ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿವೆ. ಈ ವಾರ ಕೆಲ ಆಸಕ್ತಿಕರ, ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳು ತೆರೆಗೆ ಬರುತ್ತಿವೆ. ಕನ್ನಡದ ಒಂದು ಬಹು ನಿರೀಕ್ಷಿತ ಸಿನಿಮಾದ ಜೊತೆಗೆ ಪರ ಭಾಷೆಯ ಕೆಲವು ಸಿನಿಮಾಗಳು ಸಹ ಬಿಡುಗಡೆ ಆಗುತ್ತಿದ್ದು, ಪಟ್ಟಿ ಇಲ್ಲಿದೆ ನೋಡಿ...

1 / 5
ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಮಿತ್ರ, ರಮೇಶ್ ಇಂದಿರಾ, ಸಂಪದಾ ಸೇರಿ ಹಲವು ಪ್ರತಿಭಾವಂತ ನಟ, ನಟಿಯರು ಒಟ್ಟಿಗೆ ಸೇರಿ ನಟಿಸಿರುವ ‘ಕರಾವಳಿ’ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಸಿನಿಮಾ ಅನ್ನು ಗುರುದತ್ ಗಾಣಿಗಾ ನಿರ್ದೇಶನ ಮಾಡಿದ್ದು ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಇದೇ ಶುಕ್ರವಾರ ಸಿನಿಮಾ ಬಿಡುಗಡೆ ಆಗುತ್ತಿದೆ.

ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಮಿತ್ರ, ರಮೇಶ್ ಇಂದಿರಾ, ಸಂಪದಾ ಸೇರಿ ಹಲವು ಪ್ರತಿಭಾವಂತ ನಟ, ನಟಿಯರು ಒಟ್ಟಿಗೆ ಸೇರಿ ನಟಿಸಿರುವ ‘ಕರಾವಳಿ’ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಸಿನಿಮಾ ಅನ್ನು ಗುರುದತ್ ಗಾಣಿಗಾ ನಿರ್ದೇಶನ ಮಾಡಿದ್ದು ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಇದೇ ಶುಕ್ರವಾರ ಸಿನಿಮಾ ಬಿಡುಗಡೆ ಆಗುತ್ತಿದೆ.

2 / 5

ವಿಜಯ್ ರಾಘವೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಶ್ರೀಮತಿ ಸಿಂಧೂರ’ ಸಿನಿಮಾ ಇದೇ ವಾರ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಈ ಸಿನಿಮಾ ದೈವ ಭಕ್ತಿಯ ಕತೆಯನ್ನು ಒಳಗೊಂಡಿದೆ. ವಿಜಯ್ ರಾಘವೇಂದ್ರ ಜೊತೆಗೆ ಪ್ರಿಯಾ ಅವರು ನಾಯಕಿಯಾಗಿ ನಟಿಸಿದ್ದಾರೆ.

3 / 5

ತಮಿಳುನಾಡು ಸಿಎಂ ವಿಜಯ್ ನಟಿಸಿರುವ ‘ಜನ ನಾಯಗನ್’ ಸಿನಿಮಾ ಹಲವಾರು ಅಡೆ-ತಡೆಗಳ ಬಳಿಕ ಕೊನೆಗೂ ಈ ವಾರ ಬಿಡುಗಡೆ ಆಗುತ್ತಿದೆ. ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಇದೀಗ ಚಿತ್ರಮಂದಿರಕ್ಕೆ ಬಂದಿದೆ. ಗುರುವಾರ (ಜುಲೈ 23) ಈ ಸಿನಿಮಾ ರಿಲೀಸ್ ಆಗಲಿದೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ, ಮಮಿತಾ ಬಿಜು ನಟಿಸಿದ್ದಾರೆ.

4 / 5

ಈ ವಾರ ತೆಲುಗಿನ ಯುವ ಪ್ರೇಮಕತೆಯೊಂದು ರಿಲೀಸ್ ಆಗುತ್ತಿದೆ. ಸಿನಿಮಾದ ಹೆಸರು ‘ಚೆನ್ನೈ ಲವ್ ಸ್ಟೋರಿ’. ಕಿರಣ್ ಅಬ್ಬವರಂ, ಶ್ರೀ ಗೌರಿ ನಾಯಕ-ನಾಯಕಿಯಾಗಿ ನಟಿಸಿರುವ ಸಿನಿಮಾ ಇದಾಗಿದ್ದು, ಸಿನಿಮಾದ ಬಗ್ಗೆ ಈಗಾಗಲೇ ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿದೆ. ಸಿನಿಮಾದ ಟ್ರೈಲರ್ ಸಹ ವೈರಲ್ ಆಗಿದೆ.

5 / 5

ಬಾಲಿವುಡ್ ನಟಿ, ಮಾಜಿ ಬಿಗ್​​ಬಾಸ್ ಸ್ಪರ್ಧಿ ಶೆಹನಾಜ್ ಗಿಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಪ್ರೇಮಕಥಾ ಸಿನಿಮಾ ‘ಇಷ್ಕ್​​​ನಾಮಾ’ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಶೆಹನಾಜ್ ಅವರು ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇರಿಸಿಕೊಂಡಿರುವುದಾಗಿ ಹೇಳಿದ್ದಾರೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us