Mulberry Benefits: ಹಿಪ್ಪುನೇರಳೆ ಸೇವನೆಯಿಂದ ಏನು ಪ್ರಯೋಜನ? ಈ ಹಣ್ಣಿನ ಬಗ್ಗೆ ನಿಮಗೆ ಗೊತ್ತಾ?

Updated on: Oct 16, 2023 | 5:50 PM

ಹಿಪ್ಪು ನೇರಳೆಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿದೆ. ಕಬ್ಬಿಣದ ಉಪಸ್ಥಿತಿಯು ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ಹಿಪ್ಪು ನೇರಳೆ ನಮ್ಮ ಚರ್ಮ ಮತ್ತು ಕೂದಲ ಆರೋಗ್ಯಕ್ಕೂ ಒಳ್ಳೆಯದು. ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಮಲ್ಬೆರಿ ಹೊಂದಿದೆ.

1 / 16
ಮಲ್ಬೆರಿ ಅಥವಾ ಹಿಪ್ಪು ನೇರಳೆ ಹಣ್ಣನ್ನು ವೈಜ್ಞಾನಿಕವಾಗಿ ಮೋರಸ್ ಆಲ್ಬಾ ಎಂದು ಕರೆಯಲಾಗುತ್ತದೆ. ಮಲೆನಾಡ ಹಳ್ಳಿಗಳಲ್ಲಿ ಈ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಸ್ಥಳೀಯವಾಗಿ ಇದನ್ನು ಅಂಬಾರಲ ಹಣ್ಣು ಎಂದು ಕರೆಯಲಾಗುತ್ತದೆ.

ಮಲ್ಬೆರಿ ಅಥವಾ ಹಿಪ್ಪು ನೇರಳೆ ಹಣ್ಣನ್ನು ವೈಜ್ಞಾನಿಕವಾಗಿ ಮೋರಸ್ ಆಲ್ಬಾ ಎಂದು ಕರೆಯಲಾಗುತ್ತದೆ. ಮಲೆನಾಡ ಹಳ್ಳಿಗಳಲ್ಲಿ ಈ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಸ್ಥಳೀಯವಾಗಿ ಇದನ್ನು ಅಂಬಾರಲ ಹಣ್ಣು ಎಂದು ಕರೆಯಲಾಗುತ್ತದೆ.

2 / 16

ಹಿಪ್ಪು ನೇರಳೆ ಮೊರೇಸಿ ಕುಟುಂಬಕ್ಕೆ ಸೇರಿದೆ. ಇದು ಔಷಧಿಗಳು ಮತ್ತು ಪರಿಹಾರಗಳ ಮೂಲವಾಗಿ ಬಳಸಲಾಗುವ ಪ್ರಮುಖ ಗಿಡಮೂಲಿಕೆ ಸಸ್ಯಗಳಲ್ಲಿ ಒಂದಾಗಿದೆ.

3 / 16

ಕೆಲವು ಪ್ರಮುಖ ಮಲ್ಬೆರಿ ಜಾತಿಗಳೆಂದರೆ ಸ್ಥಳೀಯ ಕೆಂಪು ಮಲ್ಬೆರಿ, ಪೂರ್ವ ಏಷ್ಯಾದ ಬಿಳಿ ಮಲ್ಬೆರಿ, ನೈಋತ್ಯ ಏಷ್ಯಾದ ಕಪ್ಪು ಮಲ್ಬೆರಿ.

4 / 16

ಹಣ್ಣಾದರೆ ಮಲ್ಬೆರಿ ಕಪ್ಪಾಗುತ್ತದೆ. ಇಲ್ಲವಾದರೆ ತಿಳಿ ಗುಲಾಬಿ ಬಣ್ಣದಲ್ಲಿರುತ್ತದೆ. ಸ್ಟ್ರಾಬೆರಿ ರೀತಿಯ ಹಣ್ಣಾದ ಮಲ್ಬೆರಿ ತಿನ್ನಲು ರುಚಿಕರವಾಗಿರುತ್ತದೆ.

5 / 16

ಭಾರತ, ಚೀನಾ, ಜಪಾನ್, ಉತ್ತರ ಆಫ್ರಿಕಾ, ಅರೇಬಿಯಾ ಮತ್ತು ದಕ್ಷಿಣ ಯುರೋಪ್‌ನಂತಹ ಸಮಶೀತೋಷ್ಣ ಪ್ರದೇಶಗಳಲ್ಲಿ ಮಲ್ಬೆರಿ ಹಣ್ಣು ಬೆಳೆಯುತ್ತದೆ.

6 / 16

ಮಲ್ಬೆರಿ ಗಿಡದ ಎಲೆಗಳು ರೇಷ್ಮೆ ಹುಳುಗಳಿಗೆ ಆಹಾರದ ಏಕೈಕ ಮೂಲವಾಗಿದೆ. ಹೀಗಾಗಿ, ಇದನ್ನು ರೇಷ್ಮೆ ಸೊಪ್ಪು ಎಂದು ಕೂಡ ಹಳ್ಳಿಗಳಲ್ಲಿ ಕರೆಯುತ್ತಾರೆ.

7 / 16

ಮಲ್ಬೆರಿ ಎಲೆಗಳು, ಗಿಡದ ತೊಗಟೆ, ಹಣ್ಣುಗಳು ಔಷಧೀಯ ಮೂಲವಾಗಿದೆ. ಮಲ್ಬೆರಿ ಅಸಹಜ ರಕ್ತ ಹೆಪ್ಪುಗಟ್ಟುವಿಕೆಯ ರಚನೆಯನ್ನು ನಿಧಾನಗೊಳಿಸುತ್ತದೆ.

8 / 16

ಮಲ್ಬೆರಿಯ ವಿವಿಧ ಭಾಗಗಳ ಸಾರವು ಹಲವಾರು ಗುಣಲಕ್ಷಣಗಳನ್ನು ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ.

9 / 16

ಮಲ್ಬೆರಿ ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೆಲವು ವಿಧದ ಪರಾವಲಂಬಿ ಹುಳುಗಳನ್ನು ನಾಶಮಾಡಲು ಸಹಾಯಕವಾಗಿದೆ.

10 / 16

ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಮಲ್ಬೆರಿ ಹೊಂದಿದೆ.

11 / 16

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

12 / 16

ಮಲ್ಬೆರಿ ನಮ್ಮ ಚರ್ಮ ಮತ್ತು ಕೂದಲ ಆರೋಗ್ಯಕ್ಕೂ ಒಳ್ಳೆಯದು.

13 / 16

ಮಲ್ಬೆರಿಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿದೆ. ಕಬ್ಬಿಣದ ಉಪಸ್ಥಿತಿಯು ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪಾತ್ರವನ್ನು ವಹಿಸುತ್ತದೆ.

14 / 16

ಮಲ್ಬೆರಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಅವುಗಳು ಹೆಚ್ಚಿನ ಆಹಾರದ ಫೈಬರ್ ಅಂಶವನ್ನು ಹೊಂದಿರುತ್ತವೆ.

15 / 16

ಹಿಪ್ಪು ನೇರಳೆ ವಿಟಮಿನ್ ಎ, ವಿಟಮಿನ್ ಸಿ, ಆಂಥೋಸಯಾನಿನ್‌ಗಳು ಮತ್ತು ಇತರ ಹಲವಾರು ಪಾಲಿಫಿನಾಲಿಕ್ ಸಂಯುಕ್ತಗಳಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

16 / 16

ಹಿಪ್ಪುನೇರಳೆ ಎಲೆಯ ರಸವು ಗಂಟಲಿನ ಸೋಂಕುಗಳು, ಉರಿಯೂತ ಮತ್ತು ಕಿರಿಕಿರಿಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರಬಹುದು.

Loading...
Unable to load recommendations.
Follow Us