Kolar: ಚಿನ್ನದ ನಾಡು ಕೋಲಾರಕ್ಕೆ ಭೇಟಿ ಕೊಟ್ಟರೆ ನೋಡಲೇ ಬೇಕಾದ 10 ಪ್ರಸಿದ್ಧ ಐತಿಹಾಸಿಕ ದೇವಸ್ಥಾನಗಳು
ಕುವಲಾಲಪುರ ಅಂತಲೂ ಕರೆಯಲ್ಪಡುತ್ತಿದ್ದ, ಗಂಗರ ರಾಜಧಾನಿಯಾಗಿದ್ದ ಚಿನ್ನದ ನಾಡು ಕೋಲಾರದಲ್ಲಿ ಕಲೆ, ಸಂಸ್ಕೃತಿಗಳ ಸಾಕಾರರೂಪ ತಳೆದ ಸ್ಮಾರಕಗಳಿವೆ. ಕದಂಬ, ಗಂಗ, ಪಲ್ಲವ, ಚೋಳ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಅರಸರು, ಮೈಸೂರಿನ ಅರಸರು, ಪಾಳೇಗಾರರು ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಆಳ್ವಿಕೆಯಲ್ಲಿ ಕಟ್ಟಿಸಿದಂತಹ ಹಲವಾರು ಸ್ಮಾರಕಗಳು, ದೇವಸ್ಥಾನಗಳು ಭಕ್ತರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಕೋಲಾರಕ್ಕೆ ಭೇಟಿ ನೀಡುವವರು ನೋಡಲೇ ಬೇಕಾದ ಹಾಗೂ ಕಲೆ, ಸಂಸ್ಕೃತಿಯನ್ನು ಮೆರೆಸುತ್ತಿರುವ 10 ದೇವಸ್ಥಾನಗಳು ಇಲ್ಲಿವೆ. Courtesy: Kolar District Website
Updated on: Nov 09, 2021 | 9:14 AM

Must visit Famous and historical 10 temples in Kolar

Must visit Famous and historical 10 temples in Kolar

ಸೋಮೇಶ್ವರ ದೇವಸ್ಥಾನ ( Someshwara Temple) ಕೋಲಾರಮ್ಮ ದೇವಾಲಯ ಸಮೀಪ ದ್ರಾವಿಡ ಶೈಲಿಗೆ ಉತ್ತಮ ಮಾದರಿಯಾದ ಶಿಲ್ಪಕಲೆ ವೈವಿಧ್ಯ ತೋರಿದ ಸುಂದರ ಸೋಮೇಶ್ವರ ದೇವಾಲಯವಿದೆ. ಪ್ರತ್ಯೇಕ ಕಲ್ಯಾಣ ಮಂಟಪ, ಗರ್ಭಗೃಹ, ಅಂತರಾಳ, ನವರಂಗಗಳು ಕಲೆಗಾರಿಕೆಯ ಹೊರ ಮೈ ಹೊಂದಿದೆ. ಒಳಗಿನ ಕಂಬಗಳ ಮೇಲಿನ ಕೆತ್ತನೆ ನೋಡಿದಾಗ ಇದೊಂದು ಉತ್ತುಂಗವಾದ ರಾಜತಾಂತ್ರಿ ವಿಗ್ರಹವಿದೆ. ದೇಗುಲದ ಬಲಪಾಶ್ರ್ವದಲ್ಲಿ ಆಕರ್ಷಕ ಕೆತ್ತನೆಗಳಿಂದ ಕೂಡಿದ ಕಲ್ಯಾಣ ಮಂಟಪವಿದೆ ಆಲಯದ ಕಂಬಗಳಲ್ಲಿ ಹಲವು ಉಬ್ಬು ಚಿತ್ರಗಳನ್ನು ಕಾಣಬಹುದಾಗಿದೆ ಈಶಾನ್ಯದ ವಸಂತಮಂಟಪದ ಛಾವಣಿಯಲ್ಲಿ ಅಷ್ಟದಿಕ್ಪಾಲಕರ ವಿಗ್ರಹಗಳು ಆಕರ್ಷಕವಾಗಿದೆ.

ಕುರುಡುಮಲೆ (Kurudumale) “ಕೌಂಡಿನ್ಯಗಿರಿ” ಎಂದು ಪುರಾಣ ಪ್ರಸಿದ್ದವಾದ, ಹೊಯ್ಸಳರ ಸ್ಥಳೀಯ ರಾಜಧಾನಿಯಾಗಿದ್ದ ಕೂಡುಮಲೆ ಅಥವಾ ಕುರುಡುಮಲೆ ಮುಳಬಾಗಿಲು ನಗರಕ್ಕೆ 12 ಕಿಲೋಮೀಟರ್ ದೂರವಿದ್ದು, ತ್ರಿಮೂರ್ತಿಗಳಿಂದ ಪೂಜಿಸಲ್ಪಡುವ 13 ಅಡಿ ಎತ್ತರದ ಭವ್ಯ ವಿನಾಯಕ ಮೂರ್ತಿಯಿಂದ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರನ್ನು ಆಕರ್ಷಿಸುತ್ತಿದೆ. ವಿಜಯನಗರದ ಕಾಲದ ಆಲಯದ ಕಂಬಗಳು ಸುಂದರ ಕೆತ್ತನೆಗಳನ್ನು ಒಳಗೊಂಡಿವೆ, ಕುಸುರಿ ಕಲೆಯ ಬಾಗಿಲವಾಡ ಮೋಹಕವಾಗಿದ್ದು, ನವರಂಗವೂ ಇದೆ.

ಮುಳಬಾಗಿಲು (Mulbagal) ರಾಷ್ಟ್ರಿಯ ಹೆದ್ದಾರಿ-75ರಲ್ಲಿ ಅಂಜನಾದ್ರಿ ತಪ್ಪಲ್ಲಿನಲ್ಲಿ ಕರ್ನಾಟಕ ಮೂಡಣ ಬಾಗಿಲಾದ ಮುಳಬಾಗಿಲು ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿ ವಿಜಯನಗರದ ಕಾಲದ ಆಂಜನೇಯ ಸ್ವಾಮಿ ದೇಗುಲ ಸಂಕೀರ್ಣವಿದೆ. ಪ್ರಧಾನ ಪೂಜೆ ಪಡೆಯುವ ಮಾರುತಿಗೆ ಪ್ರತಿನಿತ್ಯ ಕೇದಿಗೆ ಹೂ ಪೂಜೆ ಆಗಲೇಬೇಕು ಎನ್ನುವುದು ವಿಶೇಷ. ಅರ್ಜುನ ಪ್ರತಿಷ್ಠೆ ಎನ್ನುವ ಆಂಜನೇಯ ಸನ್ನಿಧಿಯಲ್ಲಿ ಪೂರ್ಣಾವತಾರಿ ಸೀತಾ,ರಾಮ ಲಕ್ಷ್ಮಣ, ಕ್ಷಣಾವತಾರಿ ಲಕ್ಷ್ಮಿನರಸಿಂಹ, ವೇಣುಗೋಪಾಲರ ಉಪ ಆಲಯಗಳಿವೆ ದಕ್ಷಿನೋತ್ತರಗಳಲ್ಲಿ ತಿರುಮಲ ಶ್ರೀನಿವಾಸನನ್ನು ಹೋಲುವ ವೆಂಕಟರಮಣಸ್ವಾಮಿ ಗೋವಿಂದರಾಜ ಸ್ವಾಮಿಯ ಸ್ವತಂತ್ರ ಗುಡಿಗಳಿವೆ. ಕಂಚಿ ವರದರಾಜಸ್ವಾಮಿ ಆಲಯವು ಉಂಟು. ದೇಗುಲದಲ್ಲಿ ವರ್ಣಚಿತ್ರಗಳು, ದಶವತಾರದ ಗೂಡುಗಳು ಇವೆ ಎತ್ತರವಾದ ಗೋಪುರವನ್ನು ಹೊಂದಿದೆ.

ನರಸಿಂಹತೀರ್ಥ/ ಶ್ರೀ ಪಾದರಾಜ ಮಠ (Narasimhatirtha) ಮಧ್ವಾಚಾರ್ಯರ ಪರಂಪರೆಯ ಶ್ರೀ ಪಾದರಾಜರ ಮಠ ಪಟ್ಟಣದಲ್ಲಿದ್ದರೆ, ಅವರ ಬೃಂದಾವನ ಊರಿಗೆ 2 ಕೀಲೋಮೀಟರ್ ದೂರದ ನರಸಿಂಹತೀರ್ಥದಲ್ಲಿದೆ. ಪ್ರಶಾಂತ ವಾತಾವರಣದಲ್ಲಿ ನರಸಿಂಹತೀರ್ಥ ಕಲ್ಯಾಣಿ ಇದೆ. ದಾಸ ಸಾಹಿತ್ಯದ ವ್ಯಾಸರಾಯರು ವ್ಯಾಸಂಗ ಮಾಡಿದ ಗುಹೆ ಇದೆ. ಬಂಡೆಯಲ್ಲಿ ಉದ್ಭವವಾಗಿರುವ ಯೋಗನರಸಿಂಹ ದೇವರು ಇಲ್ಲಿನ ಪ್ರಮುಖ ಆರಾಧ್ಯದೈವ ವೇದ, ಸಂಸ್ಕೃತಿಗಳ ತಾಣವಾಗಿ ಮೆರೆಯುತ್ತಿದೆ ನರಸಿಂಹ, ಜೇಷ್ಠ ಮಾಸದಲ್ಲಿ ರಥೋತ್ಸವ ನಡೆಯುತ್ತದೆ.

ಅವಣಿ (Aavani) ಮುಳಬಾಗಿಲಿಂದ 12 ಕಿಲೋ ಮೀಟರ್ ದೂರದ ಅವಣಿಯು ರಾಮಲಿಂಗೇಶ್ವರ ದೇವಾಲಯ ಸಂಕೀರ್ಣ ಪಕ್ಕದ ಬೆಟ್ಟದ ಮೇಲಿರುವ ಸೀತಾ ಪಾರ್ವತಿ ಹಾಗೂ ಕಂಬ ಶಾಸನ ಶಂಕರ ಮಠಗಳಿಂದ ಖ್ಯಾತಿ ಹೊಂದಿದೆ. ರಾಮನ ಸೋದರರ ಹೆಸರಿನ ಆಲಯಗಳಲ್ಲದೆ ಹನುಮಂತ, ಅಂಗದ, ವಾಲಿ, ಸುಗ್ರಿವರ ಹೆಸರಿನಲ್ಲೂ ದೇಗುಲಗಳಿವೆ. ಸಮೂಹದಲ್ಲಿರುವ ದೇವಾಲಯಗಳಲ್ಲಿ ಲಕ್ಷ್ಮಣೇಶ್ವರ ದೇವಾಲಯ ಅದ್ಬುತ ಕಲಾಕುಸುಮವಾಗಿದೆ. ದಕ್ಷಿಣ ಗಯಾ ಎನ್ನುವ ಅವಣಿ ಉತ್ತರ ರಾಮಾಯಣದ ಕರ್ಮಭೂಮಿ ಎನಿಸಿಕೊಂಡಿದ್ದು, ಲವ-ಕುಶ, ಸೀತೆ, ವಾಲ್ಮೀಕಿಯ ಹೆಸರಿನ ನಂಟಿದೆ.

ಬಂಗಾರು ತಿರುಪತಿ ( Bangaruthirupathi) ಮುಳಬಾಗಿಲು-ಬೇತಮಂಗಲ ರಸ್ತೆಯಲ್ಲಿನ ಗುಟ್ಟಹಳ್ಳಿಯಲ್ಲಿ ತಿರುಪತಿ ವೆಂಕಟೇಶ್ವರಸ್ವಾಮಿ ಆಲಯ ಹೋಲುವ ದೇವಾಲಯವಿದ್ದು, ಬಂಗಾರುತಿರುಪತಿ ಎಂದು ಖ್ಯಾತವಾಗಿದೆ. ಪುಟ್ಟದಾದ ವೆಂಕಟರಮಣ ಮೂರ್ತಿಯನ್ನು ಕಿಂಡಿಯ ಮೂಲಕ ದರ್ಶಿಸಬಹುದಾಗಿದ್ದು, ಬೆಟ್ಟ ಹತ್ತುವಾಗ ಗರುಡ, ಅಂಜನೇಯ, ವಿನಾಯಕ, ವರಾಹಸ್ವಾಮಿಯನ್ನು ಕಾಣಬಹುದು. ಬೆಟ್ಟದ ಪಕ್ಕದ ಗುಡ್ಡದಲ್ಲಿ ಪದ್ಮಾವತಿ ದೇವಿಯ ಪ್ರತ್ಯೇಕ ಗುಡಿಯಿದೆ. ಬುಡದಲ್ಲಿ ಆಕರ್ಷಕ ಕಲ್ಯಾಣಿ ಇದೆ. ಶ್ರಾವಣ ಮಾಸದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ವಿರೂಪಾಕ್ಷಿ (Virupakshi) ಶಿವತತ್ವ ಚಿಂತಾಮಣಿಯನ್ನು ಬರೆದ ವಿಜಯನಗರ ಅರಸರ ದಂಡನಾಯಕ ಲಕ್ಕಣ ನಿರ್ಮಿಸಿದ ಹಂಪೆಯ ಪ್ರತಿರೂಪದಂತಿದೆ ಈ ವಿರೂಪಾಕ್ಷಿ. ಮುಳಬಾಗಿಲಿಗೆ 4 ಕಿಲೋಮೀಟರ್ ದೂರದ ವಿರೂಪಾಕ್ಷಿ ದೇವಾಲಯದಲ್ಲಿ ಸಿಂಹದ ಮೇಲೆ ಕುಳಿತಿರುವ ಚತುರ್ಭುಜ ದುರ್ಗಾ ಗುಡಿಯಿದೆ. ವಿರೂಪಾಕ್ಷೇಶ್ವರ ಸನ್ನಿಧಿಯಲ್ಲಿ ಪಾರ್ವತಿಯ ಮುಂದೆ ಶಿವನ ಮುಂದೆ ನಂದಿ ಇರುವಂತೆ ಸಿಂಹದ ವಿಗ್ರಹವಿದೆ. ಪೂರ್ವಾಭಿಮುಖರಾಗಿರುವ ಆಲಯಕ್ಕೆ ಸುಂದರ ಗೋಪುರವಿದೆ. ಮನ್ಮಥ ಪುಷ್ಕರಣೆ ಎಂಬ ಕಲ್ಯಾಣಿಯೂ ಇದೆ.

ಶ್ರೀ ಕೋಟಿಲಿಂಗೇಶ್ವರ (kotilinga) ಕೆ.ಜಿ.ಎಫ್ (ಕೋಲಾರ ಚಿನ್ನದ ಗಣಿ ಪ್ರದೇಶ)ಗೆ 6 ಕಿಲೋಮೀಟರ್ ದೂರದಲ್ಲಿ ಬೇತಮಂಗಲ ರಸ್ತೆಯಲ್ಲಿ ಸಾವಿರಾರು ಶಿವಲಿಂಗಗಳನ್ನು ಒಳಗೊಂಡಿರುವ ಕೋಟಿ ಲಿಂಗೇಶ್ವರ ದೇವಾಲಯವಿದೆ. 20ನೇ ಶತಮಾನದ ಕೊಡುಗೆಯಾದ 1980 ರಲ್ಲಿ ನಿರ್ಮಿಸಿದ ಈ ದೇವಾಲಯ ಸಂಕೀರ್ಣದಲ್ಲಿ ಇನ್ನೂ ಹನ್ನೊಂದು ಬೇರೆ ದೇವರ ಗುಡಿಗಳಿವೆ. ಭಕ್ತಾಧಿಗಳು ಇಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಬಹುದಾಗಿದೆ. 13 ಎಕರೆ ಪ್ರದೇಶದಲ್ಲಿನ ದೇವಾಲಯ ಸಂಕೀರ್ಣದಲ್ಲಿ ದಶಲಕ್ಷಕ್ಕೂ ಹೆಚ್ಚು ಲಿಂಗಗಳಿದ್ದು, 1 ಅಡಿಯಿಂದ 3 ಅಡಿ ಎತ್ತರವಾಗಿದೆ. ಬೃಹತ್ ಶಿವಲಿಂಗ, ನಂದಿಯೂ ಇದೆ. ಪ್ರಧಾನ ದೇವರು ಕೋಟಿಲಿಂಗೇಶ್ವರ. ಇಲ್ಲಿ ಕೋಟಿ ಶಿವಲಿಂಗ ಸ್ಥಾಪಿಸುವ ಉದ್ದೇಶವಿದೆ.



















