Mysore Dasara 2024: ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಮಾಹಿತಿ ಫೋಟೋ ಸಹಿತ ಇಲ್ಲಿದೆ

ವಿಶ್ವ ವಿಖ್ಯಾತ ಮೈಸೂರು ದಸರಾ ಸಿದ್ದತೆ ಬರದಿಂದ ಸಾಗುತ್ತಿದೆ. ಅರಮನೆ ನಗರಿ ಮೈಸೂರಿಗೆ ಮೊದಲ ಹಂತದಲ್ಲಿ ಕ್ಯಾಪ್ಟನ್​ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಬಂದಿವೆ. ದಸರಾ ಆನೆಗಳಿಗೆ ರಾಜಬೀದಿಯಲ್ಲಿ ತಾಲೀಮು ನಡೆಯುತ್ತಿದೆ. ಈ ಆನೆಗಳ ಕುರಿತಾದ ಮಾಹಿತಿ ಫೋಟೋ ಸಹಿತ ಇಲ್ಲಿದೆ.

ರಾಮ್​, ಮೈಸೂರು
| Updated By: ವಿವೇಕ ಬಿರಾದಾರ

Updated on:Aug 26, 2024 | 9:26 AM

Mysore Dasara 2024: Know the information about Mysore Dsarara Elephants

ವಿಶ್ವ ವಿಖ್ಯಾತ ಮೈಸೂರು ದಸರಾ ಸಿದ್ದತೆ ಬರದಿಂದ ಸಾಗುತ್ತಿದೆ. ಅರಮನೆ ನಗರಿ ಮೈಸೂರಿಗೆ ಮೊದಲ ಹಂತದಲ್ಲಿ ಕ್ಯಾಪ್ಟನ್​ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಬಂದಿವೆ. ದಸರಾ ಆನೆಗಳಿಗೆ ರಾಜಬೀದಿಯಲ್ಲಿ ತಾಲೀಮು ನಡೆಯುತ್ತಿದೆ. ಈ ಆನೆಗಳ ಕುರಿತಾದ ಮಾಹಿತಿ ಇಲ್ಲಿದೆ.

1 / 10
Mysore Dasara 2024: Know the information about Mysore Dsarara Elephants

ಅಭಿಮನ್ಯು: ಈ ಆನೆಯನ್ನು 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು, ವಿಶೇಷ ಗುಣವೆಂದರೆ ಕಾಡಾನೆಗಳನ್ನು ಸೆರೆಹಿಡಿಯುವ, ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 140 ರಿಂದ 150 ಕಾಡಾನೆಗಳನ್ನು ಮತ್ತು 40 ರಿಂದ 50 ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. 2012 ರಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, 2015 ರವರೆಗೂ ನಾಡಹಬ್ಬ ಮೈಸೂರು ದಸರಾದಲ್ಲಿ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿಯನ್ನು ನಿರ್ವಹಿಸಿದೆ. ಮತ್ತು ಕಳೆದ 4 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯುತ ಕೆಲಸವನ್ನು ನಿರ್ವಹಿಸುತ್ತಿದೆ. ವಯಸ್ಸು 58, ಎತ್ತರ 2.74, ತೂಕ: 5560 ಕೆಜಿ, ಶಿಬಿರ: ಮತ್ತಿಗೋಡು ಅನೆ ಶಿಬಿರ, ಮಾವುತ: ವಸಂತ ಜೆ ಎಸ್, ಕಾವಾಡಿ: ರಾಜು ಜೆ ಕೆ

2 / 10
Mysore Dasara 2024: Know the information about Mysore Dsarara Elephants

ಏಕಲವ್ಯ: ಈ ಆನೆಯನ್ನು 2022 ರಲ್ಲಿ ಮೂಡಿಗೆರೆ ಅರಣ್ಯ ಪ್ರದೇಶದಲ್ಲಿ ಸರೆಹಿಡಿಯಲಾಗಿದ್ದು, ವಾಹನ ಹಾಗೂ ಪಟಾಕಿಗಳ ಶಬ್ದಗಳಿಗೆ ಅಂಜುವುದಿಲ್ಲ. ಮೊದಲನೇ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ವಯಸ್ಸು: 39, ಎತ್ತರ: 2.88 ಮೀ., ವಯಸ್ಸು: 4730 ಕೆಜಿ, ಶಿಬಿರ: ಮತ್ತಿಗೋಡು ಆನೆ ಶಿಬಿರ, ಮಾವುತ: ಸೃಜನ್, ಮಾವುತ: ಇದಾಯತ್

3 / 10
Mysore Dasara 2024: Know the information about Mysore Dsarara Elephants

ಧನಂಜಯ: ಈ ಆನೆಯನ್ನು 2013ರಲ್ಲಿ ಹಾಸನ ಜಿಲ್ಲೆಯ ಯಸಳೂರು ಅರಣ್ಯವಲಯ ವ್ಯಾಪ್ತಿಯಲ್ಲಿ ಸೆರೆಹಿಡಿಯಲಾಯಿತು. ಯಶಸ್ವಿಯಾಗಿ ಕಾಡಾನೆ ಮತ್ತು ಹುಲಿಗಳನ್ನು ಸೆರಹಿಡಿಯುವ ಕಾರ್ಯಾಚರಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.ಕಳೆದ 6 ವರ್ಷಗಳಿಂದ ದಪರಾ ಮಹೋತ್ಸವದಲ್ಲಿ ಪಟ್ಟದ ಆನೆಯಾಗಿ ಪಾಲ್ಗೊಳ್ಳುತ್ತಿದೆ. ವಯಸ್ಸು: 44, ಎತ್ತರ: 2.80 ಮೀ., ತೂಕ: 5155 ಕೆಜಿ, ಶಿಬಿರ: ದುಬಾರೆ ಆನೆ ಶಿಬಿರ, ಮಾವುತ: ಭಾಸ್ಕರ್ ಜೆ.ಸಿ, ಕಾವಾಡಿ: ರಾಜಣ್ಣ ಜೆ.ಎಸ್,

4 / 10
Mysore Dasara 2024: Know the information about Mysore Dsarara Elephants

ವರಲಕ್ಷ್ಮೀ: ಈ ಆನೆಯನ್ನು 1977ರಲ್ಲಿ ಕಾಕನಕೋಟೆಯಲ್ಲಿ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ. 9 ಬಾರಿ ಅಂಬಾರಿ ಆನೆಯ ಜೊತೆ ಕುಮ್ಮಿ ಆನೆಯಾಗಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಈ ಬಾರಿಯೂ ಸಹ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. ವಯಸ್ಸು: 68, ಎತ್ತರ: 236 ಮೀ, ತೂಕ: 3495, ಶಿಬಿರ: ಭೀಮನಕಟ್ಟೆ ಆನೆ ಶಿಬಿರ, ಮಾವುತ: ರವಿ ಜೆ.ಕೆ., ಕಾವಾಡಿ: ಲವ ಕೆ.ಎಸ್,

5 / 10
Mysore Dasara 2024: Know the information about Mysore Dsarara Elephants

ಭೀಮ: ಈ ಆನೆಯನ್ನು 2000ರಲ್ಲಿ ಭೀಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದಿದ್ದು, ಈ ಆನೆಯನ್ನು ಕಾಡಾನೆ ಮತ್ತು ಹುಲಿಗಳನ್ನು ಸೆರಹಿಡಿಯುವ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದೆ. 2017ನೇ ಸಾಲಿನ ದಸರಾ ಮಹೋತ್ಸವದಲ್ಲಿ ಸಾಲಾನೆಯಾಗಿ ಹಾಗೂ 2022 ರಿಂದ ಪಟ್ಟದಾನೆಯಾಗಿ ಪಾಲ್ಗೊಂಡಿದ್ದು, ಈ ಬಾರಿಯೂ ಸಹ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ವಯಸ್ಸು: 24, ಎತ್ತರ: 2.85 ಮೀ., ತೂಕ: 4925 ಕೆಜಿ, ಶಿಬಿರ: ಮತ್ತಿಗೋಡು ಆನೆ ಶಿಬಿರ, ಮಾವುತ: ಗುಂಡ ಮಾವುತ, ಕಾವಾಡಿ: ನಂಜುಂಡಸ್ವಾಮಿ

6 / 10
Mysore Dasara 2024: Know the information about Mysore Dsarara Elephants

ಲಕ್ಷ್ಮೀ: ತಾಯಿ ಆನೆಯಿಂದ ಬೇರ್ಪಟ್ಟ ಈ ಆನೆಯು 2002ನೇ ಇಸವಿಯಲ್ಲಿ ದೊರಕಿದ್ದು ಇಲಾಖಾ ಆನೆ ಶಿಬಿರದಲ್ಲಿ ಆರೈಕೆ ಮಾಡಲಾಗಿರುತ್ತದೆ. ಕಳೆದ 3 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಈ ಬಾರಿಯ ದಸರಾ ಮಹೋತ್ಸವದಲ್ಲಿಯೂ ಭಾಗವಹಿಸುತ್ತಿದೆ. ವಯಸ್ಸು: 23, ಎತ್ತರ: 2.32, ತೂಕ: 2480, ಶಿಬಿರ: ರಾಮಪುರ ಆನೆ ಶಿಬಿರ, ಮಾವುತ: ಚಂದ್ರ, ಕಾವಾಡಿ: ಕೃಷ್ಣಮೂರ್ತಿ

7 / 10
Mysore Dasara 2024: Know the information about Mysore Dsarara Elephants

ರೋಹಿತ್: ಈ ಆನೆಯು 2001 ರಲ್ಲಿ ಹೆಡಿಯಾಲ ಅರಣ್ಯ ಪ್ರದೇಶದಲ್ಲಿ 06 ತಿಂಗಳ ಮರಿಯಾಗಿದ್ದಾಗ ಸಿಕ್ಕಿರುತ್ತದೆ. ಪ್ರಸ್ತುತ ಆರೋಗ್ಯವಾಗಿದ್ದು, ಕಳೆದ ಸಾಲಿನ ದಸರಾ ಮಹೋತ್ಸವದಲ್ಲಿ ಭಾಗಹಿಸಿರುತ್ತು. ಈ ಬಾರಿಯೂ ಸಹ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತದೆ. ವಯಸ್ಸು: 22, ಎತ್ತರ: 2.70 ಮೀ., ತೂಕ: 3625, ಶಿಬಿರ: ರಾಮಪುರ ಆನೆ ಶಿಬಿರ, ಮಾವುತ: ಸೈಯದ್ ಉಸ್ಕಾನ್, ಕಾವಾಡಿ: ಮಾದು

8 / 10
Mysore Dasara 2024: Know the information about Mysore Dsarara Elephants

ಗೋಪಿ: ಈ ಆನೆಯನ್ನು 1993ರಲ್ಲಿ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿರುತ್ತದೆ. ಸದರಿ ಆನೆಯು ದುಬಾರೆ ಆನೆ ಶಿಬಿರದಲ್ಲಿದ್ದು, 13 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಯಶಸ್ವಿಯಾಗಿ ಭಾಗವಹಿಸಿದೆ. 2015 ರಿಂದ ಪಟ್ಟದ ಆನೆಯಾಗಿ ಅರಮನೆ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸುತ್ತಿದೆ. ವಯಸ್ಸು: 42, ಎತ್ತರ: 2.86 ಮೀಟರ್, ತೂಕ: 4970 ಕೆಜಿ, ಶಿಬಿರ: ದುಬಾರೆ ಆನೆ ಶಿಬಿರ, ಮಾವುತ: ಪಿ.ಬಿ. ನವೀನ್, ಕಾವಾಡಿ: ಶಿವು

9 / 10
Mysore Dasara 2024: Know the information about Mysore Dsarara Elephants

ಕಂಜನ್: ಈ ಆನೆಯನ್ನು 2014ರಲ್ಲಿ ಹಾಸನ ಜಿಲ್ಲೆಯ ಯಸಳೂರು ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಪ್ರಸ್ತುತ ಆರೋಗ್ಯವಾಗಿದ್ದು, ಹುಲಿ ಮತ್ತು ಆನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಸಾಲಿನ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಈ ಬಾರಿಯೂ ಸಹ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. ವಯಸ್ಸು: 25, ಎತ್ತರ: 2.62 ಮೀ, ಶಿಬಿರ: ದುಬಾರೆ ಆನೆ ಶಿಬಿರ ಶಿಬಿರ, ಮಾವುತ: ಜೆ.ಡಿ. ವಿಜಯ್, ಕಾವಾಡಿ: ಕಿರಣ್

10 / 10

Published On - 9:22 am, Mon, 26 August 24

Follow us